ತೋಟದಲ್ಲಿ ಕಾಡುಕೋಣವನ್ನು ಬೇಟೆಯಾಡಿದ ವ್ಯಾಘ್ರ
01/03/2023

ಮಡಿಕೇರಿ ಮಾ.1 : ಹುಲಿಯೊಂದು ಕಾಫಿ ತೋಟದಲ್ಲಿ ಕಾಡುಕೋಣವನ್ನು ಬೇಟೆಯಾಡಿರುವ ಘಟನೆ ಪಾಲಿಬೆಟ್ಟ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.
ಕಾರ್ಮಿಕರು ಕೆಲಸಕ್ಕೆಂದು ತೋಟಕ್ಕೆ ಆಗಮಿಸಿದ ಸಂದರ್ಭ ಕಾಡುಕೋಣ ಮೃತಪಟ್ಟಿರುವುದು ಕಂಡು ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಹುಲಿದಾಳಿಯ ಕುರಿತು ಸಂಶಯ ವ್ಯಕ್ತಪಡಿಸಿದರು. ಮಂಗಳವಾರ ತಡರಾತ್ರಿ ಕಾಡುಕೋಣದ ಮೇಲೆ ಹುಲಿದಾಳಿ ಮಾಡಿರಬಹುದೆಂದು ಅಂದಾಜಿಸಲಾಗಿದೆ.
ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಹುಲಿ ಸಂಚರಿಸುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
