ಮಡಿಕೇರಿ : ಜ್ಯೋತಿನಗರದ ಶ್ರೀ ವನ ಚಾಮುಂಡಿ ಸಾನಿಧ್ಯದಲ್ಲಿ ಮಾ.7 ರಿಂದ ವಿವಿಧ ಪೂಜಾ ಕಾರ್ಯಕ್ರಮ
04/03/2023

ಮಡಿಕೇರಿ ಮಾ.4 : ಮಡಿಕೇರಿಯ ಜ್ಯೋತಿನಗರದ ಶ್ರೀ ವನ ಚಾಮುಂಡಿ ದೇವಿ ಸಾನಿಧ್ಯದಲ್ಲಿ ಮಾ.7 ರಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ.
ಅಂದು ಬೆಳಿಗ್ಗೆ 7.30 ರಿಂದ ಗಣಪತಿ ಹೋಮ, ಶ್ರೀ ದುರ್ಗಾಹೋಮ ಜರುಗಲಿದ್ದು, 11.30 ಗಂಟೆಗೆ ಪೂರ್ಣಾಹುತಿ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ನಂತರ ಅನ್ನಸಂತರ್ಪಣೆ ನೆರವೇರಲಿದೆ.
ಮಾ.14 ರಂದು ದೇವಿಯ ವಾರ್ಷಿಕ ಪೂಜೆ ಜರುಗಲಿದ್ದು, 11.30ಕ್ಕೆ ಬಲಿ ಪೂಜೆ, 12 ಗಂಟೆಗೆ ದೇವರ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ 2.30 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಕೋರಿದ್ದಾರೆ.
