ಸೋಮವಾರಪೇಟೆ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಸಭೆ
27/02/2023

ಸೋಮವಾರಪೇಟೆ ಫೆ.27 : ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವಾರ್ಷಿಕ ಮಹಾಸಭೆಯು ಸ್ಥಳೀಯ ಕೊಡವ ಸಮಾಜದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಎಚ್.ಕೆ.ಗಂಗಾಧರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಹೊಸ ಸದಸ್ಯತ್ವ ಶುಲ್ಕ, ಸಂಘದ ಸದಸ್ಯರ ವೈದ್ಯಕೀಯ ವೆಚ್ಚ, ಮರಣ ನಿಧಿ ವಂತಿಗೆ ಕುರಿತು ಚರ್ಚೆ ನಡೆಯಿತು. ಸಂಘದ ಅಭಿವೃದ್ಧಿ ಕುರಿತು ಹಿರಿಯ ಸದಸ್ಯರುಗಳು ಸಲಹೆ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಟಿ.ಎಂ.ಅಬ್ದುಲ್ ಕರೀಂ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜನಾರ್ಧನ್, ಉಪ ಕಾರ್ಯದರ್ಶಿ ರಮೇಶ್,ಖಜಾಂಚಿ ಸುದೀಪ್ ಆಲ್ಬರ್ಟ್, ಸಹ ಕಾರ್ಯದರ್ಶಿ ಪ್ರಭಾಕರ್ ಸೇರಿದಂತೆ ಮಾಜಿ ಅಧ್ಯಕ್ಷರುಗಳು, ಗೌರವ ಸಲಹೆಗಾರರು ಇದ್ದರು.
