Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿಶೇಷಚೇತನರಿಗೆ ಕ್ರೀಡಾಕೂಟ : ಕ್ರೀಡೆಯಿಂದ ದೈಹಿಕ, ಮಾನಸಿಕ ದೃಢತೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*
  • *ಕೊಡಗಿನ ವಿವಿಧೆಡೆ ಸ್ವಚ್ಛತಾ ಅಭಿಯಾನ*
  • *ಹೋಂ ನರ್ಸಿಂಗ್ ಕೇರ್ ಟೇಕರ್ ನಿಂದ ಕಳ್ಳತನ : ಆರೋಪಿಯ ಬಂಧನ*
  • *ವಾಹನ, ದನ ಕಳವು ಪ್ರಕರಣದ ಆರೋಪಿಗಳ ಬಂಧನ*
  • *ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನ ಉದ್ಘಾಟನೆ*
  • *ಸೋಮವಾರಪೇಟೆ : ವಿದ್ಯಾರ್ಥಿಗಳು ಸಮಯದ ಮೌಲ್ಯ ಅರಿತುಕೊಳ್ಳಿ : ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಸಲಹೆ*
  • * ಸೋಮವಾರಪೇಟೆ : ಮಾ.27 ರಂದು ಶ್ರೀ ರಾಮನವಮಿ ಉತ್ಸವ*
  • *ಗೃಹಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಗ್ರಾಹಕರ ಗಮನಕ್ಕೆ : ಜಿಲ್ಲಾಡಳಿತದಿಂದ ಎಲ್‌ಪಿಜಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ*
  • *ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ : “ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲು” ಅನುಭವುಳ್ಳ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ*
  • *ಕಸಾಪ ಸಂತಾಪ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಮಹತ್ವ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಮಹತ್ವ*

ಮೇ 1, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 1 :  ದುಡಿಯುವವನಿಗೆ ಸಂಬಳ ಕೊಡುವವನೇ ಮಾಲೀಕ ಆದರೆ ಆತನನ್ನು ಸಂಬಳ ಕೊಡುವ ಮಟ್ಟಕ್ಕೆ ಬೆಳೆಸುವವನೇ ಕಾರ್ಮಿಕ. ಒಂದೆಡೆ ಬಡತನ, ಮತ್ತೊಂದೆಡೆ ಅನಕ್ಷರತೆ. ಮತ್ತೊಂದು ಕಡೆ ಸಕಲ ಸಂಪತ್ತಿನಿಂದ ವಂಚಿತವಾದ ಜನಾಂಗ ಕಾರ್ಮಿಕರಾಗಿ ಬದುಕುತ್ತಾರೆ.

ಇಂತಹ ಸೋಚನೀಯ ಆರ್ಥಿಕ ಪರಿಸ್ಥಿತಿಯ ಕುಟುಂಬದಿಂದ ಬೆಳೆದು ಬಂದ ವ್ಯಕ್ತಿ ನನ್ನನ್ನು ನಂಬಿರುವ ಅಪ್ಪ, ಅಮ್ಮ, ಹೆಂಡತಿ, ಮಕ್ಕಳ ಲಾಲನೆ, ಪೋಷಣೆ ರಕ್ಷಣೆ ಜೊತೆಗೆ ಸರ್ವರ ತುತ್ತಿನ ಚೀಲ ತುಂಬಲು ಕಾರ್ಮಿಕ ವೃತ್ತಿಯನ್ನು ಆರಿಸಿಕೊಳ್ಳುತ್ತಾರೆ. ಇಂತಹ ಕಾರ್ಮಿಕರಲ್ಲಿ ಕೆಲವರು ಕಾಯಕ ವೆಂಬುದು ಕೇವಲ ಕಾಸು ಸಂಪಾದನೆಯಲ್ಲ, ಕಾಯಕವೆಂಬುದು ಹೊಟ್ಟೆಪಾಡಲ್ಲ,  ಕಾಯಕ ಎಂಬುದು ಸಮಾಜ ಸೇವೆ ಎಂದು ದುಡಿಯುತ್ತಾರೆ.

ಕೂಲಿ ಅಥವಾ ಸಂಬಳ ಕಡಿಮೆ ಇದ್ದರೂ ಬೆವರಿನ ದುಡಿಮೆಯೂ ಗೌರವವನ್ನು ಹೆಚ್ಚಿಸುತ್ತದೆ ಎಂದು ಹೆಚ್ಚಿನ ಕಾರ್ಮಿಕರು ಬದುಕಿನುದ್ದಕ್ಕೂ ದುಡಿಯುತ್ತಾರೆ. ಜೀವನದಲ್ಲಿ ಯಾರು ಕೈ ಬಿಟ್ಟರು ನನ್ನ ತೊಳ್ ಬಲ ಇರವತನಕ ಜೀವನ ಸಾಗಿಸೋಣ ಎಂದು, ನಡು ನಾಡೆ ಇರಲಿ ಗಡಿನಾಡೆ ಇರಲಿ ತಮ್ಮ ಕಾಯಕವ ಮಾಡುವರು ಹೆಚ್ಚಿನ ಕಾರ್ಮಿಕರು.

ಅಂದುಕೊಳ್ಳುವುದಕ್ಕಿಂತ ಹೊಂದಿಕೊಳ್ಳುವುದು ಲೇಸೆಂದು ಕಾರ್ಮಿಕರು ದುಡಿಯುತ್ತಾರೆ. ಜೀವನದ ಉದ್ದಕ್ಕೂ ಎದುರಾಗುವ ಸೋಲನ್ನು ಪ್ರತಿ ಹೆಜ್ಜೆಯಲ್ಲೂ ಗೆಲುವನ್ನು ಕಾಣುತ್ತ ಕಾರ್ಮಿಕರು ದುಡಿಯುತ್ತಾರೆ. ಬದುಕಿನುದ್ದಕ್ಕೂ ಬಂದೊದಗುವ ಕಷ್ಟಗಳನ್ನು ಮೌನವಾಗಿ ಸ್ವೀಕರಿಸಿ ದುಡಿಯುತ್ತಾರೆ.  ಕಾರ್ಮಿಕರು, ಬಣ್ಣ ಬದಲಾಯಿಸುವ ಜನರ ನಡುವೆ, ಭಗವಂತನು ನಮ್ಮ ಬದುಕನ್ನು ಬದಲಾಯಿಸುತ್ತಾನೆ ಎಂಬ ನಂಬಿಕೆಯ ಮೇಲೆ ಕಾಯಕವೆ ಕೈಲಾಸವೆಂದು ದುಡಿಯುತ್ತಾನೆ.

ಹಲವು ಕಾರ್ಮಿಕರು ಅರ್ಹತೆಯಿಂದ ಅವಕಾಶ ದೊರೆತರೆ, ನಂಬಿಕೆಯಿಂದ ಮರ್ಯಾದೆ ಸಿಗುತ್ತದೆಂದು ತಮ್ಮ ಕಾಯಕ ಮಾಡುತ್ತಾರೆ. ಮತ್ತೆ ಕೆಲವರು ಸತ್ಯವಾದ ಮಾರ್ಗದಲ್ಲಿ ನಿಸ್ವಾರ್ಥತೆ ಮತ್ತು ಪರಿಶುದ್ಧವಾದ ಗುಣಗಳಿಂದ ದುಡಿಯುತ್ತಾರೆ. ಮತ್ತೆ ಕೆಲವು ಕಾರ್ಮಿಕರು ನಿoಧಿಸುವವರಿಂದ ದೂರ ಸರಿದು ಸ್ಪಂದಿಸುವವರ ಜೊತೆ ಸೇರಿ ದುಡಿಯುತ್ತಾರೆ. ಕೆಲವು ಕಾರ್ಮಿಕರು ಸ್ವಜಾತಿ ಮತ್ತು ಉನ್ನತ ವರ್ಗದ ಅಡಿಯಲ್ಲಿ ದುಡಿಯಲು ಪ್ರಯತ್ನಿಸುವುದು ಉಂಟು.

ಹೆಚ್ಚಿನ ಕಾರ್ಮಿಕರು ಇವನಾರವ, ಇವನಾರವ ನೆಂದೇಣಿಸದೆ, ಇವ ನಮ್ಮವ, ಇದು ನನ್ನ ಕಾಯಕ ಎಂದು ಹೊಟ್ಟೆ ಪಾಡಿಗಾಗಿ ದುಡಿಯುತ್ತಾರೆ. ಕೆಲವರು ಒಪ್ಪಂದ ಮೇರೆಗೆ ದುಡಿಯುವ ಜೀತ ಕಾರ್ಮಿಕರಾಗಿ ದುಡಿಯುತ್ತಾರೆ. ಕೆಲವು ಕಾರ್ಮಿಕರು ಸೋಮಾರಿಗಳಿದ್ದು,  ಅಂತವರು ನಾಟಕ, ಯಕ್ಷಗಾನ, ಬಯಲಾಟ, ಸಿನಿಮಾ ಖಿಗಿ, ಮೊಬೈಲ್ ನೋಡುತ ಕುಳಿತು ಇತರರಿಗೆ ಭಾರವಾದರೆ, ಹೆಚ್ಚಿನ ಕಾರ್ಮಿಕರು ಕಥೆ, ಪೂರಾಣ, ನಾಟಕ ಯಕ್ಷಗಾನ ಗಳಿಂದ ಹೊಟ್ಟೆ ತುಂಬುವುದಿಲ್ಲ ವೆಂದು ಸಮಯವನ್ನು ವ್ಯರ್ಥ ಮಾಡದೆ ದುಡಿದು ತಮ್ಮ ಕುಟುಂಬಕ್ಕೆ ಆಸರೆಯಾಗುತ್ತಾರೆ.

ಒಂದು ದೇಶದ ಕಾರ್ಮಿಕರು ಆಯಾ ದೇಶದ ಸರ್ವಾಂಗೀಣ ಪ್ರಗತಿಯ ರೂವಾರಿಗಳಾಗಿರುತ್ತಾರೆ. ಉದಾ : ರೈಲ್ವೆ ಮಾರ್ಗಗಳು ರಸ್ತೆಗಳು ಸೇತುವೆಗಳು, ಮಂದಿರ, ಮಹಲುಗಳು, ಆಡಳಿತ ಸೌಧಗಳು, ಶಾಲಾ-ಕಾಲೇಜು ಕಟ್ಟಡಗಳು, ಉದ್ಯಾನವನಗಳು ವಸ್ತು ಮತ್ತು ಪ್ರಾಣಿ ಸಂಗ್ರಹಾಲಯಗಳು, ಕೆರೆ, ಕಟ್ಟೆ, ಬಾವಿಗಳು, ಮಾತ್ರವಲ್ಲದೆ ಇಡೀ ವಿಶ್ವದಲೇ ವಿಖ್ಯಾತವಾದ ಪಿರಮಿಡ್ ಗಳ ನಿರ್ಮಾಣದಲ್ಲೋ ಕಾರ್ಮಿಕರ ಬೆವರಿನ ಹನಿ ಬೆರೆತಿರುತ್ತದೆ, ಇಂತಹ ಮಹತ್ ಕಾರ್ಯಗಳಿಂದಾಗಿ ಕಾರ್ಮಿಕರ ಪಾತ್ರ ಒಂದು ದೇಶದ ಪ್ರಗತಿಯಲ್ಲಿ ಮಹತ್ವವನ್ನು ಹೊಂದಿರುತ್ತದೆ.

ಇನ್ನು ವಾಹನಗಳ ಕ್ಷೆeತ್ರಕ್ಕೆ ಬಂದರೆ ಒಂದು ಅದ್ಭುತವೇ ಸರಿ, ಮಾನವನ ಉಗುರು ಕತ್ತರಿಸುವ ಸಣ್ಣ nail clutter ನಿಂದ ಹಿಡಿದು ಗುದ್ದಲಿ, ಪಿಕಾಸಿ ಚಾಕು, ಚೂರಿ ಗಳು ಸೇರಿದಂತೆ ಸೈಕಲ್ ಗಳಿಂದ ಪ್ರಾರಂಭವಾಗಿ ಸ್ಕೂಟರ್, ಬೈಕ್ ಕಾರು ಬಸ್ಸು, ಟ್ರ್ಯಾಕ್ಟರ್, ಟ್ರಿಲ್ಲರ್ ಲಾರಿ, ಯುದ್ಧ ವಿಮಾನಗಳು, ಬಾಂಬ್ ಗಳು ಮದ್ದು ಗುಂಡು ಬಂದೂಕು ವಿಮಾನಗಳು ಹೆಲಿಕಾಪ್ಟರ್ ಗಳ ಟ್ಯಾಂಕರ್ಸ್, ಬೋರ್ವೆಲ್ ಕೊರೆಯುವ, ಸುರಂಗ ಕೊರೆಯುವ ಯಂತ್ರಗಳು ಅಲ್ಲದೆ ಬೃಹತ್  ಕ್ರೇನ್ ಗಳ ತಯಾರಿಕೆಯಲ್ಲಿ ಕಾರ್ಮಿಕರ ಪಾತ್ರ ಅವಿಸ್ಮರಣೀಯ.

ಕೆಲವು ಸಂದರ್ಭದಲ್ಲಿ ಹಲವಾರು ಕಾರ್ಮಿಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ (ಉದಾ : ಗಣಿಗಳಲ್ಲಿ, ಕಲ್ಲು ಕೊರೆಗಳಲ್ಲಿ, ಬೃಹತ್  ಕಟ್ಟಡಗಳು ಕುಸಿದುಬಿದ್ದಾಗ, ಕಾಫಿ ತೋಟಗಳಲ್ಲಿ ಕರಿ ಮೆಣಸು ಕುಯ್ಯುವಾಗ ಅಲ್ಲುಮಿನಿಯಂ ಏಣಿಗಳು ವಿದ್ಯುತ್ ತಂತಿಗಳಿಗೆ ತಗುಲಿ, ಮರ ಕಪಾತ್ ಮಾಡುವಾಗ ಮರದಿಂದ ಬಿದ್ದು, ಹೀಗೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯoತ ಲಕ್ಷಾಂತರ ಕಾರ್ಮಿಕರು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.) ಇಂತಹ ಘಟನೆಗಳಿಂದ ಕಾರ್ಮಿಕರನ್ನು ನಂಬಿದ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗುತ್ತಿವೆ, ದೀಪವು ತಾನುರಿದು ಇತರರಿಗೆ ಬೆಳಕು ಕೊಡುವಂತೆ, ಕಾರ್ಮಿಕರು ತಮ್ಮ ಬದುಕಿನುದ್ದಕ್ಕೂ ತಮ್ಮನ್ನು ತಾವೇ ಸವೇಸಿಕೊಳುತ್ತ, ಆರೋಗ್ಯ ಕೆಟ್ಟಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕದೆ ಮರಣ ಹೊಂದುತ್ತಾರೆ. ಮಾಲೀಕ, ದಿವಾನ ಕಂಪನಿ, ಧಣಿ, ಒಡೆಯ, ಬುದ್ಧಿ ಎಂದೆನ್ನುತ್ತಾ ದುಡಿದು ತಮ್ಮ ಅಂತ್ಯ ವನ್ನು ಕಾಣುವ ಕಾರ್ಮಿಕರ ಶ್ರಮ ಜಗತ್ತಿನಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

ವಿಶ್ವದ ಅಥವಾ ಯಾವುದೇ ದೇಶದ ಒಂದು ವರ್ಗದ ಜನರ ಸಂತೋಷದಲ್ಲಿ ಕಾರ್ಮಿಕ ವರ್ಗದ ಶ್ರಮ ನೋವು, ಯಾತನೆ ಯಾರಿಗೂ ಕಾಣದಂತೆ ಮಾಯವಾಗಿರುತ್ತದೆ. ಇತರರ ಬದುಕಿಗೆ ದಾರಿದೀಪವಾಗಿರುತ್ತದೆ.

ವರದಿ : ಸಿದ್ದರಾಜು ಬೆಳ್ಳಯ್ಯ,
ಪ್ರಾಂಶುಪಾಲರು, ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜು
ಮದೆ ಗ್ರಾಮ,
ಮಡಿಕೇರಿ ತಾಲ್ಲೂಕು
ಕೊಡಗು.
ಮೊಬೈಲ್ 9449405609  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿಶೇಷಚೇತನರಿಗೆ ಕ್ರೀಡಾಕೂಟ : ಕ್ರೀಡೆಯಿಂದ ದೈಹಿಕ, ಮಾನಸಿಕ ದೃಢತೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*

ಮಾರ್ಚ್ 16, 2026

*ಕೊಡಗಿನ ವಿವಿಧೆಡೆ ಸ್ವಚ್ಛತಾ ಅಭಿಯಾನ*

ಮಾರ್ಚ್ 16, 2026

*ಹೋಂ ನರ್ಸಿಂಗ್ ಕೇರ್ ಟೇಕರ್ ನಿಂದ ಕಳ್ಳತನ : ಆರೋಪಿಯ ಬಂಧನ*

ಮಾರ್ಚ್ 16, 2026

*ಕೊಡಗಿನ ವಿವಿಧೆಡೆ ಸ್ವಚ್ಛತಾ ಅಭಿಯಾನ*

ಮಾರ್ಚ್ 16, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮಾ.16 NEWS DESK : ಸ್ವಚ್ಛ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರಗಳು ಸೇರಿದಂತೆ ಪ್ರವಾಸಿ ಸ್ಥಳಗಳು,…

*ಹೋಂ ನರ್ಸಿಂಗ್ ಕೇರ್ ಟೇಕರ್ ನಿಂದ ಕಳ್ಳತನ : ಆರೋಪಿಯ ಬಂಧನ*

ಮಾರ್ಚ್ 16, 2026

*ವಾಹನ, ದನ ಕಳವು ಪ್ರಕರಣದ ಆರೋಪಿಗಳ ಬಂಧನ*

ಮಾರ್ಚ್ 16, 2026

*ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನ ಉದ್ಘಾಟನೆ*

ಮಾರ್ಚ್ 16, 2026

*ಸೋಮವಾರಪೇಟೆ : ವಿದ್ಯಾರ್ಥಿಗಳು ಸಮಯದ ಮೌಲ್ಯ ಅರಿತುಕೊಳ್ಳಿ : ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಸಲಹೆ*

ಮಾರ್ಚ್ 16, 2026

* ಸೋಮವಾರಪೇಟೆ : ಮಾ.27 ರಂದು ಶ್ರೀ ರಾಮನವಮಿ ಉತ್ಸವ*

ಮಾರ್ಚ್ 16, 2026

*ಗೃಹಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಗ್ರಾಹಕರ ಗಮನಕ್ಕೆ : ಜಿಲ್ಲಾಡಳಿತದಿಂದ ಎಲ್‌ಪಿಜಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ*

ಮಾರ್ಚ್ 16, 2026

*ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ : “ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲು” ಅನುಭವುಳ್ಳ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ*

ಮಾರ್ಚ್ 16, 2026

*ಕಸಾಪ ಸಂತಾಪ*

ಮಾರ್ಚ್ 15, 2026

*ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವ*

ಮಾರ್ಚ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.