Advertisement
3:12 AM Saturday 2-December 2023

ಸಾಮಾನ್ಯ ಜ್ಞಾನ ಪರೀಕ್ಷೆ : ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

27/02/2023

ಮಡಿಕೇರಿ ಫೆ.27 :  ಚಿತ್ರದುರ್ಗ ನವೋದಯ ಪ್ರಕಾಶದ ವತಿಯಿಂದ ನಡೆಸಲಾದ ಸಾಮಾನ್ಯ ಜ್ಞಾನ ಪರೀಕ್ಷೆ, ಗಣಿತ ಪ್ರತಿಭಾನ್ವೇಷಣಾ ಪರೀಕ್ಷೆ, ಹಾಗೂ ಚಿತ್ರಕಲಾ ಪರೀಕ್ಷೆಗಳಲ್ಲಿ  ಕೊಟ್ಟೂರು-ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಎಂ.ಪಿ.ಧನ್ವಿ ರಾಷ್ಟ್ರಮಟ್ಟದ ಶ್ರೇಣಿಯನ್ನುಗಳಿಸಿ ಸಾಧನೆ ಮಾಡಿದ್ದು, ಹನ್ಸಿಕಾ ರಾಜ್ಯಮಟ್ಟದ ಶ್ರೇಣಿಯನ್ನು ಗಳಿಸಿದ್ದಾಳೆ.

ಗಣಿತ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ  ಕೆ.ಕೆ.ಇಂಚರ ರಾಜ್ಯಮಟ್ಟದ ಶ್ರೇಣಿಗಳಿಸಿದ್ದು, ಚಿತ್ರಕಲಾ ಸ್ಪರ್ಧೆಯಲ್ಲಿ ಕೆ.ಎಸ್.ವೃಷ್ಟಿ ರಾಷ್ಟ್ರಮಟ್ಟದ ಶ್ರೇಣಿಯನ್ನು ಗಳಿಸಿದ್ದಾಳೆ. ಎಂ.ಎ.ಜನನಿ ರಾಜ್ಯಮಟ್ಟದ ಶ್ರೇಣಿಯನ್ನು ಗಳಿಸಿ ಸಾಧನೆಯನ್ನು ಮಾಡಿದ್ದಾರೆ.

ಮಾರ್ಗದರ್ಶಕರಾಗಿ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶಿಕ್ಷಕಿ ಜಸ್ಮಿ ಹಾಗೂ ಟೀನಾ ಕಾರ್ಯನಿರ್ವಹಿಸಿದ್ದಾರೆ.