Advertisement
10:44 AM Sunday 3-December 2023

ಮಡಿಕೇರಿಯಲ್ಲಿ “ಕಾಂಗ್ರೆಸ್ ಗ್ಯಾರಂಟಿ ಕಾರ್ಡ್” ಬಿಡುಗಡೆ

02/03/2023

ಮಡಿಕೇರಿ ಮಾ.2 : ವಿಧಾನಸಭಾ ಚುನಾವಣೆಯ ಹಿನ್ನೆಲೆ ಕೆಪಿಸಿಸಿ ಘೋಷಿಸಿರುವ ವಿವಿಧ ಭರವಸೆಗಳ “ಕಾಂಗ್ರೆಸ್ ಗ್ಯಾರಂಟಿ ಕಾರ್ಡ್” ನ್ನು ಕರ್ನಾಟಕ ರಾಜ್ಯ ಉಸ್ತುವಾರಿ ರಣ್‍ದೀಪ್ ಸಿಂಗ್ ಸುರ್ಜೇವಾಲ ಬಿಡುಗಡೆ ಮಾಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಎಐಸಿಸಿ ಕಾರ್ಯದರ್ಶಿ, ಕೊಡಗು ಉಸ್ತುವಾರಿ ಹಾಗೂ ಕೇರಳ ಶಾಸಕ ರೋಜಿ ಜಾನ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮುಖಂಡರಾದ ಬಿ.ಎ ಜೀವಿಜಯ, ಎ.ಎಸ್ ಪೆÇನ್ನಣ್ಣ, ಡಾ.ಮಂಥರ್ ಗೌಡ, ಹರಪಳ್ಳಿ ರವೀಂದ್ರ , ಹೆಚ್.ಎಸ್ ಚಂದ್ರಮೌಳಿ, ವೀಣಾ ಅಚ್ಚಯ್ಯ, ಕೆ.ಪಿ ಚಂದ್ರಕಲಾ, ಟಿ.ಪಿ ರಮೇಶ್ ಮತ್ತಿತರ ಪ್ರಮುಖರು ಹಾಜರಿದ್ದರು.
ಕಾಂಗ್ರೆಸ್ ನ ಮೊದಲ ಗ್ಯಾರಂಟಿ ಕಾರ್ಡ್ “ಗೃಹಜ್ಯೋತಿ” ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ಪೂರೈಕೆ, 2ನೇ ಗ್ಯಾರಂಟಿ ಪ್ರತಿ ಮನೆಯೊಡತಿಗೆ 2 ಸಾವಿರ ರೂ. ಪ್ರೋತ್ಸಾಹ ಧನ ನೀಡಲು “ಗೃಹಲಕ್ಷ್ಮಿ” ಯೋಜನೆ ಜಾರಿ ಮತ್ತು 3ನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕಾರ್ಡ್‍ದಾರರಿಗೆ 10 ಕೆ.ಜಿ.ಅಕ್ಕಿ ಉಚಿತವಾಗಿ ನೀಡುವ ಭರವಸೆಯ ಕಾರ್ಡ್‍ನ್ನು ಮನೆ ಮನೆಗೆ ತಲುಪಿಸಲಾಗುವುದು.