Advertisement
2:43 AM Saturday 2-December 2023

ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೈವೆಗೆ ಕಾವೇರಿ ಮಾತೆ ಹೆಸರು : ಶಾಸಕ ಕೆಜಿಬಿ ಮನವಿ

27/02/2023

ಮಡಿಕೇರಿ ಫೆ.27 : ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೈವಗೆ ಕಾವೇರಿ ಎಕ್ಸ್‌ಪ್ರೆಸ್ ಹೈವ ಎಂದು ಹೆಸರಿಡಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ಮನವಿ ಪತ್ರ ಬರೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 275 ಬೆಂಗಳೂರು, ಮೈಸೂರು, ಮಡಿಕೇರಿಗೆ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾಗಿದೆ. ಈಗಾಗಲೇ ಮೈಸೂರು, ಬೆಂಗಳೂರು ತಲುಪುವ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಕಾವೇರಿ ನದಿಯು ಕೊಡಗಿನಲ್ಲಿ ಹುಟ್ಟಿ ತಮಿಳುನಾಡು ಸೇರಿದಂತೆ ಮೈಸೂರು ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತಿದೆ. ಕೊಡಗು ಸೇರಿದಂತೆ ಈ ಭಾಗದ ಎಲ್ಲಾ ಜನರಿಗೆ ಕಾವೇರಿ ನದಿಯು ಕಾವೇರಿ ಮಾತೆ ಎಂದು ಪೂಜ್ಯ ಭಾವನೆ ಇರುತ್ತದೆ. ಹಾಗಾಗಿ ಜನರ ಪೂಜ್ಯ ಭಾವನೆ ಗುರುತಿಸಲು ಕನ್ನಡ ನಾಡಿಗೆ ಅನ್ನದಾತೆಯಾಗಿರುವ ಕೊಡಗಿನ ಕಾವೇರಿ ಮಾತೆಯ ಹೆಸರನ್ನು ಹೆದ್ದಾರಿಗೆ ಇಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.