Advertisement
3:57 AM Friday 8-December 2023

ಫೆ.13 ಮತ್ತು 14 ರಂದು ಜನ ಜಾಗೃತಿ ಜಾಥ ಹಾಗೂ ಬೃಹತ್ ರಕ್ತದಾನ ಶಿಬಿರ

09/02/2023

ಮಡಿಕೇರಿ ಫೆ.9 :  ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಡಿಕೇರಿ ಐ ಸ್ಟೋರ್ ಮೊಬೈಲ್ ಶೋರೂಂ ಸಂಯುಕ್ತ ಆಶ್ರಯದಲ್ಲಿ  ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ  ಹಾಗೂ ಮಡಿಕೇರಿ ಸ್ನೇಹಿತರ ಬಳಗ,  ರಕ್ತನಿಧಿ ಘಟಕದ ಸಹಯೋಗದಲ್ಲಿ ಮಾದಕ ವಸ್ತುಗಳ ನಿಯಂತ್ರಣದ ಬಗ್ಗೆ ಜನ ಜಾಗೃತಿ ಜಾಥ ಹಾಗೂ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.      

ಫೆ.13 ರಂದು ಬೆಳಗ್ಗೆ 10 ಗಂಟೆಗೆ  ನಗರದ ಎ.ವಿ.ಶಾಲೆಯಿಂದ ಸರ್ಕಾರಿ ಜಿಲ್ಲಾ ಆಸ್ಪತ್ರೆ ವರೆಗೆ ರಕ್ತ  ಹಾಗೂ ಮಾದಕ ವಸ್ತುಗಳ ನಿಯಂತ್ರಣದ ಬಗ್ಗೆ  ಜನ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ.

ಪುಲ್ವಾಮಾ  ದುರಂತದಲ್ಲಿ  ಮೃತಪಟ್ಟ ಯೋಧರ ಸ್ಮರಣಾರ್ಥ ಫೆ.14  ರಂದು ಬೆಳಗ್ಗೆ 10 ಗಂಟೆಯಿಂದ 3 ಗಂಟೆ ವರೆಗೆ ಮಡಿಕೇರಿಯ ಬಾಲಭವನದಲ್ಲಿ  ರಕ್ತದಾನ ಶಿಬಿರ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ 7760830077, 97318 98768, 95359 04296, 9900201001 ಸಂಪರ್ಕಿಸಬಹುದಾಗಿದೆ.