Advertisement
2:32 AM Thursday 7-December 2023

ಉದ್ದಿಬಾಣೆ ಮಠದಲ್ಲಿ ಕೊರಗಜ್ಜ ಗುಡಿಯ ಪ್ರತಿಷ್ಠಾಪನೆ

07/03/2023

ಸುಂಟಿಕೊಪ್ಪ,ಮಾ.7: ಹರದೂರು ಗ್ರಾ.ಪಂ ವ್ಯಾಪ್ತಿಯ ಪನ್ಯದ ಉದ್ದಿಬಾಣೆ ಮಠದಲ್ಲಿ ಕೊರಗಜ್ಜ ಗುಡಿಯ ಪ್ರತಿಷ್ಠಾಪನೆಯು ಶ್ರದ್ಧಾಭಕ್ತಿಯಿಂದ ಜರುಗಿತು.

ಪ್ರತಿಷ್ಠಾಪನೆಯ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿತು.
ಕೊರಗಜ್ಜ ದೈವ ನರ್ತಕ ನಿಶಾಂತ್ ದೈವದ ಕಲ್ಲಿಗೆ ಕಾರಣಿಕ ಶಕ್ತಿಯನ್ನು ನೀಡುವ ಮೂಲಕ ಪ್ರತಿಷ್ಠಾಪನೆ ಮಾಡಿದರು.

ಇದಕ್ಕೂಮೊದಲು ಗುಡಿಯ ಶುದ್ಧ ಪೂಜೆ ನಡೆಯಿತು. ನಂತರ ದೈವಕ್ಕೆ ನಂದಾದೀಪ, ಚಕ್ಕುಲಿ, ವಿಲ್ಯದೆಲೆ ಇರಿಸುವುದರ ಮೂಲಕ ಆರಾಧನೆಗೆ ಅವಕಾಶ ನೀಡಲಾಯಿತು.
ಹರೀಶ್ ಪೂಜಾರಿ, ದೇವಪ್ಪ ಪೂಜಾರಿ, ಪ್ರಕಾಶ್ ಆಚಾರಿ, ಗುಡಿಯ ಪ್ರಮುಖರಾದ ಮೋಣಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ, ಮಣಿಮುಖೇಶ್, ಶಾಂತಪ್ಪ, ಪದ್ಮನಾಭ, ವೆಂಕಪ್ಪ, ದೇವಕ್ಕಿ, ಬೇಬಿ ಇತರರು ಇದ್ದರು.