ಮಡಿಕೇರಿ ಮಾ.21 : ಕೊಡಗಿನ ಎಲ್ಲಾ ಮಸೀದಿಗಳಿಗೆ ಉಪವಾಸ ತಿಂಗಳಿನ ಬೆಳಗ್ಗಿನ ಜಾವ ಕೊಡುವ ಆಝಾನ್ ಗೆ (ನಮಾಜ್ ಕರೆ) ವಿಶೇಷ ಅನುಮತಿ ನೀಡಬೇಕೆಂದು ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.
ವಕ್ಫ್ ಜಿಲ್ಲಾಧ್ಯಕ್ಷ ಪಿ.ಎಂ.ಹಕೀಂ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪವಿತ್ರ ರಂಜಾನ್ ಮಾಸದ ಮಹತ್ವದ ಕುರಿತು ವಿವರಿಸಿದರು. ಮುಸ್ಲಿಮರಿಗೆ ರಂಝಾನ್ ಅತೀ ಪುಣ್ಯ ಮತ್ತು ಪ್ರಾಮುಖ್ಯತೆಯನ್ನು ಹೊಂದಿರುವ ತಿಂಗಳಾಗಿದೆ. ಎಲ್ಲರೂ ಒಂದೇ ಕಾರ್ಯವನ್ನು, ಸಮಾನ ರೀತಿಯಲ್ಲಿ, ಏಕಕಾಲದಲ್ಲಿ ಹಾಗೂ ಏಕ ಉದ್ದೇಶದಿಂದ ಮಾಡುತ್ತಿದ್ದೇವೆ ಎನ್ನುವ ಭಾವನೆಯನ್ನು ಮೂಡಿಸುತ್ತದೆ.
ಮುಖ್ಯವಾಗಿ ಉಪವಾಸದ ಸಂದರ್ಭಗಳಲ್ಲಿ ಉಪವಾಸ ಸಿಂಧು ಅಥವಾ ಅಸಿಂಧು ಎಂದು ನಿರ್ಧಾರವಾಗುವುದು ಅಝಾನ್ ನಿಂದ. ಆದ್ದರಿಂದ ರಂಜಾನ್ ತಿಂಗಳನ್ನು ವಿಶೇಷವಾಗಿ ಪರಿಗಣಿಸಿ ಎಲ್ಲಾ ಮಸೀದಿಗಳಿಗೆ ಬೆಳಗ್ಗಿನ ಜಾವ ಆಝಾನ್ ಕರೆಗೆ ವಿಶೇಷ ಅನುಮತಿ ನೀಡಬೇಕೆಂದು ಹಕೀಂ ಮನವಿಯಲ್ಲಿ ತಿಳಿಸಿದ್ದಾರೆ.












