Advertisement
9:34 AM Sunday 3-December 2023

  ಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಝುಬೈರ್ ಸಅದಿ ಆಯ್ಕೆ

08/03/2023

ಮಡಿಕೇರಿ ಮಾ.8 :    ಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಘಟಕದ  ಮಹಾಸಭೆಯು ಕುಶಾಲನಗರದಲ್ಲಿ ನಡೆಯಿತು.

ಕೊಡಗು ಜಿಲ್ಲಾ ಉಸ್ತುವಾರಿ ಹಕೀಂ ಸರ್  ಹಾಗೂ ರಾಜ್ಯ ದಅವಾ ಕಾರ್ಯದರ್ಶಿ ಮುನೀರ್ ಸಖಾಫಿ  ಅವರ ನೇತೃತ್ವದಲ್ಲಿ ಸಭೆಯನ್ನು ಎಸ್‍ಎಸ್‍ಎಫ್   ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಯಾಕೂಬ್ ಮಾಸ್ಟರ್  ಉದ್ಘಾಟಿಸಿದರು.

ಎಸ್‍ಎಸ್‍ಎಫ್   ಕೊಡಗು ಜಿಲ್ಲಾಧ್ಯಕ್ಷ  ಶಾಫಿ ಸಅದಿ ಸೋಮವಾರಪೇಟೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್‌ವೈಎಸ್ ಜಿಲ್ಲಾ ನಾಯಕ  ಹಮೀದ್ ಮುಸ್ಲಿಯಾರ್   ಪ್ರಾರ್ಥನೆ ನೆರವೇರಿಸಿದರು.

ಸಭೆಯಲ್ಲಿ ಎಸ್‍ಎಸ್‍ಎಫ್ ಕೊಡಗು ಜಿಲ್ಲಾ  ಘಟಕಕ್ಕೆ ನೂತನ ಪದಾಧಿಕಾರಿಗಳನ್ನು   ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಳ್ ಸಅದಿ  ಘೋಷಣೆ ಮಾಡಿದರು.

ನೂತನ ಅಧ್ಯಕ್ಷರಾಗಿ  ಝುಬೈರ್ ಸಅದಿ ಮಾಲ್ದಾರೆ, ಪ್ರಧಾನ ಕಾರ್ಯದರ್ಶಿಯಾಗಿ ಜುನೈದ್ ಅಮ್ಮತ್ತಿ, ಕೋಶಾಧಿಕಾರಿಯಾಗಿ ಸಯ್ಯಿದ್ ಶಿಹಾಬ್ ತಂಙ್ಙಳ್ ಹೊಸತೋಟ ಹಾಗೂ ಕಾರ್ಯದರ್ಶಿಗಳಾಗಿ ರಫೀಕ್ ಲತೀಫಿ, ಕಮರುದ್ದೀನ್ ಅನ್ವಾರಿ ಸಖಾಫಿ,ರಝಾಕ್ ಸಅದಿ,ಇಬ್ರಾಹಿಂ ಮಾಸ್ಟರ್,ಗಫೂರ್ ಮಾಪಿಳತ್ತೋಡು, ರಿಯಾಝ್ ಗುಯ್ಯ, ಸ್ವಾದಿಕ್ ಕರ್ಕಳ್ಳಿ, ಮೂಸಾ ಅಮಾನಿ, ಶಾಫಿ ಕುಂಜಿಲ, ಆಯ್ಕೆಯಾದರು.

ಎಸ್‍ಎಸ್‍ಎಫ್ ಮಾಜಿ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಎಸ್‌ವೈಎಸ್ ಕೊಡಗು ಪ್ರಧಾನ ಕಾರ್ಯದರ್ಶಿ ಮೊಯ್ದೀನ್ ಪೊನ್ನತ್ ಮೊಟ್ಟೆ, ಎಸ್‍ಎಸ್‍ಎಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಹೊಸತೋಟ, ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಅಝೀಝ್ ಸಖಾಫಿ, ಅಬ್ದುಲ್ ಜಲೀಲ್ ಅಮೀನಿ, ಮುಜೀಬ್ ಕೊಂಡಂಗೇರಿ, ಕೊಡಗು ಜಿಲ್ಲಾ ವಕ್ಫ್ ಸದಸ್ಯ  ಮೊಯ್ದೀನ್ ಕುಂಞಿ ಬಾಳುಗೋಡ್, ಎಸ್‌ವೈಎಸ್ ನಾಯಕರಾದ ಹಂಝ ಮಾನಿ‌, ಹುಸೈನ್ ಕುಶಾಲನಗರ, ಹಸೈನಾರ್ ಕುಶಾಲನಗರ  ಹಾಜರಿದ್ದರು.

ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದರ  ದುಆದೊಂದಿಗೆ ಸಭೆ ಮುಕ್ತಾಯಗೊಂಡಿತು.  ಕಾರ್ಯದರ್ಶಿ ರಹೀಂ ಸ್ವಾಗತಿಸಿ, ನೂತನ ಕಾರ್ಯದರ್ಶಿ ಜುನೈದ್ ವಂದಿಸಿದರು.