Advertisement
1:43 AM Thursday 7-December 2023

ಮಲ್ಮ ಬೆಟ್ಟದಲ್ಲಿ ಬೆಂಕಿ : ಬೆಂಕಿ ನಂದಿಸಲು ಅರಣ್ಯ ಇಲಾಖೆ ಹರಸಾಹಸ

04/03/2023

ಮಡಿಕೇರಿ ಮಾ.4 :  ಸಮೀಪದ ಕಕ್ಕಬೆ ವ್ಯಾಪ್ತಿಯ ಇಗ್ಗುತ್ತಪ್ಪ(ಮಲ್ಮ) ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವ್ಯಾಪಕವಾಗಿ ಹಬ್ಬಿದೆ. ಶುಕ್ರವಾರ ಸಂಜೆ ಹೊತ್ತಿಗೆ ದೇವನೆಲೆ ಮಲ್ಮ ಬೆಟ್ಟಶ್ರೇಣಿಯಲ್ಲಿ ಕಾಡಿಚ್ಚು ವ್ಯಾಪಕವಾಗಿ ಉರಿಯುತ್ತಿದೆ. ಈಚೆಗೆ ತಡಿಯಂಡಮೋಳ್ ಬೆಟ್ಟದಲ್ಲೂ ಕಾಡಿಚ್ಚು ಕಾಣಿಸಿಕೊಂಡಿತ್ತು. ಕಡಿದಾದ ಪ್ರದೇಶವಾಗಿರುವುದರಿಂದ ಅಗ್ನಿಶಾಮಕ ದಳದಿಂದ ನಿಯಂತ್ರಿಸಲು ಅಸಾಧ್ಯವೆಂದು ಸಾರ್ವಜನಿಕರು ಆತಂಕ  ವ್ಯಕ್ತಪಡಿಸಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಶ್ರಮಿಸುತ್ತಿದೆ.

ಇತ್ತೀಚಿಗೆ ನಾಪೋಕ್ಲು ಪ್ರಥಮ ದರ್ಜೆ ಕಾಲೇಜು ಆವರಣದಲ್ಲೂ ವ್ಯಾಪಕವಾಗಿ ಬೆಂಕಿ ಹೊತ್ತಿ ಉರಿದಿತ್ತು.

ವರದಿ : ದುಗ್ಗಳ ಸದಾನಂದ