Advertisement
2:25 AM Saturday 2-December 2023

ನಾಪೋಕ್ಲು : ಆಕ್ಯೂ ಪ್ರೆಷರ್ ಹಾಗೂ ಸು-ಜೋಕ್ ಚಿಕಿತ್ಸಾ ಶಿಬಿರ ಉದ್ಘಾಟನೆ

04/03/2023

ನಾಪೋಕ್ಲು ಮಾ.4 : ಮೈಸೂರು ಜಿಲ್ಲಾ ಪ್ರಾಕೃತಿಕ ಚಿಕಿತ್ಸೆ ಸಂಸ್ಥೆ ಹಾಗೂ ನಾಪೋಕ್ಲುವಿನ ಸಹಕಾರ ಮಹಿಳಾ ಸಮಾಜದ ಸಯೋಗದಲ್ಲಿ  ಆಕ್ಯೂ ಪ್ರೆಷರ್  ಹಾಗೂ ಸು-ಜೋಕ್ ಚಿಕಿತ್ಸಾ ಶಿಬಿರಕ್ಕೆ ಸಹಕಾರ ಮಹಿಳಾ ಸಮಾಜದ ಕಟ್ಟಡದಲ್ಲಿ  ಚಾಲನೆ  ದೊರೆಯಿತು.

ಈ ಸಂದರ್ಭ ಚಿಕಿತ್ಸಕ ಸತ್ಯೇಶ್ ಮಾತನಾಡಿ, ಈ ಚಿಕಿತ್ಸೆಯಿಂದ ಹಲವು ನೋವುಗಳನ್ನು ಗುಣಪಡಿಸಬಹುದಾಗಿದೆ ಎಂದರು.
ಮಹಿಳಾ ಸಮಾಜದ ಅಧ್ಯಕ್ಷ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಮಹಿಳಾ ಸಮಾಜದ ಉಪಾಧ್ಯಕ್ಷೆ ಬೊಪ್ಪಂಡೆ ಶೈಲಾ ಬೋಪಯ್ಯ, ಕಾರ್ಯದರ್ಶಿ ರಾಜೇಶ್ವರಿ ಲೋಕೇಶ್, ನಿರ್ದೇಶಕರಾದ ಕೇಟೋಳಿರ ಶಾರದಾ ಪಳಂಗಪ್ಪ, ಅಪ್ಪಾರಂಡ ಡೇಸಿ ತಿಮ್ಮಯ್ಯ, ಫುಲ್ಲೆರ ಪದ್ಮಿನಿ ಭೀಮಯ್ಯ ಬಿದ್ದಾತಾಂಡ ಗಿರಿಜಾ ಲೋಕೇಶ್ ಉಪಸ್ಥಿತರಿದ್ದರು.

ಚಿಕಿತ್ಸಾ ಅವಧಿ : ಪ್ರತಿದಿನ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ 30 ದಿನಗಳ ವರೆಗೆ ಚಿಕಿತ್ಸಾ ಶಿಬಿರ ನಡೆಯಲಿದೆ. ಆಸಕ್ತರು ಸತ್ಯೇಶ್-9591054056 ಸಂಪರ್ಕಿಸಬಹುದಾಗಿದೆ.

ವರದಿ : ದುಗ್ಗಳ ಸದಾನಂದ.