Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಾ.15 ರಂದು ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನ ಉದ್ಘಾಟನೆ*
  • *ಆನೆ-ಮಾನವ ಸಂಘರ್ಷ ಶಾಶ್ವತ ಪರಿಹಾಕ್ಕೆ ಪ್ರಾಮಾಣಿಕ ಯತ್ನ : ಮಡಿಕೇರಿ 7, ನಾಗರಹೊಳೆ ವಿಭಾಗಕ್ಕೆ 20 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಂಜೂರು : ಸಚಿವ ಈಶ್ವರ ಖಂಡ್ರೆ*
  • *ಅರಣ್ಯ ಸಚಿವರು ತುರ್ತು ಸಭೆ ನಡೆಸಿ ಕಾಡಾನೆ ದಾಳಿ ನಿಯಂತ್ರಿಸದಿದ್ದಲ್ಲಿ ಪ್ರತಿಭಟನೆ : ಮಹಿಳಾ ಬಿಜೆಪಿ ಎಚ್ಚರಿಕೆ*
  • *ಕರ್ನಾಟಕ ಸುವರ್ಣ ಸಮುಚ್ಚಯ ಭವನದ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*
  • *ಮಾಯಮುಡಿ ಗ್ರಾ.ಪಂ ಆಡಳಿತಾಧಿಕಾರಿಯಾಗಿ ಪಿ.ಪಿ.ಕವಿತಾ ಅಧಿಕಾರ ಸ್ವೀಕಾರ*
  • *ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗದಿದ್ದಲ್ಲಿ ಅರಣ್ಯ ಸಚಿವರು ರಾಜೀನಾಮೆ ನೀಡಲಿ : ವಿರಾಜಪೇಟೆ ಬಿಜೆಪಿ ಒತ್ತಾಯ*
  • *ಪರಿಹಾರಕ್ಕಿಂತಲೂ ಅಮೂಲ್ಯವಾದದ್ದು ಮನುಷ್ಯನ ಜೀವ : ಕಾಡಾನೆ ಸೆರೆಗೆ ಶಾಸಕರ ಸೂಚನೆ*
  • *ಹಮ್ಮಿಯಾಲದಲ್ಲಿ ಸಾರಿಗೆ ಸಮಸ್ಯೆ : ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ*
  • *ಕೆಎಸ್‌ಐಸಿ ಆವರಣದಲ್ಲಿ ಸ್ಡೇಡಿಯಂ ನಿರ್ಮಾಣ ಯೋಜನೆಗೆ ತಿಲಾಂಜಲಿ : ಸಂಘಟಿತ ಹೋರಾಟಕ್ಕೆ ಸಂದ ಜಯ : ಧನ್ಯವಾದ ಸಲ್ಲಿಸಿದ ಸಂಸದ ಯದುವೀರ್‌ ಒಡೆಯರ್‌*
  • *ಮಡಿಕೇರಿ : ಮಾ.11 ರಂದು ನಗರಸಭೆಯ ಆಯವ್ಯಯ ಸಭೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»ವಿರಾಜಪೇಟೆ ಪುರಸಭೆ ಬಜೆಟ್ ಪೂರ್ವಭಾವಿ ಸಭೆ : ವಿರೋಧದ ನಡುವೆ ಸಭೆ ಮುಂದೂಡಿಕೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಪುರಸಭೆ ಬಜೆಟ್ ಪೂರ್ವಭಾವಿ ಸಭೆ : ವಿರೋಧದ ನಡುವೆ ಸಭೆ ಮುಂದೂಡಿಕೆ

ಮಾರ್ಚ್ 9, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ಮಾ.9 : ವಿರಾಜಪೆಟೆಯ ಪುರಸಭೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವಿರಾಜಪೇಟೆ ಪುರಸಭೆ ವ್ಯಾಪ್ತಿಯ ರಸ್ತೆಯಲ್ಲಿ ವಾಹನ ನಿಲುಗಡೆ ಶುಲ್ಕ ವಿಧಿಸುವ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ಗದ್ದಲ ಉಂಟಾಗಿ ಪರಸ್ಪರ ದಿಕ್ಕಾರ ಕೂಗಿ, ಸಭೆ ಮೊಟಕುಗೊಳಿಸುವ ಘಟನೆ ನಡೆಯಿತು.
ಪುರಸಭೆ ಅಧ್ಯಕ್ಷೆ ಸುಸ್ಮೀತಾ ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ಕಳೆದ ಬಾರಿ ನಾವು ವಾಹನ ನಿಲುಗಡೆ ಶುಲ್ಕವನ್ನು ರದ್ದುಪಡಿಸಿದ್ದೇವೆ. ಆದರೆ ಈ ಬಾರಿ ಅದನ್ನು ಅಳವಡಿಸಿ ಬದ್ರೀಯಾ ಜಂಕ್ಷನ್‍ನಿಂದ ಗೋಣಿಕೊಪ್ಪ ಸಂಪರ್ಕ ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ರಸ್ತೆ, ಗಾಂಧಿನಗರ ರಸ್ತೆಗೆ ವಾಹನ ಶುಲ್ಕ ನಿಗದಿಗೆ ಆಕ್ಷೇಪ ವ್ಯಕ್ತಪಡಿಸಿ ಇದು ಜನರಿಗೆ ಹೊರೆಯಾಗಲಿದ್ದು ಇದನ್ನು ಕೈ ಬಿಡುವಂತೆ ಒತ್ತಾಯಿಸಿದರು.
ಬಿಜೆಪಿಯ ನಾಮಕರಣ ಸದಸ್ಯ ಕೂತಂಡ ಸಚಿನ್ ಕುಟ್ಟಯ್ಯ ಪಟ್ಟಣದಲ್ಲಿ ವಾಹನ ನಿಲುಗಡೆ ಸಮಸ್ಯೆ ತೀವ್ರವಾಗಿದೆ. ಅಂಗಡಿ ಮಾಲಿಕರ ವಾಹನವನ್ನು ಬೆಳಗ್ಗಿನಿಂದ ಸಂಜೆವರೆಗೆ ನಿಲ್ಲಿಸುತ್ತಾರೆ. ಕೆಲವರು ಬೆಳಿಗ್ಗೆ ವಾಹನ ನಿಲ್ಲಿಸಿ ದೂರದೂರಿಗೆ ಕೆಲಸಗಳಿಗೆಂದು ತೆರಳಿ ರಾತ್ರಿ ವಾಹನ ತೆಗೆಯುತ್ತಾರೆ. ಇದನ್ನು ತಪ್ಪಿಸಲು ಈ ರೀತಿ ಶುಲ್ಕ ಅಗತ್ಯ ಎಂದು ಪ್ರತಿಕ್ರಿಯಿಸಿದರು.
ಪ್ರತಿಪಕ್ಷದ ಸದಸ್ಯ ರಾಜೇಶ್ ಕಿತ್ತೂರುರಾಣಿ ಚೆನ್ನಮ್ಮ ರಸ್ತೆಯಲ್ಲಿ ನ್ಯಾಯಾಲಯ, ಆಸ್ವತ್ರೆ ಪುರಸಭೆ ಕಚೇರಿ, ತಾಲೂಕು ಕಚೇರಿ ಹೀಗೆ ಅನೇಕ ಕಚೇರಿಗಳಿವೆ. ನಿತ್ಯ ಕೆಲಸಗಳಿಗೆ ಬಂದು ಹೋಗುವ ಜನರಿಗೆ ವೃಥಾ ತೊಂದರೆಯಾಗಲಿದೆ. ಹತ್ತು ರೂ ಎಂದರು ನಾಳೆ ಅದು ದಂಧೆಯಂತೆ ಆಗಿ ಶುಲ್ಕ ಹೆಚ್ಚಾಗುತ್ತಾ ಹೋಗುತ್ತದೆ. ಕೋವಿಡ್ ಸೇರಿದಂತೆ ಬೆಲೆ ಏರಿಕೆ ಮುಂತಾದ ಕಾರಣಗಳಿಂದ ಜನರು ಆರ್ಥಿಕ ಸಂಕಷ್ಟದಲ್ಲಿದ್ದು ಅವರಿಗೆ ಮತ್ತೆ ತೊಂದರೆ ನೀಡುವುದು ಸರಿಯಲ್ಲ ಎಂದರು.
ಪ್ರತಿಪಕ್ಷದ ಸದಸ್ಯ ಪ್ರಥ್ವಿನಾಥ್ ಮಾತನಾಡಿ, ಶಾಸಕರ ಕಚೇರಿಗೆ ಹೋಗುವವರು ವಾಹನ ಶುಲ್ಕ ನೀಡಿಹೋಗುವದು ನ್ಯಾಯವೇ ಎಂದು ಪ್ರಶ್ನಿಸಿದರು.
ನೆಲಮಾಳಿಗೆ ಪಾರ್ಕಿಂಗ್ ಇಲ್ಲದೆ ಮಳಿಗೆ ಆಗಿದೆ. ತಾಲೂಕು ಕಚೇರಿಯಲ್ಲಿ ಸಹ ವಾಹನ ನಿಲುಹಡೆಗೆ ವ್ಯವಸ್ಥೆ ಇಲ್ಲ, ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದರು. ಈ ವಿಚಾರವಾಗಿ ಸದಸ್ಯರಾದ ಮತ್ತೀನ್, ದೇಚಮ್ಮ ಸಹ ಮಾತನಾಡಿ ವಾಹನ ಪಾರ್ಕಿಂಗ್‍ಗೆ ಶುಲ್ಕ ನಿಗದಿ ಸರಿಯಲ್ಲ ಎಂದರು.
ರಾಜೇಶ್ ಪದ್ಮನಾಭ ಮತ್ತೀತರ ಸದಸ್ಯರು ಈ ವಿಚಾರವನ್ನು ಬಹುಮತಕ್ಕೆ ಹಾಕಿ ಆ ಮೂಲಕ ಶುಲ್ಕ ಎತ್ತಾವಳಿ ಬೇಕೆ ಬೇಡವೇ ಎಂದು ನಿರ್ಧಾರಿತವಾಗಲಿ ಎಂದು ಪಟ್ಟು ಹಿಡಿದರು.
ಮುಖ್ಯಧಿಕಾರಿ ಚಂದ್ರಕುಮಾರ್ ಇದು ಸಾಧ್ದ ಇಲ್ಲ ಎಂದಾಗ ರಾಜೇಶ್ ಇದೇನು ನಿಮ್ಮ ಚಕ್ರಾಧಿಪತ್ಯವೇ ಎಂದು ಖಾರವಾಗಿ ಪ್ರಶ್ನಿಸಿದರು.
ಸದಸ್ಯ ಪ್ರಥ್ವಿನಾಥ್ ಪ್ರತಿಕ್ರಿಯಿಸಿ ಇಲ್ಲಿ ಪುರಸಭೆಯ ನಿಯಮ ಪಾಲನೆ ಇಲ್ಲ, ಇದು ಸಂವಿಧಾನಕ್ಕೆ ಬೆಲೆ ಇಲ್ಲ, ಪ್ರಜಾಪ್ರಭುತ್ವದ ಕಗ್ಗೋಲೆ ಎಂದು ಕೂಗಾಡಿದರು. ಈ ಸಂಸರ್ಭ ಸದಸ್ಯ ಮತ್ತೀನ್ ಸಂಯಮ ಮೀರಿ ಮಾತನಾಡಿ ನಿಯಮ ಗೊತ್ತಿಲ್ಲವಾದರೆ ಎದ್ದು ಹೋಗಿ ಎಂದು ಮುಖ್ಯಧಿಕಾರಿಗೆ ಹೇಳಿದಾಗ ಚಂದ್ರಕುಮರ್ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಆಡಳಿತ ಪಕ್ಷದ ಸದಸ್ಯರಾದ ಸುನೀತಾ ಜೂನಾ, ಅನಿತಾ ಕುಮಾರ್, ಮಹಾದೇವ ಮತ್ತಿತರರು ವಾಹನ ಶುಲ್ಕ ವಿಧಿಸಿಯೇ ತೀರಬೇಕೆಂದರು. ಪ್ರತಿಪಕ್ಷದರು ಏರಿದ ಧ್ವನಿಯಲ್ಲಿ ಕೂಗಾಡಿದರು. ಈ ವಿಚಾರವನ್ನು ಮತಕ್ಕೆ ಹಾಕುವುದಿಲ್ಲ ಮತ್ತು ಇದರಲ್ಲಿ ಯಾವ ಬದಲಾವಣೆ ಇಲ್ಲ ಎಂದು ಅಧ್ಯಕ್ಷೆ ಶುಸ್ಮೀತಾ ಸಭೆಗೆ ತಿಳಿಸಿದಾಗ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸಭಾಂಗಣದ ಅಧ್ಯಕ್ಷ ಪೀಠದ ಮುಂದೆ ಧರಣಿ ನಡೆಸಿ ಆಡಳಿತ ಪಕ್ಷದ ವಿರುದ್ದ ದಿಕ್ಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಸಭಾಂಗಣದ ಮುಂದೆ ಬಿಜೆಪಿ ಸದಸ್ಯರು ಪ್ರತಿಪಕ್ಷದ ಸದಸ್ಯರ ವಿರುದ್ದ ಎದುರಾಗಿ ನಿಂತು ದಿಕ್ಕಾರ ಕೂಗಿದರು. ಇದರ ಬಳಿಕ ಮತ್ತೆ ಸಭೆಯಲ್ಲಿ ಶುಲ್ಕ ರದ್ದತಿಗೆ ಪ್ರತಿಪಕ್ಷ ಪಟ್ಟು ಮುಂದುವರಿಸಿದರು.
ಸದಸ್ಯ ಪಟ್ಟಡ ರಂಜಿ ಪೂಣಚ್ಚ ಸಹ ಆಡಳಿತರೂಢ ಪಕ್ಷದ ನಡೆಯನ್ನು ಖಂಡಿಸಿ ಮಾತನಾಡಿದರು. ಒಂದು ಹಂತದಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುವುದೇ ಯಾರಿಗೂ ತಿಳಿಯದಂತ ಪ್ರಕ್ಷುಬ್ದ ವಾತಾವರಣ ಉಂಟಾಗಿ ಗೊಂದಲಮಯವಾಗಿತ್ತು.
ಸಭೆಯಲ್ಲಿ ಯಾವ ತೀರ್ಮಾನಗಳು, ಕಾರ್ಯಸೂಚಿಗಳ ಪ್ರಕಾರ ಚರ್ಚೆ ಮಾಡಲು ಅವಕಾಶವಾಗಲಿಲ್ಲ. ಸಭೆಯಲ್ಲಿ ಕೇವಲ ಆರೋಪ ಪ್ರತ್ಯಾರೋಪಗಳೇ ಎದುರಾಗಿ ಅಭಿವೃದ್ದಿ ಕಾರ್ಯದ ಪರ ಯಾವ ಚರ್ಚೆಯೂ ನಡೆಯದೆ ಕೊನೆಯಲ್ಲಿ ಅಧ್ಯಕ್ಷೆ ಸುಸ್ಮೀತಾ ಸಭೆಯನ್ನು ಮುಕ್ತಾಯಗೊಳಿಸುವುದಾಗಿ ಘೋಷಿಸಿದರು.
ಯಾವ ಚರ್ಚೆ ಇಲ್ಲದೆ ಸಭೆ ಮುಗಿಸಿದ್ದರಿಂದ ಶುಲ್ಕ ವಿಧಿಸಲು ಟೆಂಡರ್ ಕರೆಯುವ ನಿರ್ಧಾರ ಮಾಡಿತು.
ಸಭೆಯಲ್ಲಿ ಪುರಸಭೆ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋಧ, ಅಭಿಯಂತರ ಹೇಮಾ ಕುಮಾರ್, ಆರೋಗ್ಯಧಿಕಾರಿ ಹಾಗೂ ಪುರಸಭೆಯ ಸದಸ್ಯರು ಹಾಜರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಾ.15 ರಂದು ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನ ಉದ್ಘಾಟನೆ*

ಮಾರ್ಚ್ 11, 2026

*ಆನೆ-ಮಾನವ ಸಂಘರ್ಷ ಶಾಶ್ವತ ಪರಿಹಾಕ್ಕೆ ಪ್ರಾಮಾಣಿಕ ಯತ್ನ : ಮಡಿಕೇರಿ 7, ನಾಗರಹೊಳೆ ವಿಭಾಗಕ್ಕೆ 20 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಂಜೂರು : ಸಚಿವ ಈಶ್ವರ ಖಂಡ್ರೆ*

ಮಾರ್ಚ್ 10, 2026

*ಅರಣ್ಯ ಸಚಿವರು ತುರ್ತು ಸಭೆ ನಡೆಸಿ ಕಾಡಾನೆ ದಾಳಿ ನಿಯಂತ್ರಿಸದಿದ್ದಲ್ಲಿ ಪ್ರತಿಭಟನೆ : ಮಹಿಳಾ ಬಿಜೆಪಿ ಎಚ್ಚರಿಕೆ*

ಮಾರ್ಚ್ 10, 2026

*ಆನೆ-ಮಾನವ ಸಂಘರ್ಷ ಶಾಶ್ವತ ಪರಿಹಾಕ್ಕೆ ಪ್ರಾಮಾಣಿಕ ಯತ್ನ : ಮಡಿಕೇರಿ 7, ನಾಗರಹೊಳೆ ವಿಭಾಗಕ್ಕೆ 20 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಂಜೂರು : ಸಚಿವ ಈಶ್ವರ ಖಂಡ್ರೆ*

ಮಾರ್ಚ್ 10, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಬೆಂಗಳೂರು NEWS DESK ಮಾ.10: ಆನೆ-ಮಾನವ ಸಂಘರ್ಷ ನಿಯಂತ್ರಿಸಲು 2025-26ನೇ ಸಾಲಿನಲ್ಲಿ ಮಡಿಕೇರಿ ವಿಭಾಗಕ್ಕೆ 7 ಕಿ.ಮೀ ಮತ್ತು ನಾಗರಹೊಳೆ…

*ಅರಣ್ಯ ಸಚಿವರು ತುರ್ತು ಸಭೆ ನಡೆಸಿ ಕಾಡಾನೆ ದಾಳಿ ನಿಯಂತ್ರಿಸದಿದ್ದಲ್ಲಿ ಪ್ರತಿಭಟನೆ : ಮಹಿಳಾ ಬಿಜೆಪಿ ಎಚ್ಚರಿಕೆ*

ಮಾರ್ಚ್ 10, 2026

*ಕರ್ನಾಟಕ ಸುವರ್ಣ ಸಮುಚ್ಚಯ ಭವನದ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*

ಮಾರ್ಚ್ 10, 2026

*ಮಾಯಮುಡಿ ಗ್ರಾ.ಪಂ ಆಡಳಿತಾಧಿಕಾರಿಯಾಗಿ ಪಿ.ಪಿ.ಕವಿತಾ ಅಧಿಕಾರ ಸ್ವೀಕಾರ*

ಮಾರ್ಚ್ 10, 2026

*ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗದಿದ್ದಲ್ಲಿ ಅರಣ್ಯ ಸಚಿವರು ರಾಜೀನಾಮೆ ನೀಡಲಿ : ವಿರಾಜಪೇಟೆ ಬಿಜೆಪಿ ಒತ್ತಾಯ*

ಮಾರ್ಚ್ 10, 2026

*ಪರಿಹಾರಕ್ಕಿಂತಲೂ ಅಮೂಲ್ಯವಾದದ್ದು ಮನುಷ್ಯನ ಜೀವ : ಕಾಡಾನೆ ಸೆರೆಗೆ ಶಾಸಕರ ಸೂಚನೆ*

ಮಾರ್ಚ್ 10, 2026

*ಹಮ್ಮಿಯಾಲದಲ್ಲಿ ಸಾರಿಗೆ ಸಮಸ್ಯೆ : ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ*

ಮಾರ್ಚ್ 10, 2026

*ಕೆಎಸ್‌ಐಸಿ ಆವರಣದಲ್ಲಿ ಸ್ಡೇಡಿಯಂ ನಿರ್ಮಾಣ ಯೋಜನೆಗೆ ತಿಲಾಂಜಲಿ : ಸಂಘಟಿತ ಹೋರಾಟಕ್ಕೆ ಸಂದ ಜಯ : ಧನ್ಯವಾದ ಸಲ್ಲಿಸಿದ ಸಂಸದ ಯದುವೀರ್‌ ಒಡೆಯರ್‌*

ಮಾರ್ಚ್ 9, 2026

*ಮಡಿಕೇರಿ : ಮಾ.11 ರಂದು ನಗರಸಭೆಯ ಆಯವ್ಯಯ ಸಭೆ*

ಮಾರ್ಚ್ 9, 2026

*ಮಾ.12ರ ಹೋರಾಟಕ್ಕೆ ಸಿಪಿಐಎಂ ಪಕ್ಷದ ವಿರಾಜಪೇಟೆ ಘಟಕ ಬೆಂಬಲ : ಕೆ.ಎಸ್ ರಮೇಶ್*

ಮಾರ್ಚ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.