Advertisement
3:50 AM Friday 8-December 2023

ಕಡಗದಾಳು : ಫೆ.25 ರಂದು ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ

23/02/2023

ಮಡಿಕೇರಿ ಫೆ.23 : ಕಾರ್ನರ್ ಫ್ರೆಂಡ್ಸ್ ವತಿಯಿಂದ 9ನೇ ವರ್ಷದ ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಕಡಗದಾಳಿನಲ್ಲಿ ಫೆ.25 ರಂದು ನಡೆಯಲಿದೆ ಎಂದು ಸಂಸ್ಥೆಯ ಸ್ಥಾಪಕ ಎಸ್.ಯು. ಜಲೀಲ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕಡಗದಾಳು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ 2 ಹಂತದ ಪಂದ್ಯಾವಳಿ ನಡೆಯಲಿದ್ದು, ರಾಜ್ಯ ಮಟ್ಟದಲ್ಲಿ ಆಹ್ವಾನಿತ 8 ತಂಡಗಳು ಭಾಗವಹಿಸಲಿವೆ. ಜಿಲ್ಲಾ ಮಟ್ಟದಲ್ಲಿ ನೋಂದಣಿಗೊಂಡ 10 ತಂಡಗಳು ಸೆಣಸಾಡಲಿವೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನವಾಗಿ 15 ಸಾವಿರ ರೂ., ದ್ವಿತೀಯ ಬಹುಮಾನವಾಗಿ 8 ಸಾವಿರ ರೂ., ತೃತೀಯ 5 ಸಾವಿರ ರೂ. ಮತ್ತು ನಾಲ್ಕನೇ ಬಹುಮಾನವಾಗಿ 2,500 ರೂ. ಮತ್ತು ಟ್ರೋಫಿಗಳನ್ನು ನೀಡಲಾಗುತ್ತದೆಂದು ತಿಳಿಸಿದರು.

ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನವಾಗಿ 20 ಸಾವಿರ ರೂ., ದ್ವಿತೀಯ ಬಹುಮಾನವಾಗಿ 12 ಸಾವಿರ ರೂ. ಮತ್ತು ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತದೆ. ತಂಡಗಳಿಗೆ 2 ಸಾವಿರ ರೂ. ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆಯೆಂದು ಹೇಳಿದರು.

ಪಂದ್ಯಾವಳಿಯ ಹೆಚ್ಚಿನ ಮಾಹಿತಿಗಾಗಿ ಸುಜಿನ್ ಮೊ.7760895087, ಪ್ರಭ ಮೊ.9123980041, ಜಲೀಲ್ ಮೊ.9480499802, ಪ್ರಸಾದ್ ಮೊ.9964755139, ದಿನು ಸೋಮಣ್ಣ ಮೊ.9480084330, ಅಯ್ಯಪ್ಪ ಮಾದೆಟ್ಟಿರ ಮೊ.9972658842ವನ್ನು ಸಂಪರ್ಕಿಸಬಹುದೆಂದರು.
ಗೋಷ್ಠಿಯಲ್ಲಿ ಸಂಘದ ಖಜಾಂಜಿ ಪ್ರಸಾದ್, ಸದಸ್ಯರುಗಳಾದ ದಿನು ಸೋಮಣ್ಣ, ದಿಲನ್ ಪಳಂಗಪ್ಪ ಉಪಸ್ಥಿತರಿದ್ದರು.