Advertisement
12:59 AM Thursday 7-December 2023

ಅಂದಗೋವೆ : ಮಾ.10 ಮತ್ತು 11 ರಂದು ಪಾಷಾಣಮೂರ್ತಿ ಮತ್ತು ಪರಿವಾರ ದೇವತೆಗಳ ನೇಮೋತ್ಸವ

24/02/2023

ಸುಂಟಿಕೊಪ್ಪ,ಫೆ.24 : 7ನೇ ಹೊಸಕೋಟೆ ಗ್ರಾ.ಪಂ ವ್ಯಾಪ್ತಿಯ ಅಂದಗೋವೆ ಮೆಟ್ನಳ್ಳ ಗ್ರಾಮದ ಅಮ್ಮನವರು, ಭೈರವೇಶ್ವರ, ಪಾಷಾಣಮೂರ್ತಿ ಮತ್ತು ಪರಿವಾರ ದೇವತೆಗಳ ಸನ್ನಿದಾನದ ಪ್ರಥಮ ವರ್ಷದ ನೇಮೋತ್ಸವವು ಮಾ.10 ಮತ್ತು 11 ರಂದು ನಡೆಯಲಿದೆ.
ಮಾ. 10 ರಂದು ಸಂಜೆ 6 ಗಂಟೆಗೆ ಭಂಡಾರ ಇಳಿಸುವುದು, ರಾತ್ರಿ 8 ಗಂಟೆಗೆ ಪಂಜುರ್ಲಿ ದೈವದ ನೇಮ, 10 ಗಂಟೆಯಿಂದ ಕಲ್ಕುಡ ಮತ್ತು ಪಾಷಾಣಮೂರ್ತಿ ದೈವಗಳ ನೇಮ, ಮಂತ್ರ ದೇವತೆ, ಮೈಯಾಂತಿ, ರಾಹುಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ. ರಾತ್ರಿ ಅನ್ನ ಸಂತರ್ಪಣೆ ಜರುಗಲಿದೆ.
ಮಾ.11 ರಂದು ಬೆಳಿಗ್ಗೆ 8.30 ಕ್ಕೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ.