Advertisement
10:24 AM Sunday 3-December 2023

16ನೇ ಕನ್ನಡ ಸಾಹಿತ್ಯ‌ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ 

27/02/2023

ಮಡಿಕೇರಿ ಫೆ.27 :  16ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಮಾ.4 ಮತ್ತು 5 ರಂದು ಗೋಣಿಕೊಪ್ಪಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿದೆ‌.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಮೈಸೂರಿನ ಯುವರಾಜ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ  ಡಾ.ಎಂ.ಪಿ.ರೇಖಾ ಅವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಸಮ್ಮೇಳನದ ಸ್ವಾಗತ ಸಮಿತಿಯ ಮಹಾಪ್ರಧಾನ ಕಾರ್ಯದರ್ಶಿ ಕೋಳೆರ ದಯಾ ಚಂಗಪ್ಪ, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಹೋಬಳಿ ಗೌರವ ಕಾರ್ಯದರ್ಶಿ ಟಿ.ಬಿ.ಜೀವನ್, ಕೋಶಾಧಿಕಾರಿ ಎಂ.ಕೆ.ಚಂದನ್ ಕಾಮತ್, ಮೈಸೂರಿನ ಡಾ. ಎಂ.ಪಿ.ರೇಖಾ ಅವರ ಮನೆಯಲ್ಲಿ  ಸನ್ಮಾನಿಸಿ ಸರ್ವಾಧ್ಯಕ್ಷ ಸ್ಥಾನ ವಹಿಸಿಕೊಂಡು ಸಮ್ಮೇಳನವನ್ನು ನಡೆಸಿಕೊಡಲು ವಿನಂತಿಸಿಕೊಂಡರು.

ಈ ಸಂದರ್ಭ  ಎಂ.ಪಿ ರೇಖಾ ಅವರು ತಾನು ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮುಗಿಸಿದ ಊರಿನಲ್ಲಿ ನನಗೆ ಸಿಗುತ್ತಿರುವ  ಗೌರವ ತುಂಬ ಖುಷಿ ತಂದಿದೆ ಎಂದರು. ಡಾ. ಎಂ.ಪಿ.ರೇಖಾ ಅವರ ಪುತ್ರಿ ವರ್ಣಾ ಮಾಚಮ್ಮ ಉಪಸ್ಥಿತರಿದ್ದರು.