Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *45 ನೇ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಕ್ರೀಡಾಪಟುಗಳ ಸಾಧನೆ*
  • *ಗ್ರಾಮೀಣ ಪ್ರತಿಭೆಗಳಿಗೆ ಕೆಇಎ ನೀಡಲಿದೆ ‘ನೀಟ್’ ಬಲ: ಸರ್ಕಾರಿ ಕಾಲೇಜುಗಳಲ್ಲೇ ಉಚಿತ ತರಬೇತಿ; ಸಚಿವರಿಂದ ಮಹತ್ವದ ಘೋಷಣೆ!*
  • *ಅಧಿವೇಶನದಲ್ಲಿ ಡಿಸಿಎಂ ಜೊತೆ ಶಾಸಕ ಎ.ಎಸ್.ಪೊನ್ನಣ್ಣ ಸಮಾಲೋಚನೆ*
  • *ರಾಜ್ಯದಲ್ಲಿ ಬದಲಾದ ಹವಾಮಾನ: ಹಲವೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ; ಬೀದರ್‌ನಲ್ಲಿ ಸಿಡಿಲಿಗೆ ರೈತ ಬಲಿ!*
  • *ಆದಿವಾಸಿಗಳ ಹಕ್ಕಿಗಾಗಿ ಆಗ್ರಹಿಸಿ ಪ್ರತಿಭಟನೆ : ಲೈನ್ ಮನೆಗಳಿಂದ ಮುಕ್ತಗೊಳಿಸಲು ಒತ್ತಾಯ*
  • *ಚಿನ್ನಾಭರಣ ಪ್ರಿಯರಿಗೆ ಸುವರ್ಣಾವಕಾಶ : ಕುಶಾಲನಗರದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳು*
  • *ಪಾಕ್-ಅಫ್ಘಾನ್ ಯುದ್ಧ ಭೀಕರ: ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವಾಯುದಾಳಿ; 400 ಮಂದಿ ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ!*
  • *ವಿಶೇಷಚೇತನರಿಗೆ ಕ್ರೀಡಾಕೂಟ : ಕ್ರೀಡೆಯಿಂದ ದೈಹಿಕ, ಮಾನಸಿಕ ದೃಢತೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*
  • *ಕೊಡಗಿನ ವಿವಿಧೆಡೆ ಸ್ವಚ್ಛತಾ ಅಭಿಯಾನ*
  • *ಹೋಂ ನರ್ಸಿಂಗ್ ಕೇರ್ ಟೇಕರ್ ನಿಂದ ಕಳ್ಳತನ : ಆರೋಪಿಯ ಬಂಧನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಪುಸ್ತಕ ವಿಮರ್ಶೆ : “ವ್ಯಕ್ತಿಪರಿಚಯ ಮತ್ತು ಸಾಮಾಜಿಕ ಚಿಂತನೆ”-“ರಾಜಕೀಯ ಮತ್ತು ಪ್ರಕೃತಿ”*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಪುಸ್ತಕ ವಿಮರ್ಶೆ : “ವ್ಯಕ್ತಿಪರಿಚಯ ಮತ್ತು ಸಾಮಾಜಿಕ ಚಿಂತನೆ”-“ರಾಜಕೀಯ ಮತ್ತು ಪ್ರಕೃತಿ”*

ಮೇ 9, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 9 :  ಮೇಲಿನ ಎರಡೂ ಕೃತಿಗಳು ಅಂಕಣ ಬರಹಗಳ ಸಂಗ್ರಗಳಾಗಿದ್ದು, ‘ಕೊಡವ ಮಕ್ಕಡಕೂಟ(ರಿ)’ ಅವರಿಂದ ಪ್ರಕಟವಾದ ಕೊಡವ ಸಾಹಿತ್ಯ ಮಾಲೆ ಸರಣಿಯ 61 ಮತ್ತು 62ನೇ ಪುಸ್ತಕಗಳಾಗಿವೆ. ಲೇಖಕ ಬಾಳೆಯಡ ಶ್ರೀ ಕಿಶನ್ ಪೂವಯ್ಯ ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಅವಳಿ ಪುಸ್ತಕಗಳನ್ನು ಇದೆ 2023 ರ, ಫೆಬ್ರವರಿ ತಿಂಗಳಿನಲ್ಲಿ ಸಾಹಿತ್ಯಲೋಕಕ್ಕೆ ಅನಾವರಣಗೊಳಿಸಿದ್ದಾರೆ.
ಕೊಡವ ಮಕ್ಕಡ ಕೂಟ(ರಿ) ಸಂಸ್ಥೆಯ ಅಧ್ಯಕ್ಷರಾದ ಬೊಳ್ಳಜಿರ ಅಯ್ಯಪ್ಪ ತಮ್ಮ ಅಧ್ಯಕ್ಷರ ನುಡಿಯಲ್ಲಿ ಲೇಖಕ ಕಿಶನ್ ಪೂವಯ್ಯ ನವರ ಬಹುಮುಖ ಪ್ರತಿಭೆಯನ್ನು ವರ್ಣಿಸಿದ್ದಾರೆ. ಅಂತೆಯೇ, “ಶಕ್ತಿ” ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಪ್ರತಿಯೊಂದು ಲೇಖನz ಬಗ್ಗೆ ಸಂಕ್ಷಿಪ್ತವಾದ ಅಭಿಪ್ರಾಯವನ್ನುಗಟ್ಟಿಯಾಗಿ ವ್ಯಕ್ತಪಡಿಸಿ, ನನ್ನ ವಿಮರ್ಶೆಯನ್ನು ತೆಳುವಾಗಿಸಿದ್ದಾರೆ. ಇನ್ನು ವಿದ್ವಾಂಶರು, ಹಿರಿಯ ವಕೀಲರಾದ ಗೌರವನ್ವಿತ ಬಾಲಸುಬ್ರಮಣ್ಯ ಕಂಜರ್ಪಣೆಯವರು ತಮ್ಮ ವಿದ್ವತ್ಪೂರ್ಣ ಮುನ್ನುಡಿಯಲ್ಲಿ ಪ್ರಕೃತಿಯನ್ನು, ನೆಲ-ಜಲಸಂಪತ್ತನ್ನು, ವನಸಿರಿಯಜೊತೆಗೆ ಪ್ರಾಣಿಪಕ್ಷಿಗಳ ಸಹಬಾಳ್ವೆಯನ್ನು ಕೊಂಡಾಡುತ್ತಾ, “ಅಲ್ಲಿಗೆ ಸಲ್ಲದ ಏಕೈಕಜೀವಿ, ಮನುಷ್ಯನ” ಸ್ವಾರ್ಥಬುದ್ಧಿ, ಕಪಟತನ, ರಾಜಕೀಯ ಇತ್ಯಾದಿಗಳು, ಅದರ ಕುರಿತು ಬರೆದ ಲೇಖಕರ “ಜನಹಿತ, ಸಮಾಜಹಿತ, ಲೋಕಹಿತವನ್ನು” ಮೆಚ್ಚಿಕೊಂಡಿದ್ದಾರೆ.
ಲೇಖಕರು, ತಮ್ಮ ಬಿಡುವಿಲ್ಲದ ವಕೀಲಿ ವೃತ್ತಿಯ ನಡುವೆಯೂ; ಸಮಾಜಮುಖಿ ಚಿಂತನೆ- ಕಳಕಳಿಗಳನ್ನು ಬೆನ್ನಿಗೆಕಟ್ಟಿಕೊಂಡು ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳುತ್ತಾ ತಮ್ಮ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸಿ, ವರ್ತಮಾನವನ್ನು ಭವಿಷ್ಯತ್ತಿನೊಂದಿಗೆ ಬೆಸೆಯುವ ಹೆಜ್ಜೆ ಗುರುತುಗಳನ್ನು ಈ ಬಿಡಿಬರಹಗಳಲ್ಲಿ ಗಮನಿಸಬಹುದು. ಚಿಕ್ಕ ವಯಸ್ಸಿನಿಂದಲೇ ಪತ್ರಿಕಾ ಬರವಣಿಗೆಯಲ್ಲಿ ಗುರುತಿಸಿಕೊಂಡ ಲೇಖಕಅನೇಕ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದು ಪಳಗಿದುದರಿಂದ ಅವರ ಬರಹಗಳಲ್ಲಿ ಗಟ್ಟಿತನವಿದೆ, ಸ್ಪಷ್ಟತೆಯಿದೆ.
ಜನಾಭಿಪ್ರಾಯವಿರಲಿ, ಜನಾಂಗದ ನಿಲುವಿರಲಿ; ತಮಗೆ ಸರಿ ಅನ್ನಿಸಿದುದನ್ನು ನಿಖರವಾಗಿ ಪ್ರತಿಪಾದಿಸುತ್ತಾರೆ. ಅವರದೇ ಮಾತಿನಲ್ಲಿ ಹೇಳುವುದಾದರೆ,”ಕೊಡಗಿನಂತ ಜಿಲ್ಲೆಯಲ್ಲಿ ಒಂದು ಸಂಘಟನೆಯನ್ನು ಸಂಘಟಿಸುವುದೇ ಕಷ್ಟ. ಕೊಡಗಿನ ಜನ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ, ಬದಲು ಸಂಘಟನೆಯನ್ನು ಮುರಿಯುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ” ಎಂದು ಗುರುತಿಸುತ್ತಾರೆ. “ಕೊಡಗಿನಲ್ಲಿ ಸಂಘಟನೆಗೆ ಒಂದು ನಾಯಕತ್ವವಲ್ಲ, ನಾಯಕತ್ವಕ್ಕೊಂದು ಸಂಘಟನೆ ಇದೆ” ಎಂದು ಗಮನಿಸುತ್ತಾರೆ. ಎರಡೂ ಪುಸ್ತಕಗಳಿಂದ ಒಟ್ಟು ಎಪ್ಪತ್ತಮೂರು ಅಂಕಣ ಬರಹಗಳಿದ್ದು, ಪ್ರಮುಖವಾಗಿ ವ್ಯಕ್ತಿಚಿತ್ರಣ ಮತ್ತು ಸಾಮಾಜಿಕ ಸಮಸ್ಯೆಗಳೆಂಬ ಎರಡು ಬಗೆಯ ಲೇಖನಗಳಾಗಿ ವಿಂಗಡಿಸಬಹುದು.
ಗೌರವಾನ್ವಿತ ರಾಜಕಾರಿಣಿಗಳಾದ ಅಟಲ್‍ಬಿಹಾರಿ ವಾಜಪೇಯಿಯವರಿಂದ ತೊಡಗಿ, ನಮ್ಮವರೇ ಆದ ಎ.ಕೆ.ಸುಬ್ಬಯ್ಯ, ಎಂ.ಸಿ.ನಾಣಯ್ಯ, ಜನಮೆಚ್ಚಿದ ನಟರಾದ ದಿವಂಗತ ಪುನೀತ್ ರಾಜಕುಮಾರ್, ಅಂಬರೀಷ್, ಸೇವಾಕ್ಷೇತ್ರದ ವೈದ್ಯರು; ಎಲ್ಲರ ಅವರವರ ಕ್ಷೇತ್ರದ ಸಾಧನೆ-ಕೊಡುಗೆಯ ಬಗ್ಗೆ ಮನಮುಟ್ಟುವಂತೆ ವಿವರಿಸಿದ್ದಾರೆ. ಎರಡನೇ ಬಗೆಯ ಲೇಖನಗಳಲ್ಲಿ ಅಧಿಕಾರಿ ಶಾಹಿಗಳಲ್ಲಿ ಸ್ಥಳೀಯ ಸಂಸ್ಕೃತಿಗಳ ತಿಳುವಳಿಕೆಯ ಕೊರತೆ ಮತ್ತು ನಿರ್ಲಕ್ಷ್ಯದಿಂದ ಸರ್ಕಾರಿ ಕಾನೂನುಗಳು ಯಾವರೀತಿಯಲ್ಲಿ ಕೊಡಗಿನ ಜನಸಾಮಾನ್ಯರ ಕೊರಳಿಗೆ ಉರುಳಾಗಿ ಹೈರಾಣಾಗಿಸುತ್ತವೆ ಎಂದು ಮನಸ್ಸಿಗೆ ಮುಟ್ಟುವಂತೆ ವಿವರಿಸುತ್ತಾರೆ.
ಪ್ರಮುಖವಾಗಿ, ಕಂದಾಯ, ಸರ್ವೇ ಮತ್ತು ಪೊಲೀಸ್ ಇಲಾಖೆಗಳ ನ್ಯೂನತೆಗಳತ್ತ ಬೊಟ್ಟು ಮಾಡುತ್ತಾರೆ. ಕೊಡಗಿನ ನಿವಾಸಿಗಳು ಗದ್ದೆ-ತೋಟದ ಕೃಷಿಕೆಲಸ ಮಾಡಿಕೊಂಡು, ನೆಲದಮೂಲದೇವ-ದೈವಗಳ ಉತ್ಸವಗಳನ್ನು ನಡೆಸಿಕೊಂಡು ನೆಮ್ಮದಿಯಾಗಿ ಬದುಕುತಿದ್ದ ಶಾಂತಿ ಸಹಬಾಳ್ವೆ ಇಲ್ಲವಾಗಿರುವುದನ್ನು, “ಕೊಡಗಿನಲ್ಲಿ ಭೂಮಿ, ಕೋವಿ ಹೊಂದುವುದು ಶಾಪವೇ?”ಲೇಖನದಲ್ಲಿ ಪ್ರಶ್ನಿಸುತ್ತಾ; ಆಳುವವರ ಮತ್ತು ಅಧಿಕಾರಿಗಳ ಮಬ್ಬು ಗಣ್ಣಿಗೆ ಭೂತ ಗಾಜನ್ನು ಹಿಡಿಯುತ್ತಾರೆ. ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು, ಹಳೆಕಾಲದ ಪೊಲೀಸರ ಬದಲಾಗಿ, ಸಾಕಷ್ಟು ಓದಿದ ವಿದ್ಯಾವಂತರೂ ನೇಮಕವಾಗಿ ಒಳ್ಳೆಯತರಬೇತು ಪಡೆದರೂ, ಅವರು ಸಾರ್ವಜನಿಕ ಸ್ನೇಹಿ ಮನೋಭಾವವನ್ನು ರೂಢಿಸಿಕೊಳ್ಳದಿರುವುದನ್ನು ಖೇದದಿಂದ ವಿವರಿಸುತ್ತಾರೆ. ಅಂತೆಯೇ ಮತ್ತೊಂದು ಲೇಖನದಲ್ಲಿ, ಟಿಪ್ಪು ಜಯಂತಿಯನ್ನು ಆಚರಿಸುವುದು ಇಲ್ಲವೇ ಬಿಡುವುದು ವೈಯಕ್ತಿಕ ವಿಚಾರವೆಂಬ ಲೇಖಕರ ಉದಾರ ನಿಲುವಿನಲ್ಲಿ ಕೋಮು ಸೌಹಾರ್ದ ಭಾವನೆಯನ್ನು ಬಿಂಬಿಸುತ್ತಾರೆ. ಎಲ್ಲದಿಕ್ಕಿಂತಲೂ ಮೇಲಾಗಿ, ಕೊಡಗು, ಕಾವೇರಿತಾಯಿ, ಪ್ರಕೃತಿ ಮತ್ತು ಸಂಸ್ಕೃತಿ ಆಚರಣೆ ಮುಖ್ಯವೆನ್ನುವ ಅವರ ಹೃದಯದ ಧ್ವನಿ ಲೇಖನಗಳಲ್ಲಿ ಆಗಾಗಪ್ರತಿ ಧ್ವನಿಸುತ್ತದೆ.
ಕೊಡಗಿನ ತಾಯಿ, ಕಾವೇರಿ ಮಾತೆಯ ಆಚರಣೆಯ ಬಗ್ಗೆ ಇತ್ತೀಚಿಗೆ ಪ್ರಮುಖ ಜನಾಂಗಗಳು ಪರಸ್ಪರ ಮೇಲಾಟ ಸಾಧಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಕೊಡವ ಭಾಷಾಲೇಖನದಲ್ಲಿ ಅತ್ಯಂತ ಸಾವಧಾನ ಚಿತ್ತದ ಸಲಹೆ, ಸೂಚನೆಗಳನ್ನು ಲೇಖಕರು ಪ್ರತಿಪಾದಿಸಿರುವುದು ಅವರ ಪ್ರಬುದ್ಧಮನಸ್ಥಿತಿಗೆ ಸಾಕ್ಷಿಯಂತಿದೆ. “ನಂಗಡಜಮ್ಮು, ನಂಗಡಕುಪ್ಯ, ನಂಗಡಶಿಸ್ತ್, ನಂಗಡಗತ್ತ್, ನಂಗಡಮಣ್ಣ್ ” ಎನ್ನುವ ಮನೋಭಾವನೆ ಕೊಡಗಿನ ಉಳಿವಿಗೆ ಬೇಕಾಗಿದೆ ಅನ್ನುವುದು ಲೇಖಕರ ಕಳಕಳಿಯಾಗಿದೆ.
ಪ್ರವಾಸೋದ್ಯಮ ಮತ್ತು ರೆಸಾರ್ಟ್ ಸಂಸ್ಕೃತಿಯ ದೆಸೆಯಿಂದ ಕೊಡಗಿನ ಮಣ್ಣು-ಪರಿಸರಕ್ಕೆ ಇನ್ನಿಲ್ಲದ ಬೇಡಿಕೆ, ಬೆಲೆ ಇರುವುದರಿಂದ, ತಮ್ಮ ಭೂಮಿನೆಲೆಯನ್ನು ಹೊರಗಿನವರಿಗೆ ಮಾರಿಕೊಂಡು ಐನ್ಮನೆ-ದೇವನೆಲೆ, ಕೃಷಿಭೂಮಿಯನ್ನು ಕಡೆಗಣಿಸುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ. ಲೇಖಕ ಕಿಶನ್ ಪೂವಯ್ಯ ನವರು, ತಮ್ಮ ಎರಡೂ ಅಂಕಣ ಸಂಗ್ರಹ ಬರಹಗಳಲ್ಲಿ ಸಮಕಾಲೀನ ಗಂಭೀರ ವಿಷಯಗಳನ್ನು ವಸ್ತುನಿಷ್ಠವಾಗಿ ಸಮಾಜದ ಎದುರು ತೆರೆದಿಟ್ಟಿದ್ದು, ಅನೇಕ ಸಮಸ್ಯೆಗಳ ಕುರಿತು ಹೋರಾಟವನ್ನು ಮಾಡಿ ಸರಿಪಡಿಸಿದ್ದೂ ಇದೆ. ಇನ್ನೂ ಹಲವಾರು ತಪ್ಪುಗಳನ್ನು ಒಪ್ಪುಗಳನ್ನಾಗಿಸುವುದು ಸಮಾಜದ, ಸರ್ಕಾರದ, ಇಲಾಖೆಗಳ; ಒಟ್ಟಿನಲ್ಲಿ ನಮ್ಮ-ನಿಮ್ಮೆಲ್ಲರ ಹೊಣೆ ಎಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ವಿಮರ್ಶಾ ಲೇಖನ : ವಿಶ್ವನಾಥ್ ಎಡಿಕೇರಿ, ಬೆಂಗಳೂರು. 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*45 ನೇ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಕ್ರೀಡಾಪಟುಗಳ ಸಾಧನೆ*

ಮಾರ್ಚ್ 17, 2026

*ಗ್ರಾಮೀಣ ಪ್ರತಿಭೆಗಳಿಗೆ ಕೆಇಎ ನೀಡಲಿದೆ ‘ನೀಟ್’ ಬಲ: ಸರ್ಕಾರಿ ಕಾಲೇಜುಗಳಲ್ಲೇ ಉಚಿತ ತರಬೇತಿ; ಸಚಿವರಿಂದ ಮಹತ್ವದ ಘೋಷಣೆ!*

ಮಾರ್ಚ್ 17, 2026

*ಅಧಿವೇಶನದಲ್ಲಿ ಡಿಸಿಎಂ ಜೊತೆ ಶಾಸಕ ಎ.ಎಸ್.ಪೊನ್ನಣ್ಣ ಸಮಾಲೋಚನೆ*

ಮಾರ್ಚ್ 17, 2026

*ಗ್ರಾಮೀಣ ಪ್ರತಿಭೆಗಳಿಗೆ ಕೆಇಎ ನೀಡಲಿದೆ ‘ನೀಟ್’ ಬಲ: ಸರ್ಕಾರಿ ಕಾಲೇಜುಗಳಲ್ಲೇ ಉಚಿತ ತರಬೇತಿ; ಸಚಿವರಿಂದ ಮಹತ್ವದ ಘೋಷಣೆ!*

ಮಾರ್ಚ್ 17, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ

ಬೆಂಗಳೂರು, ಮಾರ್ಚ್ 17, 2026: ನಗರ ಪ್ರದೇಶದ ಶ್ರೀಮಂತ ವಿದ್ಯಾರ್ಥಿಗಳಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋಚಿಂಗ್ ಪಡೆಯಲು ಸಾಧ್ಯವಾಗದ…

*ಅಧಿವೇಶನದಲ್ಲಿ ಡಿಸಿಎಂ ಜೊತೆ ಶಾಸಕ ಎ.ಎಸ್.ಪೊನ್ನಣ್ಣ ಸಮಾಲೋಚನೆ*

ಮಾರ್ಚ್ 17, 2026

*ರಾಜ್ಯದಲ್ಲಿ ಬದಲಾದ ಹವಾಮಾನ: ಹಲವೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ; ಬೀದರ್‌ನಲ್ಲಿ ಸಿಡಿಲಿಗೆ ರೈತ ಬಲಿ!*

ಮಾರ್ಚ್ 17, 2026

*ಆದಿವಾಸಿಗಳ ಹಕ್ಕಿಗಾಗಿ ಆಗ್ರಹಿಸಿ ಪ್ರತಿಭಟನೆ : ಲೈನ್ ಮನೆಗಳಿಂದ ಮುಕ್ತಗೊಳಿಸಲು ಒತ್ತಾಯ*

ಮಾರ್ಚ್ 17, 2026

*ಚಿನ್ನಾಭರಣ ಪ್ರಿಯರಿಗೆ ಸುವರ್ಣಾವಕಾಶ : ಕುಶಾಲನಗರದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳು*

ಮಾರ್ಚ್ 17, 2026

*ಪಾಕ್-ಅಫ್ಘಾನ್ ಯುದ್ಧ ಭೀಕರ: ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವಾಯುದಾಳಿ; 400 ಮಂದಿ ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ!*

ಮಾರ್ಚ್ 17, 2026

*ವಿಶೇಷಚೇತನರಿಗೆ ಕ್ರೀಡಾಕೂಟ : ಕ್ರೀಡೆಯಿಂದ ದೈಹಿಕ, ಮಾನಸಿಕ ದೃಢತೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*

ಮಾರ್ಚ್ 16, 2026

*ಕೊಡಗಿನ ವಿವಿಧೆಡೆ ಸ್ವಚ್ಛತಾ ಅಭಿಯಾನ*

ಮಾರ್ಚ್ 16, 2026

*ಹೋಂ ನರ್ಸಿಂಗ್ ಕೇರ್ ಟೇಕರ್ ನಿಂದ ಕಳ್ಳತನ : ಆರೋಪಿಯ ಬಂಧನ*

ಮಾರ್ಚ್ 16, 2026

*ವಾಹನ, ದನ ಕಳವು ಪ್ರಕರಣದ ಆರೋಪಿಗಳ ಬಂಧನ*

ಮಾರ್ಚ್ 16, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.