ಕುಡಿಯರ ಶಾರದಾರಿಗೆ ಜಾನಪದ ಕಲಾ ಪ್ರಶಸ್ತಿ
04/03/2023

ಮಡಿಕೇರಿ ಮಾ.4 : ಜಾನಪದ ಕಲಾವಿದೆ ಕೊಡಗಿನ ಕುಡಿಯರ ಶಾರದಾ ಅವರಿಗೆ ಜಾನಪದ ಲೋಕದ ಸಂಸ್ಥಾಪಕ ದಿವಂಗತ ಎಚ್. ಎಲ್. ನಾಗೇಗೌಡ ವಾರ್ಷಿಕ ಪ್ರಶಸ್ತಿ ಲಭಿಸಿದೆ. ಬಿಡದಿಯ ರಾಮನಗರದಲ್ಲಿರುವ ಜಾನಪದ ಕಲಾ ಲೋಕದಲ್ಲಿ ಪ್ರತಿ ವರ್ಷ ನಡೆಯಲಿರುವ ಜಾನಪದ ಕಲಾ ಮೇಳದಲ್ಲಿ ಜಾನಪದ ಲೋಕದ ಸಂಸ್ಥಾಪಕ ದಿವಂಗತ ಹೆಚ್. ಎಲ್ ನಾಗೇಗೌಡ ರವರ ನೆನಪಿನಲ್ಲಿ ಪ್ರಶಸ್ತಿ ನೀಡುತ್ತಾ ಬರಲಾಗುತ್ತಿದೆ. ಈ ಬಾರಿ ಕುಡಿಯರ ಶಾರದಾ ಅವರು ಪ್ರಶಸ್ತಿಗೆ ಭಾಜನರಾಗಿದ್ದು, ಕಲಾಮೇಳ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.














