Advertisement
1:55 AM Thursday 7-December 2023

ವಿದ್ಯಾನಿಧಿ ಯೋಜನೆಯಡಿ ಅರ್ಜಿ ಆಹ್ವಾನ

06/03/2023

ಮಡಿಕೇರಿ ಮಾ.6 : ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಕ್ಯಾಬ್ ಚಾಲಕರ ಮಕ್ಕಳ ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ‘ವಿದ್ಯಾನಿಧಿ’ ಯೋಜನೆಯನ್ನು ‘ಸೇವಾಸಿಂಧು’ ವೆಬ್‍ಪೋರ್ಟಲ್ ಮೂಲಕ 2022 ರ ನವೆಂಬರ್, 8 ರಂದು ಪ್ರಾರಂಭಿಸಲಾಗಿದೆ.
ಈ ಪ್ರಯುಕ್ತ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಚಾಲಕರು/ ಪೋಷಕರ ಚಾಲನಾ ಅನುಜ್ಞಾ ಪತ್ರ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು ಮತ್ತು ಇತರೇ ಅಗತ್ಯ ದಾಖಲೆಗಳನ್ನು ನೀಡಿ, ಅರ್ಜಿ ಸಲ್ಲಿಸಲು ಮತ್ತು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಎನ್.ಮಧುರ ಅವರು ತಿಳಿಸಿದ್ದಾರೆ.