Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • * ಸೋಮವಾರಪೇಟೆ : ಮಾ.27 ರಂದು ಶ್ರೀ ರಾಮನವಮಿ ಉತ್ಸವ*
  • *ಗೃಹಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಗ್ರಾಹಕರ ಗಮನಕ್ಕೆ : ಜಿಲ್ಲಾಡಳಿತದಿಂದ ಎಲ್‌ಪಿಜಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ*
  • *ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ : “ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲು” ಅನುಭವುಳ್ಳ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ*
  • *ಕಸಾಪ ಸಂತಾಪ*
  • *ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವ*
  • *ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್ ಗೌಡ*
  • *ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಪೂರ್ವಬಾವಿ ಸಭೆ : ಬಿ.ಸಿ.ದಿನೇಶ್ ಗೆ ಅಭಿನಂದನೆ*
  • *ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ”*
  • *ಕೊಡಗಿನಲ್ಲಿ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿ ರಾಜ್ಯಮಟ್ಟದ ಕ್ರೀಡಾಕೂಟ* 
  • *ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ* 
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು : ಅಂಚೆ ಮತಪತ್ರದ ಮೂಲಕ 2,474 ಮಂದಿ ಮತದಾನಕ್ಕೆ ಹೆಸರು ನೋಂದಣಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು : ಅಂಚೆ ಮತಪತ್ರದ ಮೂಲಕ 2,474 ಮಂದಿ ಮತದಾನಕ್ಕೆ ಹೆಸರು ನೋಂದಣಿ*

ಏಪ್ರಿಲ್ 26, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.26 : ವಿಧಾನಸಭಾ ಚುನಾವಣೆ ಸಂಬಂಧ ಈಗಾಗಲೇ 80 ವರ್ಷ ಮೇಲ್ಪಟ್ಟವರು ಅಂಚೆ ಮತಪತ್ರ ಮೂಲಕ ಮತದಾನ ಮಾಡುವಂತಾಗಲು ಗುರುತಿಸಲಾಗಿದ್ದು, ಈ ಸಂಬಂಧ ಏಪ್ರಿಲ್, 29 ರಿಂದ ಮೇ, 6 ರವರೆಗೆ ಮನೆ ಮನೆಗೆ ತೆರಳಿ ಅಂಚೆ ಮತಪತ್ರ ಮೂಲಕ ಮತದಾನ ಮಾಡಿಸುವಂತಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಮತ್ತು ಪೊಲಿಂಗ್ ಅಧಿಕಾರಿಗಳಿಗೆ  ನಡೆದ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕೊಡಗು ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟವರು 1992 ಮಂದಿ ಅಂಚೆ ಮತಪತ್ರ ಮೂಲಕ ಮತ ಚಲಾಯಿಸಲು ಮುಂದಾಗಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 1,010 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 982 ಮಂದಿ, ಹಾಗೆಯೇ ವಿಕಲಚೇತನರು(ಪಿಡಬ್ಲ್ಯುಡಿ) 482 ಮಂದಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 268 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 214 ಮಂದಿ ವಿಕಲಚೇತನರು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲಿದ್ದು, ಒಟ್ಟಾರೆ 2,474 ಮಂದಿ ಅಂಚೆ ಮತಪತ್ರ ಮೂಲಕ (ನಮೂನೆ-12 ಡಿ) ಮತ ಹಕ್ಕು ಚಲಾಯಿಸಲಿದ್ದಾರೆ ಎಂದರು.’
ಸೆಕ್ಟರ್ ಅಧಿಕಾರಿಗಳು ಮತ್ತು ಪೊಲಿಂಗ್ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ನಿಯಮಾನುಸಾರ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸಿಕೊಂಡು ಬರಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಚುನಾವಣಾ ಆಯೋಗದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ವಲ್ಪವೂ ಲೋಪ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಮಾತನಾಡಿ 80 ವರ್ಷ ಮೇಲ್ಪಟ್ಟ ಮತಗಟ್ಟೆಗೆ ತೆರಳಲು ಸಾಧ್ಯ ಇಲ್ಲದಿರುವವರಿಗೆ ಅಂಚೆ ಮತಪತ್ರವನ್ನು ನೀಡಿ ಮತ ಚಲಾಯಿಸಲು ಅಗತ್ಯ ಕ್ರಮವಹಿಸಬೇಕಿದೆ ಎಂದರು.
ಉಪ ವಿಭಾಗಾಧಿಕಾರಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯತೀಶ್ ಉಲ್ಲಾಳ್ ಅವರು ಪಿಪಿಟಿ ಮೂಲಕ ಮಾಹಿತಿ ನೀಡಿ ಈಗಾಗಲೇ ನಮೂನೆ-12 ಡಿ ಯನ್ನು ಸಂಬಂಧಪಟ್ಟ ಬಿಎಲ್‍ಒಗಳ ಮೂಲಕ ವಿತರಿಸಲು ಕ್ರಮವಹಿಸಲಾಗಿದ್ದು, ಅದರಂತೆ ಅಂಚೆ ಮತಪತ್ರ ಮೂಲಕ ಮತದಾನ ಮಾಡಿಸಿಕೊಂಡು ಬರಬೇಕು ಎಂದರು.
ಪ್ರತಿಯೊಂದು ಮತದಾರರ ಮನೆ ತಲುಪಲು ಅನುಕೂಲವಾಗುವಂತೆ ರೂಟ್ ಮ್ಯಾಪ್ ತಯಾರಿಸಲಾಗಿದ್ದು, ಪ್ರತೀ ಮಾರ್ಗದಲ್ಲಿ ಇಬ್ಬರು ಪೋಲಿಂಗ್ ಅಧಿಕಾರಿಗಳು, ಒಬ್ಬ ಮೈಕ್ರೋ ವೀಕ್ಷಕರು, ಒಬ್ಬ ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ವಿಡಿಯೋ ಗ್ರಾಫರನ್ನು ನಿಯೋಜಿಸಲಾಗುತ್ತದೆ ಎಂದರು.
ಪೋಲಿಂಗ್ ಅಧಿಕಾರಿಗಳು ಅಂಚೆ ಮತಪತ್ರದ ಮತದಾರರ ಪಟ್ಟಿ, ಅಂಚೆ ಮತಪತ್ರ, ಎನ್ವಲಪ್ಸ್, ಪೆನ್, ಇಂಕ್, ಪ್ಯಾಡ್, ಬ್ಲೂಸ್ಟಿಕ್, ಕೌಂಟರ್ ಪೈಲ್‍ಗಳನ್ನು ಸಾಗಿಸುವ ಕ್ಯಾನ್ವಸ್ ಬ್ಯಾಗ್, ವೋಟಿಂಗ್ ಕಂಪಾರ್ಟ್‍ಮೆಂಟ್, ಪೋಸ್ಟಲ್ ಬ್ಯಾಲೆಟ್ ಟ್ರಂಕ್ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕಿದೆ ಎಂದರು.
ಪೋಲಿಂಗ್ ಅಧಿಕಾರಿಗಳು ಮತದಾರರು ನಮೂನೆ-12 ಡಿ ನಲ್ಲಿ ನಮೂದಿಸಿರುವ ವಿಳಾಸಕ್ಕೆ ಭೇಟಿ ನೀಡಬೇಕು. ಮತದಾನದ ಮುಂಚಿತವಾಗಿಯೇ ಬಿಎಲ್‍ಒಗಳ ಮೂಲಕ ಮಾಹಿತಿ ನೀಡಬೇಕು ಎಂದರು.
ಈಗಾಗಲೇ ನೀಡಿರುವ ವಿಳಾಸದಲ್ಲಿ ಭೇಟಿ ಸಮಯದಲ್ಲಿ ಲಭ್ಯವಾಗದಿದ್ದಲ್ಲಿ, ಎರಡನೇ ಬಾರಿ ಭೇಟಿ ನೀಡುವ ಬಗ್ಗೆ ಸಮಯ ಮತ್ತು ದಿನಾಂಕ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.
ಅಂಚೆ ಮತಪತ್ರ ಮೂಲಕ ಮತದಾನ ಮಾಡುವ ಮತದಾರರ ಗುರುತಿನ ಬಗ್ಗೆ ದಾಖಲಿಸಬೇಕು. ಮತದಾರರ ಪಟ್ಟಿಯಲ್ಲಿ ವ್ಯಕ್ತಿಯು ಮತದಾನ ಮಾಡಿರುವ ಬಗ್ಗೆ ಸೂಕ್ತವಾಗಿ ಗುರುತಿಸಬೇಕು ಎಂದರು.
ಮತದಾರರ ಮನೆಯಲ್ಲಿಯೇ ವೋಟಿಂಗ್ ಕಂಪಾರ್ಟ್‍ಮೆಂಟನ್ನು ಸೂಕ್ತ ಸ್ಥಳದಲ್ಲಿ ಇರಿಸಲು ಕ್ರಮ ತೆಗೆದುಕೊಳ್ಳಬೇಕು. ಗೌಪ್ಯ ಮತದಾನದ ಕುರಿತು ಗಮನಹರಿಸಬೇಕು. ಈ ಎಲ್ಲಾ ಕಾರ್ಯಗಳ ಮೇಲ್ವಿಚಾರಣೆಯನ್ನು ಸೆಕ್ಟರ್ ಅಧಿಕಾರಿಗಳು ನಿರ್ವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಅವರು ತಿಳಿಸಿದರು.
ಮತದಾನ ಪ್ರಾರಂಭದಿಂದ ಪೂರ್ಣಗೊಳ್ಳುವವರೆಗೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಮತದಾನದ ಸಂಪೂರ್ಣ ಜವಾಬ್ದಾರಿಯನ್ನು ಸೆಕ್ಟರ್ ಅಧಿಕಾರಿಗಳು ನಿರ್ವಹಿಸಬೇಕು ಎಂದರು.
ಸಂಬಂಧಪಟ್ಟ ಮೈಕ್ರೋ ವೀಕ್ಷಕರು ಮತದಾನ ಸೂಕ್ತವಾಗಿ ನಡೆಯುತ್ತಿದೆ ಎಂಬ ಬಗ್ಗೆ ಹಾಗೂ ಯಾವುದೇ ರೀತಿಯ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಖಾತರಿಪಡಿಸಿಕೊಂಡು ವರದಿ ನೀಡಬೇಕು ಎಂದು ಹೇಳಿದರು. ಚುನಾವಣಾಧಿಕಾರಿಗಳಾದ ಶಬಾನಾ ಎಂ.ಶೇಖ್, ತಹಶೀಲ್ದಾರರು, ಇತರರು ಇದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

* ಸೋಮವಾರಪೇಟೆ : ಮಾ.27 ರಂದು ಶ್ರೀ ರಾಮನವಮಿ ಉತ್ಸವ*

ಮಾರ್ಚ್ 16, 2026

*ಗೃಹಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಗ್ರಾಹಕರ ಗಮನಕ್ಕೆ : ಜಿಲ್ಲಾಡಳಿತದಿಂದ ಎಲ್‌ಪಿಜಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ*

ಮಾರ್ಚ್ 16, 2026

*ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ : “ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲು” ಅನುಭವುಳ್ಳ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ*

ಮಾರ್ಚ್ 16, 2026

*ಗೃಹಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಗ್ರಾಹಕರ ಗಮನಕ್ಕೆ : ಜಿಲ್ಲಾಡಳಿತದಿಂದ ಎಲ್‌ಪಿಜಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ*

ಮಾರ್ಚ್ 16, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.16 : ಜಿಲ್ಲೆಯಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳು ಸಮರ್ಪಕ ಸಂಗ್ರಹವಿದ್ದು, ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳ…

*ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ : “ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲು” ಅನುಭವುಳ್ಳ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ*

ಮಾರ್ಚ್ 16, 2026

*ಕಸಾಪ ಸಂತಾಪ*

ಮಾರ್ಚ್ 15, 2026

*ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವ*

ಮಾರ್ಚ್ 15, 2026

*ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್ ಗೌಡ*

ಮಾರ್ಚ್ 15, 2026

*ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಪೂರ್ವಬಾವಿ ಸಭೆ : ಬಿ.ಸಿ.ದಿನೇಶ್ ಗೆ ಅಭಿನಂದನೆ*

ಮಾರ್ಚ್ 15, 2026

*ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ”*

ಮಾರ್ಚ್ 15, 2026

*ಕೊಡಗಿನಲ್ಲಿ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿ ರಾಜ್ಯಮಟ್ಟದ ಕ್ರೀಡಾಕೂಟ* 

ಮಾರ್ಚ್ 15, 2026

*ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ* 

ಮಾರ್ಚ್ 15, 2026

*ಮಾ.16 ರಂದು “ಸ್ವಚ್ಛ ಕೊಡಗು, ಸುಂದರ ಕೊಡಗು” ಉದ್ಘಾಟನಾ ಕಾರ್ಯಕ್ರಮ*

ಮಾರ್ಚ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.