ಕುಶಾಲನಗರದಲ್ಲಿ ಹೋಳಿ ಹಬ್ಬದ ಸಂಭ್ರಮ
07/03/2023

ಕುಶಾಲನಗರ ಮಾ.7 : ನಗರದ ರಾಜಸ್ಥಾನ ಸಮಾಜ ಮತ್ತು ಸಿರ್ವಿ ಸಮುದಾಯ ಬಾಂಧವರು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಮಾರುಕಟ್ಟೆ ರಸ್ತೆ ಬಳಿಯಿರುವ ಸಮಾಜದ ಕಟ್ಟಡದಲ್ಲಿ ಹೋಳಿಪೂಜೆ, ವಿವಿಧ ಸಾಂಸ್ಕೃತಿಕ ಚಟುವಟಿಕ, ಸಹಭೋಜನ ನಡೆಯಿತು.
ಮಹಿಳೆಯರು, ಮಕ್ಕಳು, ಪುರುಷರಾದಿಯಾಗಿ ಪರಸ್ಪರ ಬಣ್ಣ ಹಚ್ಚಿ ಶುಭಾಶಯ ಕೋರಿ ಸಂಭ್ರಮಿಸಿದರು.
