Advertisement
11:31 PM Saturday 2-December 2023

ಇಸ್ಕಾನ್ ದೇವಾಲಯದಲ್ಲಿ ಪೇಟಿಎಂ, ಯುಪಿಐ ಮೂಲಕ ಪಾವತಿಸಿ ಪ್ರಸಾದ ಸ್ವೀಕರಿಸಿ

07/03/2023

ಬೆಂಗಳೂರು : ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಪ್ರಸಾದವನ್ನು ಖರೀದಿಸಲು ಅಥವಾ ದೇಣಿಗೆ ನೀಡಲು ಪೇಟಿಎಂ ಯುಪಿಐ ಬಳಸಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಪೇಟಿಎಂ ಸಂಸ್ಥೆಯು ರಾಜಾಜಿ ನಗರದಲ್ಲಿರುವ ಇಸ್ಕಾನ್ ದೇವಸ್ಥಾನದಲ್ಲಿ 28 ಸೌಂಡ್ ಬಾಕ್ಸ್ ಧನಗಳನ್ನು ಅಳವಡಿಸಿದೆ.

ಭಕ್ತರಿಗೆ ಅನುಕೂಲವಾಗುವಂತೆ ಪೇಟಿಎಂ ಸಂಸ್ಥೆಯು ಇಸ್ಕಾನ್ನಲ್ಲಿರುವ ಎಲ್ಲಾ ಸ್ಟಾಲ್ಗಳಲ್ಲಿ ಮೊಬೈಲ್ಪಾವತಿಗಳನ್ನು ಸಕ್ರಿಯಗೊಳಿಸಿದೆ. ಪ್ರಸಾದ, ಆಹಾರದಿಂದ ಹಿಡಿದು ಉಡುಗೊರೆ ಅಂಗಡಿಗಳಿಂದ ಧಾರ್ಮಿಕ ವಸ್ತುಗಳವರೆಗೆ. ದೇವಾಲಯದಾದ್ಯಂತ ಇರುವ ದಾನಪತ್ರಗಳು ಪೇಟಿಎಂ ಕ್ಯುಆರ್ ಕೋಡ್ ಅನ್ನು ಸಹ ಹೊಂದಿವೆ. ಪೇಟಿಎಂ ಸೂಪರ್ ಆ್ಯಪ್ ನಲ್ಲಿನ ‘ಭಕ್ತಿ’ ವಿಭಾಗದಿಂದ ಭಾರತದಾದ್ಯಂತ ಜನರು ಇಸ್ಕಾನ್ ದೇವಾಲಯದಲ್ಲಿ ತಮ್ಮಮನೆಯಲ್ಲಿ ಕುಳಿತು ದೇಣಿಗೆ ನೀಡಬಹುದು.