Advertisement
2:22 AM Saturday 2-December 2023

ಮಾ.4 ರಂದು ನ್ಯಾಯಮೂರ್ತಿ ದಿ.ಎಂ.ಪಿ.ಚಿಣ್ಣಪ್ಪ ಅವರ ಸ್ಮರಣಾರ್ಥ ಉಪನ್ಯಾಸ

02/03/2023

ಮಡಿಕೇರಿ ಮಾ.2 : ವಿರಾಜಪೇಟೆ ವಕೀಲರ ಸಂಘದ ವತಿಯಿಂದ ನ್ಯಾಯಮೂರ್ತಿ ದಿವಂಗತ ಎಂ.ಪಿ.ಚಿಣ್ಣಪ್ಪ ಅವರ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮವು ಮಾ.4 ರಂದು ಸಂಜೆ 6 ಗಂಟೆಗೆ ವಿರಾಜಪೇಟೆ ಚಿಕ್ಕಪೇಟೆಯ ತ್ರಿವೇಣಿ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.
ಸರ್ವೋಚ್ಛ ನಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರು ನ್ಯಾಯ ವಿತರಣೆಯಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಾವಾದಿಗಳ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಲೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಕೊಡಗು ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ವಿ.ಶ್ರೀಶಾನಂದ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಜಿ.ಶುಕುರೆ ಕಮಲ್, ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ, ಕರ್ನಾಟಕ ಉಚ್ಛ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ಕೆ.ಎಸ್.ಭರತ್‍ಕುಮಾರ್, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ.ಭೃಂಗೇಶ್, ನ್ಯಾಯಮೂರ್ತಿ ದಿವಂಗತ ಎಂ.ಪಿ.ಚಿಣ್ಣಪ್ಪ ಅವರ ಧರ್ಮಪತ್ನಿ ಕಾವೇರಿ ಚಿಣ್ಣಪ್ಪ, ವಕೀಲರಾದ ನಮೃತಾ ಕೋಲಾರ, ಎಂ.ಚಿಂತನ್ ಚಿಣ್ಣಪ್ಪ, ಎಂ.ಧ್ಯಾನ್ ಚಿಣ್ಣಪ್ಪ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷರಾದ ಐ.ಆರ್.ಪ್ರಮೋದ್ ಅವರು ತಿಳಿಸಿದ್ದಾರೆ.