ಸ್ವಾಥ೯ ಮೀರಿದ ಸೇವಾ ಗುಣಕ್ಕೆ ವಿಶ್ವದಲ್ಲಿಯೇ ರೋಟರಿ ಮಾದರಿ : ಎಚ್.ಟಿ.ಅನಿಲ್

ಮಡಿಕೇರಿ ಮಾ.2 : ಸ್ವಾಥ೯ ಮೀರಿದ ಸೇವಾ ಗುಣಗಳಿಗೆ ರೋಟರಿ ವಿಶ್ವದಲ್ಲಿಯೇ ಮಾದರಿಯಾಗಿದ್ದು, ಹೀಗಾಗಿಯೇ ವಿಶ್ವವ್ಯಾಪಿ 12 ಲಕ್ಷ ಸದಸ್ಯರು ರೋಟರಿ ಸಂಸ್ಥೆಯಲ್ಲಿನ ವಿವಿಧ ಸಾಮಾಜಿಕ ಸೇವಾ ಕಾಯ೯ಗಳಲ್ಲಿ ಸಕ್ರಿಯವಾಗಿ ನಿರತರಾಗಿದ್ದಾರೆ ಎಂದು ರೋಟರಿ ಜಿಲ್ಲೆ 3181 ರ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಹೇಳಿದ್ದಾರೆ.
ನಗರದ ರೋಟರಿ ಸಭಾಂಗಣದಲ್ಲಿ ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ರೋಟರಿ ಸಂಸ್ಥೆಯ 118 ನೇ ವಾಷಿ೯ಕೋತ್ಸವ ಸಂದಭ೯ ಮಾತನಾಡಿದ ಅನಿಲ್, 1905 ರ ಫೆಬ್ರವರಿ 23 ರಂದು ಚಿಕಾಗೋದ ಪುಟ್ಟ ಕೋಣೆಯಲ್ಲಿ ಪೌಲ್ ಹಾರಿಸ್ ಮತ್ತು ವಿವಿಧ ವೖತ್ತಿಯಲ್ಲಿನ ಅವರ 4 ಸ್ನೇಹಿತರಿಂದ ಪ್ರಾರಂಭಗೊಂಡ ರೋಟರಿ ಸಂಸ್ಥೆಯು ಇದೀಗ ಜಗತ್ತಿನ ಅತೀ ದೊಡ್ಡ ಸಾಮಾಜಿಕ ಸೇವಾ ಸಂಸ್ಥೆಯಾಗಿ ಬೆಳೆದಿದೆ. ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಮುಂತಾದ ಕಾಯ೯ಯೋಜನೆಗಳಲ್ಲಿ ರೋಟರಿ ಕೆಲಸ ಗಮನಾಹ೯ವಾದದ್ದು ಎಂದರು.
225 ದೇಶಗಳ 36 ಸಾವಿರ ರೋಟರಿ ಸಂಸ್ಥೆಗಳಲ್ಲಿ ಪ್ರತೀ ವಾರವೂ ಒಂದಲ್ಲ ಒಂದು ಸಾಮಾಜಿಕ ಸೇವಾ ಕಾಯ೯ಯೋಜನೆ ಜರುಗುತ್ತಿದ್ದು ಹೀಗಾಗಿಯೇ ವಿಶ್ವವ್ಯಾಪಿ ರೋಟರಿಯು ವಿಶ್ವಸಾಹ೯ ಮತ್ತು ಪಾರದಶ೯ಕ ಕಾಯ೯ಯೋಜನೆಗಳಿಗೆ ಹೆಸರುವಾಸಿಯಾಗಿದೆ ಎಂದು ಹೇಳಿದ ಅನಿಲ್, 118 ವಷ೯ಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ರೋಟರಿಗೆ ಜೆನಿಫರ್ ಜೋನ್ಸ್ ಮೂಲಕ ಪ್ರಥಮ ಬಾರಿಗೆ ಮಹಿಳಾ ಅಧ್ಯಕ್ಷೆಯಾಗಿರುವುದು ಮಹಿಳೆಯರಿಗೆ ಸಂದ ಗೌರವ ಎಂದೂ ಶ್ಲಾಘಿಸಿದರು. ಬೇರೆಲ್ಲಾ ಸಂಸ್ಥೆಗಳಿಗೆ ಹೋಲಿಸಿದರೆ ಪ್ರತೀ ವಷ೯ ಕಡ್ಡಾಯವಾಗಿ ರೋಟರಿಯಲ್ಲಿ ಅಧಿಕಾರ ಹಸ್ತಾಂತರವಾಗಲೇಬೇಕು. ಹುದ್ದೆ ಇರುವ ಒಂದೇ ವಷ೯ದಲ್ಲಿ ಹುದ್ದೆಯಲ್ಲಿರುವವರು ತಮ್ಮ ಸಾಮಥ್ಯ೯ ತೋರಬೇಕು. ಹೀಗಾಗಿಯೇ ಇತರೆಲ್ಲಾ ಸಂಸ್ಥೆಗಳಿಗಿಂತ ಬಿನ್ನವಾಗಿ, ವಿಶಿಷ್ಟವಾಗಿ ರೋಟರಿಯ ಕಾಯ೯ಕ್ರಮಗಳು ಜನಮನ್ನಣೆ ಪಡೆಯಲು ಸಾಧ್ಯವಾಗಿದೆ ಎಂದು ಅನಿಲ್ ಹೇಳಿದರು.
ರೋಟರಿ ವುಡ್ಸ್ ಗೌರವ ಸಲಹೆಗಾರ ಬಿ.ಜಿ.ಅನಂತಶಯನ ದೇಶಭಕ್ತಿ ಕುರಿತು ಮಾತನಾಡಿ, ಸೈನ್ಯದಲ್ಲಿರುವಂತೆ ರೋಟರಿಯಲ್ಲಿಯೂ ಸಮಯಪಾಲನೆ ಮತ್ತು ಶಿಸ್ತಿಗೆ ಪ್ರಾಮುಖ್ಯತೆ ಇದೆ. ಇದರಿಂದಾಗಿ ರೋಟರಿ ಸಂಸ್ಥೆಗಳಲ್ಲಿ ಉದ್ದೇಶಿತ ರೀತಿಯಲ್ಲಿ ಕಾಯ೯ಕ್ರಮಗಳು ಯಶಸ್ವಿಯಾಗಿ ಜರುಗುತ್ತದೆ ಎಂದರು.
ಶಿಸ್ತು ಪಾಲನೆಗೆ ಹೆಸರಾದ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರ ಜೀವನದ ಕೆಲವು ಮಹತ್ವದ ಘಟನೆಗಳನ್ನೂ ಅನಂತಶಯನ ಈ ಸಂದಭ೯ ಸ್ಮರಿಸಿಕೊಂಡು ಇಂಥ ಮಹಾನ್ ಸೇನಾಧಿಕಾರಿಗಳ ಜೀವನ ಕ್ರಮ ಪ್ರತೀಯೋವ೯ರಿಗೂ ಆದಶ೯ಪ್ರಾಯ ಎಂದರು.
ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್.ಸಂಪತ್ ಕುಮಾರ್ ಮಾತನಾಡಿ, ರೋಟರಿಯಂಥ ಮಹಾನ್ ಸಂಸ್ಥೆಗೆ 118 ವಷ೯ಗಳು ತುಂಬಿದ ಸಂಭ್ರಮವನ್ನು ಸಂಸ್ಥೆಯ ಸದಸ್ಯರೆಲ್ಲಾ ಒಗ್ಗೂಡಿ ಆಚರಿಸುವುದು ಮಹತ್ವದ್ದಾಗಿದೆ. ಇಂಥ ಆಚರಣೆಗಳು ರೋಟರಿ ಕುರಿತು ಮತ್ತಷ್ಟು ಬದ್ದತೆಗೆ ಕಾರಣವಾಗುತ್ತದೆ ಎಂದರು.
ರೋಟರಿ ವುಡ್ಸ್ ಕಾಯ೯ದಶಿ೯ ವಸಂತ್ ಕುಮಾರ್ ವಂದಿಸಿದರು. ರೋಟರಿ ವುಡ್ಸ್ ನಿದೇ೯ಶಕರು, ಸದಸ್ಯರು ಹಾಜರಿದ್ದು ರೋಟರಿ ಸಂಸ್ಥಾಪಕ ಪೌಲ್ ಹಾರಿಸ್ ಭಾವಚಿತ್ರಕ್ಕೆ ನಮನ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ಸಂಸ್ಥಾಪಕರನ್ನು ಗೌರವಪೂವ೯ಕವಾಗಿ ಸ್ಮರಿಸಿದರು. ರಂಜಿತ್ ಕಿಗ್ಗಾಲು, ಪ್ರಶಾಂತ್, ಬೋಪಣ್ಣ ಕಾಯ೯ಕ್ರಮ ನಿವ೯ಹಿಸಿದರು.
