ಮೇಕೇರಿ : ಸ್ವಾಗತ ಯುವಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
06/03/2023

ಮಡಿಕೇರಿ ಮಾ.6 : ಮೇಕೇರಿಯ ಸ್ವಾಗತ ಯುವಕ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶ್ರೀ ಗೌರಿಶಂಕರ ದೇವಾಲಯದ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿ ಮುಂದಿನ ವರ್ಷಕ್ಕೆ ಕನಿಷ್ಠ 6 ಕಾರ್ಯಕ್ರಮಗಳನ್ನು ಯೋಜನಾಬದ್ಧವಾಗಿ ನಡೆಸಲು ತೀರ್ಮಾನಿಸಿತು.
ನೂತನ ಅಧ್ಯಕ್ಷರಾಗಿ ಟಿ.ಎನ್. ಉಮೇಶ್ ,ಉಪಾಧ್ಯಕ್ಷರಾಗಿ ದೀಪಕ್ ಸಿಂಗ್ , ಕಾರ್ಯದರ್ಶಿಯಾಗಿ ಪವನ್ ಕುಮಾರ್ , ಸಹ ಕಾರ್ಯದರ್ಶಿಯಾಗಿ ಕೆ.ಎಸ್.ರಾಜೇಶ್ , ಖಜಾಂಚಿಯಾಗಿ ಭವನ್ ಕುಮಾರ್ , ಸಹ ಖಜಾಂಚಿಯಾಗಿ ಅರ್ಪಿತ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಿಕಟಪೂರ್ವ ಅಧ್ಯಕ್ಷರಾದ ವಿಜು ಹರೀಶ್ ಹಾಗೂ ನಿಕಟಪೂರ್ವ ಖಜಾಂಚಿ ಬಿ.ಎಸ್.ಅಶೋಕ್ ಸೇರಿದಂತೆ ಹಾಜರಿದ್ದ ಯುವಕ ಸಂಘದ ಸರ್ವ ಸದಸ್ಯರುಗಳು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಅಲ್ಲದೆ ರಕ್ತದಾನ ಶಿಬಿರ ನಡೆಸಲು ಸಹಕರಿಸಿದ ಸರ್ವರ ಕೊಡುಗೆಯನ್ನು ಸಭೆಯಲ್ಲಿ ಸ್ಮರಿಸಲಾಯಿತು.
