Advertisement
12:47 AM Thursday 7-December 2023

ಮುಳ್ಳುಸೋಗೆ ಶ್ರೀ ಗೌರಿ ಗಣೇಶ ದೇವಾಲಯದ ವಾರ್ಷಿಕೋತ್ಸವ

24/02/2023

ಕುಶಾಲನಗರ, ಫೆ.24 : ಕುಶಾಲನಗರ ತಾಲೂಕು ಮುಳ್ಳುಸೋಗೆ ಗ್ರಾಮದ ಶ್ರೀ ಗೌರಿ ಗಣೇಶ ದೇವಾಲಯ 4ನೇ ವಾರ್ಷಿಕೋತ್ಸವ  ಎರಡು ದಿನಗಳ ಕಾಲ ಭಕ್ತಿ ಭಾವಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.
 ವಾರ್ಷಿಕೋತ್ಸವ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರಗಿದವು. ನಂತರ ಮಹಾಮಂಗಳಾರತಿ, ಅನ್ನದಾನ ಕಾರ್ಯಕ್ರಮ ನಡೆಯಿತು . ಕುಶಾಲನಗರ ದೇವಾಲಯಗಳ ಒಕ್ಕೂಟ ಸಮಿತಿಯ ಪ್ರತಿನಿಧಿಗಳು ಫಲ ತಾಂಬೂಲದೊಂದಿಗೆ  ಸಾಮೂಹಿಕ ಪೂಜೆಯಲ್ಲಿ ಪಾಲ್ಗೊಂಡರು.
 ಭಕ್ತಾದಿಗಳ ಸಹಕಾರದೊಂದಿಗೆ ದೇವರಿಗೆ ಅಂದಾಜು 4 ಲಕ್ಷ ರು. ಮೌಲ್ಯದ ಬೆಳ್ಳಿ ಕವಚ ಅರ್ಪಣೆ ಕಾರ್ಯ ನಡೆಯಿತು.
 ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರಾದ ಸುಚಿತ್ರ ತಮ್ಮಯ್ಯ, ಉಪಾಧ್ಯಕ್ಷರಾದ ಜ್ಯೋತಿ, ಕಾರ್ಯದರ್ಶಿ ರಾಧಾ, ಖಜಾಂಚಿ ಚಂದ್ರಿಕಾ, ಸಂಚಾಲಕರಾದ ವಿಜಿ ಮತ್ತಿತರರು ಇದ್ದರು.