Advertisement
2:26 AM Thursday 7-December 2023

ಕಕ್ಕೆಹೊಳೆ ಶ್ರೀ ಮುತ್ತಪ್ಪಸ್ವಾಮಿ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಜಾತ್ರೋತ್ಸವ

07/03/2023

ಸೋಮವಾರಪೇಟೆ ಮಾ.7 : ಸೋಮವಾರಪೇಟೆ ಪಟ್ಟಣದ ಕಕ್ಕೆಹೊಳೆ ಬಳಿಯಿರುವ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ 2023ನೇ ಸಾಲಿನ ಜಾತ್ರೋತ್ಸವವು ಮಾ.12 ರಿಂದ 14ರವರೆಗೆ ಮೂರು ದಿನಗಳ ಕಾಲ ಜರುಗಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 12 ರಂದು ಭಾನುವಾರದಂದು ಬೆಳಗ್ಗೆ 4.30ಕ್ಕೆ ಗಣಪತಿಹೋಮದೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. 5.30ಕ್ಕೆ ಕೇರಳದ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಕೃಷ್ಣಕುಮಾರ್ ಅವರು ವಿಶೇಷ ಆಶ್ಲೇಷ ಪೂಜೆ ನಡೆಸಿಕೊಡುತ್ತಾರೆ. ಸಂಜೆ 7 ಗಂಟೆಗೆ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಅನ್ನದಾನ ಮಂಟಪವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‌ಕುಮಾರ್ ವಹಿಸಲಿದ್ದು, ಅತಿಥಿಗಳಾಗಿ ಚೌಡ್ಲು ಗ್ರಾಪಂ ಅಧ್ಯಕ್ಷ ಪಿ.ಎಂ.ಗಣಪತಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಪಾಲ್ಗೊಳ್ಳಲಿದ್ದಾರೆ.
ಮಾ. 13ರಂದು ಸೋಮವಾರೆ ಮಧ್ಯಾಹ್ನ 12.30ಕ್ಕೆ ಉತ್ಸವ ಆರಂಭವಾಗಲಿದೆ. ಸಂಜೆ 4.30ಕ್ಕೆ ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಕಲಶದ ಮೆರವಣಿಗೆ ಆರಂಭವಾಲಿದೆ. ಸಂಜೆ 6.30ಕ್ಕೆ ವಿಷ್ಣುಮೂರ್ತಿ ದೇವರ ವೆಳ್ಳಾಟಂ, 7 ಗಂಟೆಗೆ ಕರಿಂಗುಟ್ಟಿ ದೇವರ ವೆಳ್ಳಾಟಂ, 7,30ಕ್ಕೆ ಕಂಡಕರ್ಣ ದೇವರ ವೆಳ್ಳಾಟಂ, ರಾತ್ರಿ 8.30 ಕ್ಕೆ ಭಗವತಿ ದೇವಿಯ ವೆಳ್ಳಾಟಂ, 9.30ಕ್ಕೆ ರಕ್ತ ಚಾಮುಂಡಿ ದೇವಿಯ ವೆಳ್ಳಾಟಂ, ರಾತ್ರಿ 10.30ಕ್ಕೆ ಪೊಟ್ಟನ್ ದೇವರ ವೆಳ್ಳಾಟಂ ಮುಗಿದ ನಂತರ ರಾತ್ರಿ 11.30ಕ್ಕೆ ದೇವರ ಕಳಿಕ್ಕಾಪಾಟ್ ನಡೆಯಲಿದೆ. ಸೋಮವಾರದಂದು ರಾತ್ರಿ 7.30 ಗಂಟೆಯಿoದ ದೇವಾಲಯದಲ್ಲಿ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅನ್ನದಾನದ ನಂತರ ಆಕರ್ಷಕ ಪಟಾಕಿ ಮತ್ತು ಸಿಡಿಮದ್ದುಗಳ ಪ್ರದರ್ಶನ ಜರುಗಲಿದೆ.
ಮಾರ್ಚ್ 14 ರಂದು ಜಾತ್ರೋತ್ಸವದ ಕೊನೆಯ ದಿನ ಬೆಳಗಿನ ಜಾವ 1 ಗಂಟೆಗೆ ವಿವಿಧ ಕೋಲ ನಡೆಯಲಿದೆ. ಅಪರಾಹ್ನ 3.00 ಗಂಟೆಗೆ ಕೋಲಗಳ ಮುಕ್ತಾಯ ಕಾರ್ಯಕ್ರಮ ಜರುಗಲಿದೆ.