Advertisement
4:59 AM Friday 8-December 2023

ವಿದ್ಯಾರ್ಥಿಗಳಿಗೆ ಹಾಗೂ ಕಾರ್ಮಿಕರಿಗೆ ಕಿಟ್ ವಿತರಣೆ

03/03/2023

ಮಡಿಕೇರಿ ಮಾ.3 : ಮಡಿಕೇರಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ 6 ರಿಂದ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮಗ್ರಿಗಳ ಕಿಟ್ ಗಳನ್ನು, 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶ್ರಮೀಕ್ ಟ್ಯಾಬ್‍ಗಳನ್ನು, ಪೇಂಟರಗೆ ಪೇಂಟಿಂಗ್ ಟೂಲ್ ಕಿಟ್ ಗಳನ್ನು, ಕಾಪೇರ್ಂಟರಗೆ ಕಾಪೇರ್ಂಟರ್ ಟೂಲ್ ಕಿಟ್ ಗಳನ್ನು, ಪ್ಲಂಬರಗೆ ಪ್ಲಂಬಿಂಗ್ ಟೂಲ್ ಕಿಟ್ ಗಳನ್ನು ಜಿಲ್ಲಾ ಆಡಳಿತ ಭವನದ ಮುಂಭಾಗದಲ್ಲಿ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಕಾರ್ಮಿಕ ಇಲಾಖೆಯಿಂದ ಇಲ್ಲಿಯವರೆಗೆ ಆಹಾರ ಕಿಟ್, ಸುರಕ್ಷತಾ ಕಿಟ್, ಪ್ರತಿರಕ್ಷಣಾ ಕಿಟ್, ಪೌಷ್ಟಿಕಾಂಶ ಕಿಟ್, ಬಾರ್ ಬೆಂಡಿಂಗ್ ಕಿಟ್, ಕಾಪೇರ್ಂಟರ್ ಕಿಟ್, ಎಲೆಕ್ಟ್ರಿಷಿಯನ್ ಕಿಟ್, ಪೈಂಟರ್ ಕಿಟ್ ಪ್ಲಂಬರ್ ಕಿಟ್, ಮೇಸನ್ ಕಿಟ್, ಸ್ಕೂಲ್ ಕಿಟ್(1-5ನೇ ತರಗತಿ), ಸ್ಕೂಲ್ ಕಿಟ್(6-8ನೆ ತರಗತಿ) ಹಾಗೂ ಶ್ರಮಿಕ್ ಟ್ಯಾಬ್ ಗಳನ್ನು ವಿತರಣೆ ಮಾಡಿದ್ದು ಇವುಗಳ ಸದುಪಯೋಗ ಪಡಿಸಿಕೊಂಡು ಕಾರ್ಮಿಕರು ಮುಂದೆ ಬರುವುದಲ್ಲದೆ ನಿಮ್ಮ ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ, ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.