ಗಾಂಧಿ ಯುವಕ ಸಂಘದ ನೂತನ ಜರ್ಸಿ ಬಿಡುಗಡೆ
06/03/2023

ಮಡಿಕೇರಿ ಮಾ.6 : ಕಂಡಕರೆಯ ಗಾಂಧಿ ಯುವಕ ಸಂಘದ ನೂತನ ಜರ್ಸಿ ಬಿಡುಗಡೆ ಮಾಡಲಾಯಿತು.
ಕೂರ್ಗ್ ಹಂಟರ್ಸ್ ಪೊನ್ನತ್ಮೊಟ್ಟೆ ಆಯೋಜಿಸಿದ ಹೊನಲು ಬೆಳಕಿನ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ನೂತನ ಜರ್ಸಿಯನ್ನು ಚೆಟ್ಟಳ್ಳಿ ಪೊಲೀಸ್ ಉಪಠಾಣಾಧಿಕಾರಿ ಮಂಜುನಾಥ್ ಅನಾವರಣ ಗೊಳಿಸಿದರು.
ಈ ಸಂದರ್ಭ ಪ್ರಮುಖರಾದ ಉಮೇಶ್, ಜೆಡಿಎಸ್ ಯುವ ಮುಖಂಡ ರಜಾಕ್, ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ತೀರ್ಪುಗಾರರಾದ ಧೀರಜ್ ರೈ, ಉನೈಸ್ ಗರಗಂದೂರು,ಕೂರ್ಗ್ ಹಂಟರ್ಸ್ ಯುವಕ ಸಂಘದ ಉಪಾಧ್ಯಕ್ಷ ಮಜೀದ್,ಕೋಶಾಧಿಕಾರಿ ಶಫೀಕ್, ನಾರಾಯಣ ಆಸ್ಪತ್ರೆ ಆಂಬ್ಯುಲೆನ್ಸ್ ವ್ಯವಸ್ಥಾಪಕರಾದ ಚಂದ್ರಶೇಖರ್, ಗಾಂಧಿ ಯುವಕ ಸಂಘದ ಅಧ್ಯಕ್ಷ ಪಿ.ಎಂ.ಷರೀಫ್, ಸದಸ್ಯರಾದ ಕೆ.ಎಂ.ಉನೈಸ್ ಹಾಜರಿದ್ದರು.
