ಮಡಿಕೇರಿ ಮಾ.11 : ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ 19ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯ ಗಾಂಧಿ ಕ್ರಿಕೆಟರ್ಸ್ ಕಂಡಕರೆ ತಂಡದ ಜರ್ಸಿಯನ್ನು ಕೊಡಗು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರವಿ ಗೌಡ ಬಿಡುಗಡೆಗೊಳಿಸಿದರು.
ಕಂಡಕರೆಯಲ್ಲಿ ಗಾಂಧಿ ಯುವಕ ಸಂಘದ ಅಧ್ಯಕ್ಷರಾದ ಷರೀಫ್ ಪಿ.ಎಂ ಗಾಂಧಿ ಕ್ರಿಕೆಟರ್ಸ್ ತಂಡದ ಆಟಗಾರರಿಗೆ ವಿತರಿಸಿದರು.
ಈ ಸಂದರ್ಭ ಗಾಂಧಿ ಯುವಕ ಸಂಘದ ಸ್ಥಾಪಕ ಪತ್ರಕರ್ತ ಇಸ್ಮಾಯಿಲ್ ಕಂಡಕರೆ,ಪ್ರಧಾನ ಕಾರ್ಯದರ್ಶಿ ಇರ್ಷಾದ್ ಕೆ.ಎಂ,ಉಪಾಧ್ಯಕ್ಷ ಸವಾದ್ ಉಸ್ಮಾನ್ ಈ.ಯು, ಅಫ್ನಾನ್ ಪಿ.ಎಂ, ಸಲ್ಮಾನ್, ಖರೀಮ್, ಮುಬಶ್ಶಿರ್, ಸಹೀರ್, ರಿಯಾಸ್, ಕಂಡಕರೆ ನಿವಾಸಿ ಶುಕೂರ್ ಇದ್ದರು.







