Advertisement
11:08 AM Monday 4-December 2023

ಸುಂಟಿಕೊಪ್ಪ ಜೆಸಿಐ ಅಧ್ಯಕ್ಷರಾಗಿ ಟಿ.ಜಿ.ಪ್ರೇಮಕುಮಾರ್ ಆಯ್ಕೆ

04/03/2023

ಸುಂಟಿಕೊಪ್ಪ, ಮಾ.5 : ಸುಂಟಿಕೊಪ್ಪ  ಜೆಸಿಐ ಸಂಸ್ಥೆಯ (ಜೂನಿಯರ್ ಛೇಂಬರ್ ಆಫ್ ಇಂಟರ್ ನ್ಯಾಷನಲ್ ) 2023 ನೇ ಸಾಲಿನ ಘಟಕದ  ಅಧ್ಯಕ್ಷರಾಗಿ ಟಿ.ಜಿ.ಪ್ರೇಮಕುಮಾರ್ ಆಯ್ಕೆಯಾಗಿದ್ದಾರೆ.
ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಸತೀಶ್ ಅವರ‌ ಅಧ್ಯಕ್ಷತೆಯಲ್ಲಿ ನಡೆದ ಸಂಸ್ಥೆಯ ಪದಾಧಿಕಾರಿಗಳ ಸಭೆಯಲ್ಲಿ  ಜಿಲ್ಲೆಯಲ್ಲಿ ವಿಜ್ಞಾನ ಮತ್ತು ಪರಿಸರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ  ಟಿ.ಜಿ.ಪ್ರೇಮಕುಮಾರ್ ಅವರನ್ನು ಅವಿರೋಧವಾಗಿ  ಆಯ್ಕೆ ಮಾಡಲಾಗಿದೆ. ಜೆಸಿಐ ಸಂಸ್ಥೆಯ ಕಾರ್ಯದರ್ಶಿಯಾಗಿ ದಿನೇಶ್ ಪೂಜಾರಿ (ಪೊನ್ನಪ್ಪ)
 ಹಾಗೂ ಖಜಾಂಚಿಯಾಗಿ ನಂದಕುಮಾರ್ ಅವರನ್ನು  ಆಯ್ಕೆ ಮಾಡಲಾಗಿದೆ
ಎಂದು ಸಂಸ್ಥೆಯ ಅಧ್ಯಕ್ಷ ಬಿ.ಕೆ. ಸತೀಶ್ ಕುಮಾರ್ ತಿಳಿಸಿದ್ದಾರೆ.
::: ಮಾ.8 ರಂದು ಜೆಸಿಐ  ಪದಗ್ರಹಣ :::
ಸುಂಟಿಕೊಪ್ಪ ಜೆಸಿಐ ಸಂಸ್ಥೆಯ 2023 ನೇ ಸಾಲಿನ ಘಟಕದ  ಅಧ್ಯಕ್ಷರು ಹಾಗೂ ಪದಾಧಿಕಾರಿಗಳ
 ಪದಗ್ರಹಣ ಸಮಾರಂಭವು ಮಾ.8 ರಂದು ಸುಂಟಿಕೊಪ್ಪ ಸಂತಮೇರಿ ಶಾಲಾ ಸಭಾಂಗಣದಲ್ಲಿ
ಸಂಜೆ 6.00 ಗಂಟೆಗೆ ಜೆಸಿಐ ಸಂಸ್ಥೆಯ ಅಧ್ಯಕ್ಷ ಬಿ.ಕೆ. ಸತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ
ನಡೆಯಲಿದೆ.
ಜೆಸಿಐ ವಲಯ – 14 ರ ವಲಯಾಧ್ಯಕ್ಷೆ ಯಶಸ್ವಿನಿ ಪದಗ್ರಹಣ ನೆರವೇರಿಸಲಿದ್ದು, ಜೆಸಿಐ ವಲಯ – 14 ರ ಉಪಾಧ್ಯಕ್ಷ ನೆಲ್ಸನ್ ಡಿ’ ಸೋಜ ಪಾಲ್ಗೊಳ್ಳಲಿದ್ದಾರೆ. ಜೆಸಿಐ ವತಿಯಿಂದ
::: ಮಹಿಳಾ ದಿನಾಚರಣೆ :::
ಸುಂಟಿಕೊಪ್ಪ ಜೆಸಿಐ ಸಂಸ್ಥೆಯ 2023 ನೇ ಸಾಲಿನ ಮಹಿಳಾ ದಿನಾಚರಣೆಯನ್ನು ಮಾ.8 ರಂದು
ಸುಂಟಿಕೊಪ್ಪ ಸಂತಮೇರಿ ಶಾಲಾ ಸಭಾಂಗಣದಲ್ಲಿ ರಾತ್ರಿ 8.00 ಗಂಟೆಗೆ ಆಚರಿಸಲಾಗುವುದು.
 ಮಹಿಳಾ ದಿನಾಚರಣೆ ಅಂಗವಾಗಿ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ.