ಮಡಿಕೇರಿ ಮೇ 11 : ಕಾರ್ಮಿಕನೊಬ್ಬ ಪತ್ನಿಯ ಕುತ್ತಿಗೆಗೆ ಕತ್ತಿಯಿಂದ ಕಡಿದು ಗಾಯಗೊಳಿಸಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ನೇಗಳ್ಳೆ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗಿರಿಜನರ ಕಮಲ(50) ಗಾಯಾಳುವಾಗಿದ್ದು, ಪತಿ ಆರೋಪಿ ಗಣೇಶ ತಲೆ ಮರೆಸಿಕೊಂಡಿದ್ದಾನೆ.
ತೋಟದ ಲೈನ್‌ಮನೆಯಲ್ಲಿ ಗಣೇಶ ಹಾಗೂ ಕಮಲ ವಾಸವಾಗಿದ್ದರು. ಗುರುವಾರ ಸಂಜೆ ದಂಪತಿ ನಡುವೆ ಕಲಹ ಏರ್ಪಟ್ಟಿದ್ದು, ಮದ್ಯದ ಅಮಲಿನಲ್ಲಿದ್ದ ಪತಿ, ಪತ್ನಿಯನ್ನು ಕತ್ತಿಯಿಂದ ಕಡಿದಿರುವುದಾಗಿ ಆರೋಪಿಸಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಮಲಾಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸೋಮವಾರಪೇಟೆ ಠಾಣಾಧಿಕಾರಿಗಲಾದ ರಾಮಚಂದ್ರ ನಾಯಕ್ ಹಾಗೂ ರಮೇಶ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.








