Advertisement
4:25 AM Friday 8-December 2023

ಮಾ.25 ರಂದು “ಜಿಲ್ಲಾ ಯುವ ಉತ್ಸವ” : ವಿವಿಧ ಸ್ಪರ್ಧಾ ಕಾರ್ಯಕ್ರಮ

01/03/2023

ಮಡಿಕೇರಿ ಮಾ.1 : ಜಿಲ್ಲೆಯ ಯುವಕ, ಯುವತಿಯರಿಗಾಗಿ ಮಾ.25 ರಂದು “ರಾಷ್ಟ್ರೀಯ ಏಕತೆ ಹಾಗೂ ಒಗ್ಗಟ್ಟು ಎಂಬ ವಿಷಯದಡಿ” ಜಿಲ್ಲಾ ಮಟ್ಟದ “ಜಿಲ್ಲಾ ಯುವ ಉತ್ಸವ” ಎಂಬ ವಿನೂತನ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಭಾರತ ಸರ್ಕಾರ, ನೆಹರು ಯುವ ಕೇಂದ್ರ, ಯುವ ಜನ ವ್ಯವಹಾರ ಕ್ರೀಡಾ ಸಚಿವಾಲಯ, ಮಡಿಕೇರಿ ಕೊಡಗು. ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು, ಜಿಲ್ಲಾ ಯುವ ಒಕ್ಕೂಟ ಕೊಡಗು, ಮಡಿಕೇರಿ ತಾಲ್ಲೂಕು ಯುವ ಒಕ್ಕೂಟ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ 15 ವರ್ಷದಿಂದ 29 ವರ್ಷ ವಯೋಮಿತಿಯ ಜಿಲ್ಲೆಯ ಯುವಕ, ಯುವತಿಯರಲ್ಲಿರುವ ವಿವಿಧ ಪ್ರತಿಭೆಗಳ ಅನಾವರಣಕ್ಕೆ ಸ್ಪರ್ಧೆ ನಡೆಸಲಾಗುತ್ತಿದ್ದು, ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ಹಾಗೂ ಆಕರ್ಷಕ ಪಾರಿತೋಷಕ ನೀಡಲಾಗುವುದೆಂದು ತಿಳಿಸಿದರು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದವರು ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಭಾಗವಹಿಸಬಹುದಾಗಿದ್ದು, ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರು, ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದುರು.
ಇದು ಸ್ಪರ್ಧಾ ಕಾರ್ಯಕ್ರಮ ಮಾತ್ರವಲ್ಲದೆ ಸ್ಥಳೀಯ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶವಾಗಿದೆ. ಅಲ್ಲದೆ ಮನೋರಂಜನೆ, ಸಾಮಾಜಿಕ ಸಂದೇಶವನ್ನು ಯುವ ಜನರಿಗೆ ಮುಟ್ಟಿಸುವ ಕೆಲಸ ನಡೆಯಲಿದೆ.

ಸ್ಪರ್ಧಾ ಕಾರ್ಯಕ್ರಮಗಳು : : ಯುವ ಕಲಾವಿದರ ಚಿತ್ರಾಕಲಾ ಸ್ಪರ್ಧೆ ಗೆ ಜಿಲ್ಲೆಯ 30 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, 1 ಗಂಟೆ ನಿಗಧಿಪಡಿಸಲಾಗಿದೆ. ಚಿತ್ರ ಬಿಡಿಸಲು ಪರಿಕಾರಗಳನ್ನು ಸ್ಪರ್ಧಿಗಳೆ ತರತಕ್ಕದು.

ಮೊಬೈಲ್ ಛಾಯಾಗ್ರಹಣ ಸ್ಪರ್ಧೆಯಲ್ಲಿ 30 ಜನರಿಗೆ ಅವಕಾಶ ಕಲ್ಪಿಸಲಾಗಿದ್ದು, 2 ಗಂಟೆ ನಿಗಧಿಪಡಿಸಲಾಗಿದೆ. ಯುವ ಬರಹಗಾರರಿಗೆ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಕವಿತೆ ರಚನೆ ಮಾಡುವ ಸ್ಪರ್ಧೆ ನಡೆಯಲಿದ್ದು, 45 ನಿಮಿಷಗಳ ಅವಕಾಶ ಕಲ್ಪಿಸಲಾಗಿದೆ.
ಭಾಷಣ ಸ್ಪರ್ಧೆಗೆ ಸ್ಥಳದಲ್ಲೆ ವಿಷಯವನ್ನು ನೀಡಲಾಗುವುದು. ಇದು ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ನಡೆಸಲಾಗುತ್ತದೆ. ಸಮಯ 7 ನಿಮಿಷ. 10 ಜನರಿಗೆ ಅವಕಾಶ.
ಸಾಂಸ್ಕೃತಿಕ  ಉತ್ಸವ -ಜಾನಪದ ನೃತ್ಯ ಇದು ಗುಂಪು ಸ್ಪರ್ಧೆಯಾಗಿದ್ದು, ಜಿಲ್ಲೆಯ 10 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ತಂಡದಲ್ಲಿ ಕನಿಷ್ಟ 10 ಜನ ಇರತಕ್ಕದು ಸಮಯ ಅವಕಾಶ 8 ನಿಮಿಷ ಆಗಿರುತ್ತದೆ.

ಈ ಎಲ್ಲಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಒಬ್ಬರಿಗೆ ಒಂದು ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಸಂಘಟಕರು ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ. ಭಾಗವಹಿಸುವ ತಂಡಗಳಿಗೆ ಯಾವುದೇ, ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ಊಟದ ವ್ಯವಸ್ಥೆಯನ್ನು ಮಾಡಲಾಗುವುದು.

ಭಾಗವಹಿಸುವ ಸ್ಪರ್ಧಾಳುಗಳು ನೆಹರು ಯುವ ಕೇಂದ್ರ ಮಡಿಕೇರಿ ಇಲ್ಲಿಂದ ನೇರವಾಗಿ ಅಥವಾ ವಾಟ್ಸಪ್ ಮುಖಾಂತರ ಕಡ್ಡಾಯವಾಗಿ ನೋಂದಾಣಿ ಮಾಡಬೇಕಾಗುತ್ತದೆ. ನೋಂದಾಣಿಗೊಂಡವರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ನೋಂದಾವಣಿ ಮಾಡಲು ಮಾ.20 ಕೊನೆಯ ದಿನವಾಗಿದ್ದು, ಇ-ಮೇಲ್ nykkodaguprogram@gmail.com  ವಾಟ್ಸಪ್ ನಂಬರ್ 9591303604 ಗೆ ಕಳುಹಿಸಬಹುದಾಗಿದೆ.ಹೆಚ್ಚಿನ ವಿವರಗಳಿಗಾಗಿ 9481213920, 9449759029, 9480646382 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.