ವಿರಾಜಪೇಟೆ : ಫಲಾನುಭವಿಗಳಿಗೆ ಪವರ್ ಟಿಲ್ಲರ್ ವಿತರಣೆ
02/03/2023

ಮಡಿಕೇರಿ ಮಾ.2 : ಕೃಷಿ ಇಲಾಖೆ ವತಿಯಿಂದ ಸರಕಾರದ ಸಹಾಯಧನದಲ್ಲಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನ 14 ರೈತ ಫಲಾನುಭವಿಗಳಿಗೆ ಪವರ್ ಟಿಲ್ಲರ್ ಮಂಜೂರು ಮಾಡಲಾಗಿದ್ದು, ವಿರಾಜಪೇಟೆ ತಾಲ್ಲೂಕು ಕೃಷಿ ಇಲಾಖೆ ಆವರಣದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಸಾಂಕೇತಿಕವಾಗಿ 4 ರೈತ ಫಲಾನುಭವಿಗಳಿಗೆ ಪವರ್ ಟಿಲ್ಲರ್ ನ್ನು ವಿತರಿಸಲಾಯಿತು.
