Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮೂರ್ನಾಡಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಅರಿವು*
  • *ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*
  • *ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*
  • *ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಸಿಎಂ, ಶಾಸಕ ಪೊನ್ನಣ್ಣ ಭೇಟಿ*
  • *ದೊಡ್ಡಸ್ಥಿಕೆಯಿಂದ ಪದ್ಧತಿ–ಸಂಸ್ಕೃತಿಯ ಕಡೆಗಣನೆ ಸಲ್ಲದು : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*
  • *ಟೆಂಪೋ ಟ್ರಾವೆಲರ್ ಮೇಲೆ ಮಗುಚಿದ ಲಾರಿ : ನಾಲ್ವರಿಗೆ ಗಾಯ*
  • *ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*
  • *ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*
  • *ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*
  • *ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.46.86 ಲಕ್ಷ ನಿವ್ವಳ ಲಾಭ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»ಮಳೆಹಾನಿ ಸಂತ್ರಸ್ತರಿಗಾಗಿ ಪೀಪಲ್ಸ್ ಫೌಂಡೇಷನ್ ನಿಂದ 25 ಮನೆಗಳ ನಿರ್ಮಾಣ : ಮಾ.13 ರಂದು ಹಸ್ತಾಂತರ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಳೆಹಾನಿ ಸಂತ್ರಸ್ತರಿಗಾಗಿ ಪೀಪಲ್ಸ್ ಫೌಂಡೇಷನ್ ನಿಂದ 25 ಮನೆಗಳ ನಿರ್ಮಾಣ : ಮಾ.13 ರಂದು ಹಸ್ತಾಂತರ

ಮಾರ್ಚ್ 10, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.10 : ಮೂರು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಮಹಾಮಳೆ ಹಾನಿಯಿಂದ ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ನೆಲ್ಯಹುದಿಕೇರಿಯ ನಲ್ವತ್ತುಎಕರೆ ಗ್ರಾಮದಲ್ಲಿ ಪೀಪಲ್ಸ್ ಫೌಂಡೇಷನ್ ವತಿಯಿಂದ 25 ಮನೆಗಳನ್ನು ನಿರ್ಮಿಸಲಾಗಿದೆ. ಇದರ ಹಸ್ತಾಂತರ ಕಾರ್ಯಕ್ರಮ ಮಾ.13 ರಂದು ನಡೆಯಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್‍ನ ವಲಯ ಸಂಚಾಲಕರು ಹಾಗೂ ಯೋಜನೆಯ ವಲಯ ಮೇಲ್ವಿಚಾರಕರಾದ ಯು. ಅಬ್ದುಸ್ಸಲಾಮ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಾಅತೆ ಇಸ್ಲಾಮಿ ಹಿಂದ್‍ನ ಅಧೀನ ಸಂಸ್ಥೆ ಪೀಪಲ್ಸ್ ಫೌಂಡೇಶನ್ ಮೂಲಕ ಸುಮಾರು 6 ಲಕ್ಷ ವೆಚ್ಚದ 25 ಮನೆಗಳ ‘ಪೀಪಲ್ಸ್ ವಿಲೇಜ್ ಕೊಡಗು’ವನ್ನು ಎಂ.ಕೆ. ಅಶ್ರಫ್ ಅವರ ಉಸ್ತುವಾರಿಯಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಪ್ರತಿ ಮನೆ 500 ಚದರ ಅಡಿ ವಿಸ್ತೀರ್ಣದ್ದಾಗಿದ್ದು, 3.50 ಸೆಂಟ್ಸ್ ಜಾಗವನ್ನು ಹೊಂದಿದೆ. ಈ ಮನೆಗಳನ್ನು ಜಾತಿ ಮತ ಭೇದವಿಲ್ಲದೆ ಎಲ್ಲಾ ಸಮುದಾಯಕ್ಕೆ ಸೇರಿದ ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾಗುವುದೆಂದು ಹೇಳಿದರು.
ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಸಂಕಷ್ಟಗಳು ತಲೆದೋರಿ ಮನೆಗಳನ್ನು ಕಳೆದುಕೊಂಡು ಹಲವರು ನಿರಾಶ್ರಿತರಾದ ಸಂದರ್ಭ ಜಮಾಅತೆ ಇಸ್ಲಾಮೀ ಹಿಂದ್ ಕೊಡಗು ಜಿಲ್ಲೆ, ಹೆಚ್.ಆರ್.ಎಸ್ ಕರ್ನಾಟಕ ಹಾಗೂ ಕೊಡಗು ರಿಲೀಫ್ ಸೆಲ್ ಸಂಯುಕ್ತವಾಗಿ ವಸತಿ ಯೋಜನೆ ರೂಪಿಸಿದವು. ಕೇರಳ ರಾಜ್ಯದ ಉದ್ಯಮಿ ಅಬ್ದುಲ್ ಅವರಿಗೆ ಈ ವಿಚಾರ ತಿಳಿಸಿದ ಸಂದರ್ಭ ಅವರು, ನಲ್ವತ್ತೇಕರೆ ಪ್ರದೇಶದಲ್ಲಿ ಎರಡು ಏಕರೆ ಜಮೀನನ್ನು ಮನೆ ನಿರ್ಮಾಣಕ್ಕಾಗಿ ಖರೀದಿಸಿ, ಸಂಸ್ಥೆಗೆ ಉದಾರವಾಗಿ ನೀಡಿದರು ಎಂದು ಅಬ್ದುಸ್ಸಲಾಮ್ ಸ್ಮರಿಸಿದರು.
ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿದ ಬಳಿಕವೂ ಉಳಿದಿರುವ ಜಾಗದಲ್ಲಿ ಸಮುದಾಯ ಭವನ, ಅಂಗನವಾಡಿ, ನ್ಯಾಯ ಬೆಲೆ ಅಂಗಡಿಗಳನ್ನು ನಿರ್ಮಿಸಿ ಅನುಕೂಲ ಕಲ್ಪಿಸಲು ಸಂಸ್ಥೆ ನಿರ್ಧರಿಸಿದೆ ಎಂದರು.
::: ಮನೆಗಳ ಹಸ್ತಾಂತರ :::
ಮಾರ್ಚ್ 13ರಂದು ಸಂಜೆ 4.30 ಗಂಟೆಗೆ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ಕೇರಳದ ಪೀಪಲ್ಸ್ ಫೌಂಡೇಶನ್ ಅಧ್ಯಕ್ಷ ಎಂ.ಕೆ.ಮುಹಮ್ಮದಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. 25 ಮನೆಗಳನ್ನು ಒಳಗೊಂಡಿರುವ “ಪೀಪಲ್ಸ್ ವಿಲೇಜ್’ನ್ನು ಸಮಾಜದ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮವನ್ನು ಅರಮೇರಿ ಕಳಂಚೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿ ಉದ್ಘಾಟಿಸಲಿದ್ದಾರೆ. ಶಾಸಕರುಗಳಾದ ಎಂ.ಪಿ.ಅಪ್ಪಚ್ಚುರಂಜನ್, ಯು.ಟಿ.ಖಾದರ್, ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಸಮಾಜ ಸೇವಕ ಎ.ಎಸ್.ಪೊನ್ನಣ್ಣ, ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಬೆಳ್ಗಾಮೀ ಮುಹಮ್ಮದ್ ಸಾದ್, ಕೇರಳ ರಾಜ್ಯಾಧ್ಯಕ್ಷ ಎಂ.ಐ.ಅಬ್ದುಲ್ ಅಝೀಜ್, ಉಪಾಧ್ಯಕ್ಷ ಪಿ.ಮುಜೀಬುರ್ರಹ್ಮಾನ್, ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಎಂ.ಹೆಚ್.ಮುಹಮ್ಮದ್ ಕುಂಞ, ಅಕ್ಬರ್ ಅಲಿ ಉಡುಪಿ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
::: ಸಂಸ್ಥೆಯ ಸೇವೆ :::
2019ರ ಮಳೆಗಾಲದಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಸಿದ್ದಾಪುರ ಸಮೀಪದ ಕರಡಿಗೋಡು-ಹೊಳೆಕರೆ ಪೈಸಾರಿ, ಬೆಟ್ಟದಕಾಡು, ಬರಡಿ, ನೆಲ್ಲಿಹುದಿಕೇರಿ ಮುಂತಾದೆಡೆಗೆ ವ್ಯಾಪಕ ಹಾನಿಗಳು ಸಂಭವಿಸಿ, ಸಾಕಷ್ಟು ಮಂದಿ ತೊಂದರೆಗೆ ಸಿಲುಕಿದ್ದರು. ಈ ಸಂದರ್ಭ ಜಮಾಅತೇ ಇಸ್ಲಾಮಿ ಹಿಂದ್ ಮತ್ತು ಹೆಚ್.ಆರ್.ಎಸ್.ಸ್ವಯಂ ಸೇವಕರು ಸಂತ್ರಸ್ತರಿಗೆ ಅಗತ್ಯ ವೆರವನ್ನು ಒದಗಿಸಿದ್ದರು.
ಸಂಕಷ್ಟದ ಅವಧಿಯಲ್ಲಿ ಹೆಚ್.ಆರ್.ಎಸ್ ತಂಡ ಮನೆ ಕಳೆದುಕೊಂಡವರಿಗೆ 75 ತಾತ್ಕಾಲಿಕ ಬಿಡಾರಗಳಲ್ಲಿ ಆಶ್ರಯ ನೀಡಿದ್ದು ಮಾತ್ರವಲ್ಲ, ಅವರ ಮೂಲ ಅಗತ್ಯಗಳನ್ನು ಪೂರೈಸಿದ್ದರು. ಕೊಡಗು ರಿಲೀಫ್ ಸೆಲ್‍ನ ಕಛೇರಿಯಲ್ಲಿ ಸೂಪರ್ ಮಾರ್ಕೆಟ್ ಹಾಗೂ ಭಾನುವಾರದ ಸಂತೆ ದಿವಸ ಮಹಾ ಸಂತೆಗಳನ್ನು ಏರ್ಪಡಿಸಿ ಉಚಿತವಾಗಿ ಎಲ್ಲಾ ನಿತ್ಯೋಪಯೋಗಿ ವಸ್ತುಗಳನ್ನು ಪೂರೈಸಿದ್ದರು. ಆರೋಗ್ಯ ಕಾಪಾಡುವ ದೃಷ್ಟಿಯಿಂದ ವೈದ್ಯಕೀಯ ಶಿಬಿರವನ್ನು ಏರ್ಪಡಿಸಿ ಸಂತ್ರಸ್ತರಿಗೆ ಯಾವುದರಲ್ಲೂ ಕೊರತೆಯುಂಟಾಗದಂತೆ ನೋಡಿಕೊಂಡಿತ್ತಲ್ಲದೆ, ನೆಲ್ಲಿಹುದಿಕೇರಿಯ ಹಿರಾ ಮಸೀದಿಯ ನೆಲಮಾಳಿಗೆಯನ್ನು ಐವರು ಸಂತ್ರಸ್ತ ಕುಟುಂಬಗಳಿಗೆ ನೀಡಿ ಆಸರೆ ಒದಗಿಸಿತ್ತೆಂದು ಅಬ್ದುಸ್ಸಲಾಮ್ ತಿಳಿಸಿದರು.
2018 ರಲ್ಲಿ ಸಂಭವಿಸಿದ ಭೂ ಕುಸಿತದ ಪ್ರಾಕೃತಿಕ ವಿಕೋಪದ ಸಂದರ್ಭ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದವರಿಗೆ ಕೊಡಗು ರಿಲೀಫ್ ಸೆಲ್ ಮೂಲಕ 8 ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಜಮಾಅತೆ ಇಸ್ಲಾಮೀ ಹಿಂದ್‍ನ ಜಿಲ್ಲಾ ಸಂಚಾಲಕರಾದ ಪಿ.ಕೆ.ಅಬ್ದುಲ್ ರೆಹೆಮಾನ್, ಸ್ವಾಗತ ಸಮಿತಿ ಉಪಾಧ್ಯಕ್ಷರುಗಳಾದ ಎನ್.ಕೆ.ವಾಸು, ಜೋಸೆಫ್ ಶ್ಯಾಮ್, ಸದಸ್ಯರುಗಳಾದ ಬಾಬುಚಂದ್ರ ಉಳ್ಳಾಗಡ್ಡಿ ಹಾಗೂ ಬೀರಾನ್ ಕುಟ್ಟಿ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮೂರ್ನಾಡಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಅರಿವು*

ಆಗಷ್ಟ್ 26, 2026

*ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*

ಆಗಷ್ಟ್ 26, 2026

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*

ಆಗಷ್ಟ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಆ.26 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದೊಂದಿಗೆ ಬ್ರಹ್ಮಶ್ರೀ…

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಸಿಎಂ, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ದೊಡ್ಡಸ್ಥಿಕೆಯಿಂದ ಪದ್ಧತಿ–ಸಂಸ್ಕೃತಿಯ ಕಡೆಗಣನೆ ಸಲ್ಲದು : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*

ಆಗಷ್ಟ್ 26, 2026

*ಟೆಂಪೋ ಟ್ರಾವೆಲರ್ ಮೇಲೆ ಮಗುಚಿದ ಲಾರಿ : ನಾಲ್ವರಿಗೆ ಗಾಯ*

ಆಗಷ್ಟ್ 26, 2026

*ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*

ಆಗಷ್ಟ್ 26, 2026

*ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*

ಆಗಷ್ಟ್ 26, 2026

*ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*

ಆಗಷ್ಟ್ 26, 2026

*ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.46.86 ಲಕ್ಷ ನಿವ್ವಳ ಲಾಭ*

ಆಗಷ್ಟ್ 26, 2026

*ಕಸ್ತೂರಿ ರಂಗನ್ ವರದಿಯಿಂದ 53 ಗ್ರಾಮಗಳನ್ನು ಕೈಬಿಡಲು ಆಗ್ರಹ : ಸೆ.11ರಂದು ಬೃಹತ್ ಪ್ರತಿಭಟನೆ*

ಆಗಷ್ಟ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.