Advertisement
10:42 AM Sunday 3-December 2023

ಮೂರ್ನಾಡು : ‘ಸ್ವಜಾತಿ ಬಂಧುಗಳ ಸಮ್ಮಿಲನ – 2023’ ಕಾರ್ಯಕ್ರಮಕ್ಕೆ ಚಾಲನೆ

25/02/2023

ಮೂರ್ನಾಡು ಫೆ.25 : ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ‌ ಎರಡು ದಿನ ಕಾಲ ಹಮ್ಮಿಕೊಂಡಿರುವ ‘ಸ್ವಜಾತಿ ಬಂಧುಲೆನ ಸಮ್ಮಿಲನ-2023’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮೂರ್ನಾಡು ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸಮುದಾಯದ ಎಲ್ಲರು ಒಟ್ಟು ಸೇರಲು ಮೂರ್ನಾಡು ಹೋಬಳಿ ಘಟಕ ವೇದಿಕೆ ಒದಗಿಸಿರುವುದು ಖುಷಿಯ ವಿಚಾರ ಎಂದರು.
ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ಮೂರ್ನಾಡು ಹೋಬಳಿ ಘಟಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜಿಲ್ಲೆಯ ಎಲ್ಲಾ ಹೋಬಳಿಯೂ ಈ ರೀತಿ ಚಟುವಟಿಕೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಮಡಿಕೇರಿ ತಾಲೂಕು ಘಟಕ ಅಧ್ಯಕ್ಷ ರಮೇಶ್ ರೈ ಮಾತನಾಡಿ, ಜಿಲ್ಲೆಯಲ್ಲಿ ಬಂಟರ ಸಂಘಟನೆ ಆರಂಭವಾದಾಗ ಜನ ಕಡಿಮೆ ಸಂಖ್ಯೆಯಲ್ಲಿ ಸೇರುತ್ತಿದ್ದರು. ಮೂರ್ನಾಡು ಹೋಬಳಿ ಘಟಕದವರು ಬಂಟರ ಸಂಘಟನೆಯನ್ನು ಜೀವಂತವಾಗಿರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂರ್ನಾಡು ಹೋಬಳಿ ಘಟಕ ಅಧ್ಯಕ್ಷ ಬಿ.ಕೆ.‌ ಚಂದ್ರಶೇಖರ್ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಖಜಾಂಚಿ ಬಿ.ಎನ್. ರತ್ನಾಕರ ರೈ, ಸಹಕಾರ್ಯದರ್ಶಿಗಳಾದ ಬಿ.ಸಿ.‌ ಹರೀಶ್ ರೈ, ಬಿ.ಜೆ. ಮನೋಜ್ ಶೆಟ್ಟಿ, ನಿರ್ದೇಶಕ ಬಿ.ಕೆ. ಬಾಲಕೃಷ್ಣ ರೈ, ಮಡಿಕೇರಿ ತಾಲೂಕು ಘಟಕ ಕಾರ್ಯದರ್ಶಿ ವಿಠಲ ರೈ, ಖಜಾಂಚಿ ದಿವೇಶ್ ರೈ, ಯುವ ಬಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಚಂದ್ರಶೇಖರ ರೈ, ಖಜಾಂಚಿ ಜಗನ್ನಾಥ್ ರೈ, ಮಡಿಕೇರಿ ತಾಲೂಕು ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ಬಿ.ಎಚ್. ರುಕ್ಮಿಣಿ ರೈ, ಉದ್ಯಮಿ ಅಶೋಕ್ ಶೆಟ್ಟಿ, ಕೃಷಿಕ ಲೀಲಾಧರ ರೈ ನೀಲುಮಾಡು ವೇದಿಕೆಯಲ್ಲಿದ್ದರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು.