ಸೋಮವಾರಪೇಟೆ : ‘ಒಕ್ಕಲಿಗರ ಕಪ್’ ಅಂತರರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿ

ಸೋಮವಾರಪೇಟೆ ಮಾ.1 : ಒಕ್ಕಲಿಗರ ಯುವವೇದಿಕೆ ಸೋಮವಾರಪೇಟೆ, ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅವರುಗಳ ಸಂಯುಕ್ತ ಆಶ್ರಯದಲ್ಲಿ 4ನೇ ವರ್ಷದ ‘ಒಕ್ಕಲಿಗರ ಕಪ್’ ಅಂತರ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿ ಮಾ.4 ಮತ್ತು 5ರಂದು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್ ಹೇಳಿದರು.
ಪಂದ್ಯಾಟದಲ್ಲಿ ರಾಷ್ಟçಮಟ್ಟದ ಪ್ರತಿಷ್ಠಿತ ತಂಡಗಳಾದ ಮಹರಾಷ್ಟ, ರ‍್ಯಾಣ, ಯುವ ಪಲ್ಟಾನ್ ಪುಣೆ, ಸೌತ್‌ಸೆಂಟ್ರಲ್ ರೈಲ್ವೆ ಹೈದರಾಬಾದ್, ತಮಿಳುನಾಡು, ಜೆ.ಕೆ.ಅಕಾಡೆಮಿ ಕೇರಳ, ಏರ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಕರ್ನಾಟಕ ಪೊಲೀಸ್, ಕಸ್ಟಮ್ಸ್ ಮತ್ತು ಜಿಎಸ್‌ಟಿ ತಂಡ, ಕರ್ನಾಟಕ ತಂಡ, ಚೈನ್ಸ್ ಪ್ರತಿಷ್ಠಿತ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಕಬಡ್ಡಿ ಪ್ರೇಮಿಗಳಿಗೆ ರಸದೌತಣ ನೀಡಲಿವೆ ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರೊ ಕಬಡ್ಡಿಯಲ್ಲಿ ಖ್ಯಾತಿ ಗಳಿಸಿರುವ ಆಟಗಾರರಾದ ಸಿದ್ದಾರ್ಥ್ ದೇಸಾಯಿ, ಅಜಯ್ ಠಾಕೂರ್, ಸುಕೇಶ್‌ಹೆಗಡೆ, ಪ್ರಶಾಂತ್ ರೈ, ಆಕಾಶ್‌ಶಿಂದೆ, ಪ್ರಪಂಚನ್, ಅಸ್ಲಾಂ ಇನಾಂದರ್, ಶ್ರೀಕಾಂತ್ ಜಾದವ್, ಅಜಿತ್, ಚಂದ್ರನ್ ರಂಜಿತ್ ಮತ್ತಿತರ ಆಟಗಾರರು ಭಾಗವಹಿಸಲಿದ್ದಾರೆ.
ಪ್ರಥಮ ಬಹುಮಾನ 2ಲಕ್ಷ ರೂ.ಗಳು, ದ್ವಿತೀಯ 1ಲಕ್ಷ ರೂ, ತೃತೀಯ ಮತ್ತು ಚತುರ್ಥ ಬಹುಮಾನ 50ಸಾವಿರ ರೂ, ನಗದು ಹಾಗು ಅಕರ್ಷಕ ಟ್ರೋಫಿ ನೀಡಲಾಗುತ್ತದೆ.
4 ರ ಶನಿವಾರ 11ಗಂಟೆಗೆ ಕ್ರೀಡಾಪಟು ಕೆ.ಎ.ಪ್ರಕಾಶ್ ನೇತೃತ್ವದಲ್ಲಿ ಕ್ರೀಡಾಜ್ಯೋತಿಯನ್ನು ಮೈದಾನ ತರಲಾಗುತ್ತದೆ. ನಂತರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಗಳು ನಡೆಯಲಿವೆ. ವಿಜೇತ ತಂಡಗಳಿಗೆ ನಗದು ಹಾಗು ಟ್ರೋಫಿ ವಿತರಿಸಲಾಗುತ್ತದೆ. ರಾತ್ರಿ ಅಂತಾರಾಜ್ಯ ಮಟ್ಟದ ಪಂದ್ಯಾಟಗಳು ನಡೆಯಲಿದೆ
10 ಸಾವಿರ ಜನರ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗಾಗಿ ಕೆ.ಬಿ.ಸುರೇಶ್ 9448433294 ಸಂಪರ್ಕಿಸಬಹುದು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಎಚ್.ಕೆ.ಪೃಥ್ವಿ, ಕಾರ್ಯದರ್ಶಿ ಯೋಗೇಂದ್ರ ಚೌಡ್ಲು, ಪದಾಧಿಕಾರಿಗಳಾದ ಎಚ್.ಕೆ.ತ್ರಿಶೂಲ್, ಡಿ.ಎ.ದೇವರಾಜ್ ಇದ್ದರು.
