Advertisement
3:46 AM Saturday 2-December 2023

ಕೊಡಗಿನ ಮೂವರಿಗೆ ಬನವಾಸಿ ಕನ್ನಡಿಗ-2023 ರಾಜ್ಯ ಪ್ರಶಸ್ತಿ ಪ್ರದಾನ

06/03/2023

ಸೋಮವಾರಪೇಟೆ ಮಾ.6 : ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೊಡಗಿನ ಮೂವರಿಗೆ ಬನವಾಸಿ ಕನ್ನಡಿಗ 2023 ರಾಜ್ಯ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ನಾಗರಭಾವಿಯಲ್ಲಿರುವ ಜ್ಞಾನಸೌಧ ಸಭಾಂಗಣದಲ್ಲಿ  ನಡೆದ ಬನವಾಸಿ ಕನ್ನಡಿಗ ಕನ್ನಡಮಯ ಟ್ರಸ್ಟಿನ 6ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಮಾಡಿದ ಕೊಡಗಿನ  ಸೋಮವಾರಪೇಟೆಯ ಸಾಮಾಜಿಕ ಕಾರ್ಯಕರ್ತೆ ಎಂ.ಎ.ರುಬೀನಾ, ಮಡಿಕೇರಿಯ ಪವನ್ ಪೆಮ್ಮಯ್ಯ ಮತ್ತು ಕುಶಾಲನಗರದ ಚಂದ್ರು ಗೆ  ಖ್ಯಾತ ಚಲನಚಿತ್ರ ನಿರ್ದೇಶಕ  ಟಿ.ಎಸ್.ನಾಗಾಭರಣ್  ಬನವಾಸಿ ಕನ್ನಡಿಗ 2023 ರಾಜ್ಯ ಪ್ರಶಸ್ತಿಯನ್ನು  ಪ್ರದಾನ ಮಾಡಿದರು.

ಈ ಸಂದರ್ಭ   ಚಲನಚಿತ್ರ ನಿರ್ದೇಶಕ ಎಸ್.ಮಹೇಂದರ್, ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಅಧ್ಯಕ್ಷರು ಶಿವಕುಮಾರ್ ನಾಗರನವಿಲೆ, ನಮ್ಮ ಕೊಡಗು ತಂಡದ ಅಧ್ಯಕ್ಷರು ನೌಷಾದ್ ಜನ್ನತ್ ಮತ್ತು ಬನವಾಸಿ ಕನ್ನಡಿಗ ಟ್ರಸ್ಟಿನ ಕಿರಣ್ ಮತ್ತು ಕಿರಣ್ ಮಯಿ ಮತ್ತಿತರು ಗಣ್ಯರು ಹಾಜರಿದ್ದರು.