Advertisement
12:30 AM Thursday 7-December 2023

ಪೊನ್ನತ್ಮೊಟ್ಟೆ : ಮಾ.3 ರಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಸೂಪರ್ ಫೈವ್ಸ್ ಫುಟ್ಬಾಲ್ ಪಂದ್ಯಾವಳಿ

23/02/2023

ಮಡಿಕೇರಿ ಫೆ.23 : ಚೆಟ್ಟಳ್ಳಿ ಸಮೀಪದ ಪೊನ್ನತ್ಮೊಟ್ಟೆಯ ಕೂರ್ಗ್ ಹಂಟರ್ಸ್ ಯುವಕರ ಸಂಘದ ವತಿಯಿಂದ 2ನೇ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾವಳಿ ಮಾ.3 ರಿಂದ 5 ವರೆಗೆ ಪೊನ್ನತ್ಮೊಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕೂರ್ಗ್ ಹಂಟರ್ಸ್ ಯುವಕ ಸಂಘದ ಕಾರ್ಯದರ್ಶಿ ಉನೈಸ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಫೆಬ್ರವರಿ 27 ತಂಡಗಳ ನೋಂದಣಿಗೆ ಕೊನೆಯ ದಿನವಾಗಿದೆ.
ಮೊದಲು ನೋಂದಾಯಿತ 50 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು.
ರೂ.1500  ಮುಂಗಡ ಹಣ ಪಾವತಿಸಿ ನೋಂದಣಿ ಮಾಡಿಕೊಂಡ ತಂಡಗಳನ್ನು ಮಾತ್ರ ಟೈಸ್ ಪ್ರಕಿಯೆಯಲ್ಲಿ ಪರಿಗಣಿಸುವುದು. ಪ್ರಥಮ ಬಹುಮಾನ ರೂ.50 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ.30 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಅಲ್ಲದೇ, ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತಿದೆ.
ಮೈದಾನ ಪ್ರವೇಶ ಶುಲ್ಕ ರೂ.3000 ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಉನೈಸ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 7022368775,9611251311, 9448792008 ಸಂಪರ್ಕಿಸಿದ್ದಾರೆ.