Advertisement
4:25 AM Friday 8-December 2023

ಅಪ್ಪಚೆಟ್ಟೋಳಂಡ ಹಾಕಿ ಉತ್ಸವಕ್ಕೆ ಅಗತ್ಯ ಸಹಕಾರ : ಕೇಂದ್ರ ಕ್ರೀಡಾ ಸಚಿವರ ಭರವಸೆ

23/02/2023

ಮಡಿಕೇರಿ ಫೆ.23 : ಕೊಡವ ಕುಟುಂಬಗಳ ನಡುವೆ ಮಾ.17 ರಿಂದ ಏ.10 ರವರೆಗೆ 23 ದಿನಗಳ ಕಾಲ ನಾಪೋಕ್ಲುವಿನಲ್ಲಿ ನಡೆಯುವ ಅಪ್ಪಚೆಟ್ಟೋಳಂಡ ಹಾಕಿ ಉತ್ಸವಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಕೇಂದ್ರ ಕ್ರೀಡೆ, ಯುವ ವ್ಯವಹಾರಗಳು ಮತ್ತು ಮಾಹಿತಿ, ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಭರವಸೆ ನೀಡಿದ್ದಾರೆ.
ಒಲಂಪಿಯನ್ ಡಾ.ಎ.ಬಿ.ಸುಬ್ಬಯ್ಯ ಅವರ ನೇತೃತ್ವದಲ್ಲಿ ಅಪ್ಪಚೆಟ್ಟೋಳಂಡ ಹಾಕಿ ಉತ್ಸವದ ಪ್ರಮುಖರು ಸಚಿವರನ್ನು ಭೇಟಿಯಾಗಿ ಕರಪತ್ರವನ್ನು ನೀಡಿ ಉತ್ಸವಕ್ಕೆ ಆಗಮಿಸುವಂತೆ ಮನವಿ ಮಾಡಿದರು. ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಹಾಕಿ ಉತ್ಸವ ವಿಶ್ವ ದಾಖಲೆ ಗಳಿಸಿರುವ ಬಗ್ಗೆ ವಿವರಿಸಿದರು.
ಕೊಡವ ಹಾಕಿ ಹಬ್ಬದ ವಿಶೇಷತೆಯನ್ನು ಪ್ರಧಾನಮಂತ್ರಿಗಳಿಗೆ ತಿಳಿಸುವುದಾಗಿ ಸಚಿವರು ಭರವಸೆ ನೀಡಿದರು.
ಅಪ್ಪಚೆಟ್ಟೋಳಂಡ ಹಾಕಿ ಉತ್ಸವ ಮಾ.17 ರಿಂದ ಆರಂಭಗೊಳ್ಳಲಿದ್ದು, ಪ್ರತಿದಿನ ಮೂರು ಮೈದಾನಗಳಲ್ಲಿ 24 ಪಂದ್ಯಗಳು ನಡೆಯಲಿವೆ. 2018 ರಲ್ಲಿ 334 ತಂಡಗಳು ಪಾಲ್ಗೊಂಡಿದ್ದು, ಈ ಬಾರಿ 350 ತಂಡಗಳು ಸೆಣಸಾಡುವ ನಿರೀಕ್ಷೆ ಇದೆ ಎಂದು ಅಪ್ಪಚೆಟ್ಟೋಳಂಡ ಹಾಕಿ ಸಮಿತಿ ತಿಳಿಸಿದೆ.