Advertisement
4:45 AM Friday 8-December 2023

ಚೆಟ್ಟಳ್ಳಿ : ಫೆ.28 ರಿಂದ ಚೇರಳ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವ ಆರಂಭ

27/02/2023

ಮಡಿಕೇರಿ ಫೆ.27 :  ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವವು ಫೆ.28 ರಿಂದ ಮಾ.5ರ ವರೆಗೆ ನಡೆಯಲಿದೆ ಎಂದು  ದೇವಾಲಯದ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.

ಫೆ.28 ರಂದು  ಪೂರ್ವಾಹ್ನ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಊರಿನವರೆಲ್ಲ ಸೇರಿ ದೇವಾಲಯದಲ್ಲಿ ಬೊಳಕ್‌ಮರ ನಿಲ್ಲಿಸಿ, ಹಬ್ಬಕಟ್ಟು ಬೀಳುವುದು. ನಂತರ ಮೂರುದಿನ ಬೆಳಿಗ್ಗೆ ದೇವಾಲಯದಲ್ಲಿ ಕೊಂಬಾಟ್ ನೆರವೇರಲಿದೆ.

ಮಾ.3 ರಂದು ಪಟ್ಟಣಿ ಹಬ್ಬ ನಡೆಯಲಿದ್ದು, ದೇವರ ಬನಕ್ಕೆ ಕಲ್ಡಾಚ ಹೋಗಿ ಹೆಣ್ಣುಮಕ್ಕಳು ಪಾಯಸಮಾಡಿ ಅಯ್ಯಪ್ಪದೇವರ ಭನದಲ್ಲಿ ನೈವೇದ್ಯ ವಿಟ್ಟು ಬರುವುದು. ಮಧ್ಯಾಹ್ನ 3 ಗಂಟೆಗೆ ಕೊಂಗೇಟಿರ ಐನ್ ಮನೆ ಯಿಂದ ತಕ್ಕರು ಊರಿನವರು ದೇವತಕ್ಕರ ಮನೆಗೆ ಬಂದು ಫಲಹಾರ ಸ್ವೀಕರಿಸಿ, ದೇವರ ಭಂಡಾರವನ್ನು ದೇವತಕ್ಕರ ಮನೆಯಿಂದ ದೇವಾಲಕ್ಕೆತರುವುದು. ದೇವಾಲಯದಲ್ಲಿ ಪೂಜಾ ಕೈಂಕರ್ಯ ನಡೆದು ಕೋಂಬಾಟ್ ನೇರವೇರಲಿದೆ. ನಂತರ ದೇವರ ಭಂಡಾರವನ್ನು  ಮನೆಗೆ ತರಲಾಗುವುದು.
ಮಾ.4 ರಂದು  ಅಯ್ಯಪ್ಪ ಬನದಲ್ಲಿ ಪೂಜಾ ಕಾರ್ಯಕ್ರಮ ನಡೆದು ಊರಿನವರು ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ದೇವಾಲಯಕ್ಕೆ ಬಂದು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ದೇವರಕಟ್ಟನ್ನು ಮುರಿದು ಕೊಂಬಾಟ್ ನೆರವೇರಲಿದೆ.
ಮಾ.5 ರಂದು ದೊಡ್ಡಹಬ್ಬ ನೆರವೇರಲಿದ್ದು, ಅಂದು ಅಪರಾಹ್ನ3 ಗಂಟೆಗೆ ಊರಿನವರು ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರಾದ ಚೇರಳತಮ್ಮಂಡ ಆನಂದ ಅವರ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತರುವುದು.  ನಂತರ  ಭಗವತಿದೇವಿಗೆ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆ ಜರುಗಲಿದೆ.

ನಂತರ   ದೇವರ ಸನ್ನಿಧಿಯಲ್ಲಿಟ್ಟಂತ ಜಿಂಕೆ ಕೊಂಬನ್ನಿಡಿದು 18 ತರಹದ ಕೊಂಬಾಟ್‌ ನೃತ್ಯ , ಪ್ರಸಾದ ವಿತರಣೆ, ಊಟೋಪಚಾರದ ನಂತರ ದೇವರ ಭಂಡಾರವನ್ನು ತಕ್ಕರ ಮನೆಗೆ ಒಪ್ಪಿಸಲಾಗುವುದೆಂದು ದೇವತಕ್ಕರಾದ ಚೇರಳ ತಮ್ಮಂಡ ಆನಂದ ಹಾಗೂ ತಕ್ಕರಾದ ಕೊಂಗೇಟಿರ ಹರೀಶ್‌ ಅಪ್ಪಣ್ಣ ತಿಳಿಸಿದ್ದಾರೆ.

ವರದಿ :  ಕರುಣ್ ಕಾಳಯ್ಯ