ಉದ್ಯಮ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಪಡೆದುಕೊಳ್ಳಿ
04/03/2023

ಮಡಿಕೇರಿ ಮಾ.4 :ಭಾರತ ಸರ್ಕಾರದ ಎಂಎಂಎಸ್‍ಇ ಸಚಿವಾಲಯದ ಆದೇಶದನ್ವಯ, ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಎಂಎಸ್‍ಎಂಇ ಘಟಕಗಳು (ಉತ್ಪಾದನಾ /ಸೇವಾ ಚಟುವಟಿಕೆ) ಉದ್ಯಮ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍ನ್ನು ಪಡೆಯುವುದು ಕಡ್ಡಾಯವಾಗಿದೆ. ಈ ಪ್ರಮಾಣ ಪತ್ರವನ್ನು ಪಡೆದಲ್ಲಿ ಬ್ಯಾಂಕ್‍ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಹಾಗೂ ಸರ್ಕಾರದ ಇತರೆ ಸವಲತ್ತು ಪಡೆಯಬಹುದಾಗಿದೆ.
ಆದ್ದರಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಎಂಎಸ್‍ಎಂಇ ಘಟಕಗಳು ಉದ್ಯಮ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍ನ್ನು ಕಡ್ಡಾಯವಾಗಿ ಪಡೆಯಲು ಕೋರಿದೆ. ಉದ್ಯಮ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍ನ್ನು ಆನ್‍ಲೈನ್ https://udyamregistration.gov.in ಮೂಲಕ ಉಚಿತವಾಗಿ ಪಡೆಯಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
