ಮಡಿಕೇರಿ ಏ.5 : ರೋಟರಿ ಮಡಿಕೇರಿ ವತಿಯಿಂದ ವಿದ್ಯಾಸಿರಿ ಯೋಜನೆಯಡಿ ಮಾದಾಪುರದ ಡಿ.ಚೆನ್ನಮ್ಮ ಪ್ರೌಢಶಾಲೆಗೆ ರೂ.50 ಸಾವಿರ ಮೌಲ್ಯದ ಇನ್ವರ್ಟರ್ ಮತ್ತು ಪ್ರಿಂಟಿಂಗ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು.
ರೋಟರಿ ಮಡಿಕೇರಿ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ, ರೋಟರಿಯನ್ ಉಪ ರಾಜ್ಯಪಾಲ ರತನ್ ತಮ್ಮಯ್ಯ, ಕಾಲೇಜಿನ ಪ್ರಾಂಶುಪಾಲರಾದ ಮಂದಪ್ಪ, ಶಾಲಾ ಸಮಿತಿ ಅಧ್ಯಕ್ಷ ಕರ್ನಲ್ ಕುಮಾರ್, ಕಾರ್ಯದರ್ಶಿ ಮಧು ಬೋಪಣ್ಣ, ರೋಟರಿಯನ್ ಅನಿಲ್ ಕೃಷ್ಣಾನಿ, ಲಲಿತಾ ರಾಘವನ್, ಮಲ್ಲಿಗೆ ಪೈ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.







