ವಿರಾಜಪೇಟೆ ಮಾ.28 : ವಿರಾಜಪೇಟೆಯ ಸಾದಿಕ್ ಆರ್ಟ್ಸ್ ಲಿಂಕ್ ವತಿಯಿಂದ ಹೆಗ್ಗಳ ಗ್ರಾಮದ ಎಡಮಕ್ಕಿಯಲ್ಲಿ ರಾಷ್ಟ್ರಮಟ್ಟದ ಕಲಾ ಉತ್ಸವ ನಡೆಯಿತು.
ಈ ಕಲಾ ಉತ್ಸವದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಮಹರಾಷ್ಟ್ರ ಸೇರಿದಂತೆ ಇತರೆಡೆಗಳಿಂದ ಕಲಾವಿದರುಗಳು ಭಾಗವಹಿಸಿದ್ದರು.
ಈ ಸಂದರ್ಭ ಹೆಸರಾಂತ ಕಲಾವಿದರುಗಳ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕಲಾವಿದರುಗಳು ಅನೇಕ ಕಲಾಕೃತಿಗಳನ್ನು ಇದೇ ಸಂದರ್ಭ ರಚಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದರುಗಳಾದ ಹರೀಂದ್ರನ್ ಚಲಾದ್, ವಿ.ಪಿ.ನಂದನ್, ಜಾಯ್ ಚಾಕೋ, ಬಾವಾ ಮಾಲ್ದಾರೆ, ಟಿ.ಬಿ. ಪ್ರಸನ್ನ ಕುಮಾರ್, ಸಾದಿಕ್ ಹಂಸ, ಸುರೆಶನ್ ವಿ.ಪಿ., ಶಶಿಧರನ್ ಕೆ. ಇದ್ದರು.







