ದೆಹಲಿಯಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ : ಮಡಿಕೇರಿ ಬ್ರಹ್ಮಕುಮಾರಿ ಶಾಖೆಯ 10 ಜನರ ತಂಡ ಭಾಗಿ
24/02/2023

ಮಡಿಕೇರಿ ಫೆ.24 : ದೆಹಲಿಯಲ್ಲಿ ನಡೆಯಲಿರುವ ವ್ಯಾಪಾರ ಮತ್ತು ಕೈಗಾರಿಕೋದ್ಯಮ ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಮಡಿಕೇರಿಯ ಬ್ರಹ್ಮಕುಮಾರಿ ಶಾಖೆಯ 10 ಜನರ ತಂಡ ತೆರಳುತ್ತಿದ್ದಾರೆ.
ಶಾಖೆಯ ಬ್ರಹ್ಮಕುಮಾರಿ ಸಹೋದರಿ ಧನಲಕ್ಷ್ಮಿ, ರೋಹಿಣಿ, ಸುರೇಶ್ ಕಾರಂತ್, ಬೇಬೆ ಮ್ಯಾಥ್ಯು, ದೇವರಾಜ್, ಕರುಂಬಯ್ಯ, ಪ್ರೇಮ ಕರುಂಬಯ್ಯ, ದೇಚಮ್ಮ, ಕಾವೇರಮ್ಮ, ತೆರೇಸಾ ಮ್ಯಾಥ್ಯು ಅವರಿಗೆ ಬೀಳ್ಕೊಡಲಾಯಿತು.
ದೆಹಲಿಯ ಓಂ ಶಾಂತಿ ರಿಟಿಡ್ ಸೆಂಟರ್‍ನಲ್ಲಿ ಬ್ರಹ್ಮಕುಮಾರಿ ಮಡಿಕೇರಿ ಶಾಖೆಯ ಜಿಲ್ಲಾ ಸಂಚಾಲಕರಾದ ಬ್ರಹ್ಮಕುಮಾರಿ ಗಾಯತ್ರಿಜೀ ಅವರ ಪ್ರೇರಣೆಯಿಂದ 3 ದಿನಗಳ ಕಾಲ ವಿಚಾರ ಸಂಕಿರಣ ನಡೆಯಲಿದೆ.
