ಆರ್ಟ್ ಆಫ್ ಲಿವಿಂಗ್ ವತಿಯಿಂದ ವಿದ್ಯಾರ್ಥಿಗಳಿಗೆ ಬಾಲಚೇತನ ಶಿಬಿರ
03/03/2023

ಸೋಮವಾರಪೇಟೆ ಮಾ.3 : ಜಿ.ಎಂ.ಪಿ. ಶಾಲೆಯ ಚೆನ್ನಬಸಪ್ಪ ಸಭಾಂಗಣದಲ್ಲಿ ಕಳೆದ ಒಂದು ವಾರದಿಂದ ಆರ್ಟ್ ಆಫ್ ಲಿವಿಂಗ್ ವತಿಯಿಂದ ನಡೆದ ಬಾಲಚೇತನ ಶಿಬಿರ ಮುಕ್ತಾಯವಾಯಿತು.
ಶಿಬಿರದಲ್ಲಿ ಸುಮಾರು 250 ಮಕ್ಕಳು ಭಾಗವಹಿಸಿದ್ದರು. ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ರಾಗಿಣಿ ಅವರು ಮಕ್ಕಳಿಗೆ, ಯೋಗ, ಪ್ರಾಣಯಾಮ, ಧ್ಯಾನ ಅಭ್ಯಾಸ ಮಾಡಿಸಿ ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕ ರಮೇಶ್, ಸಂಸ್ಥೆಯ ಸ್ವಯಂ ಸೇವಕರಾದ ದಿವ್ಯಮೋಹನ್, ಪ್ರಮೀಳಾ, ಅನಿತಾ ಆನಂದ್ ಇದ್ದರು.
