ಕೊಡಗು ಗೌಡ ನಿವೃತ್ತ ನೌಕರರ ಸಂಘದಿಂದ ಮಾ.11 ರಂದು ವಧು-ವರರ ಸಮಾವೇಶ
21/02/2023

ಮಡಿಕೇರಿ ಫೆ.21 : ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಗು ಗೌಡ ಜನಾಂಗ ಬಾಂಧವರ (ಅರಭಾಷಿಗ) ವಧು-ವರರ ಸಮಾವೇಶ ಮಾ.11 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ತಿಳಿಸಿದ್ದಾರೆ.
ಅಂದು ಬೆಳಗ್ಗೆ 9.30 ಗಂಟೆಗೆ ಮಡಿಕೇರಿಯ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಸಮಾವೇಶ ನಡೆಯಲಿದ್ದು, ಆಸಕ್ತರು ತಮ್ಮ ಭಾವಚಿತ್ರ ಮತ್ತು ಇತರ ಎಲ್ಲಾ ಮಾಹಿತಿಗಳೊಂದಿಗೆ ಖುದ್ದಾಗಿ ಭಾಗವಹಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊ.ಸಂ 9449476171, 9739495381 9449086589 ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದ್ದಾರೆ.
