Advertisement
11:39 AM Monday 4-December 2023

ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕಾವೇರಿ ಮನೋಜ್ ಸಾಧನೆ

13/02/2023

ಮಡಿಕೇರಿ ಫೆ.13 : ಮೈಸೂರಿನ ಮಹಾರಾಜ ಇಂಡೋರ್ ಹಾಲ್ ನಲ್ಲಿ ನಡೆದ ವಿ.ಎಸ್.ಕೆ. ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕಾವೇರಿ ಮನೋಜ್ ಕಟ್ಟಾ ವಿಭಾಗದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಇವಳು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ತರಬೇತುದಾರ  ಬಿ.ಎಂ. ಮುಖೇಶ್ ಅವರ ಬಳಿ ತರಬೇತಿ ಪಡೆದಿದ್ದಾಳೆ. ಕಾವೇರಿ ಕಗ್ಗೋಡ್ಲು ಗ್ರಾಮದ ಮಂದ್ರೀರ ಮನೋಜ್ ಹಾಗೂ ವಾಣಿ ಅವರ ಪುತ್ರಿ.