Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವನ್ಯಜೀವಿಗಳ ಮಾಹಿತಿ ಪಡೆದ ಶಾಸಕ ಡಾ.ಮಂತರ್ ಗೌಡ*
  • *ಕಾಡಾನೆ ದಾಳಿಗೆ ಸಿಲುಕಿ ಗ್ರಾ.ಪಂ ಮಾಜಿ ಸದಸ್ಯೆ ಬಲಿ : ವಾಲ್ನೂರು ಗ್ರಾಮದಲ್ಲಿ ಘಟನೆ*
  • *ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಸಿಎನ್‌ಸಿಯಿಂದ ಹಕ್ಕೊತ್ತಾಯ ಮಂಡನೆ*
  • *ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಜಿಲ್ಲಾ ವೃತ್ತಿ ಮಾರ್ಗದರ್ಶನ ಘಟಕ ಸ್ಥಾಪನೆ ಕುರಿತ ಸಭೆ*
  • *ಗೋಣಿಕೊಪ್ಪಲು : ಮಹಿಳೆಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಿ : ಶಾಸಕ ಎ.ಎಸ್.ಪೊನ್ನಣ್ಣ*
  • *ಮಡಿಕೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಮಹಿಳೆಯರಿಗೆ ಆತ್ಮವಿಶ್ವಾಸ ಮತ್ತು ಸಾಮಾಜಿಕ ಬೆಂಬಲ ಅತ್ಯಗತ್ಯ : ಕವಯತ್ರಿ ಸ್ಮಿತಾ ಅಮೃತಾರಾಜ್*
  • *ಬಾಳೆಲೆ : ರೂ. 27.23 ಕೋಟಿ ವೆಚ್ಚದ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ*
  • *ಶ್ರೀಮಂಗಲದಲ್ಲಿ ಮಹಿಳಾ ದಿನಾಚರಣೆ : ಮಹಿಳಾ ಸಬಲೀಕರಣವು ಸರ್ಕಾರದ ಪ್ರಮುಖ ಆಶಯ : ಶಾಸಕ ಎ.ಎಸ್.ಪೊನ್ನಣ್ಣ*
  • *ಮಾ.8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ*
  • *ಮಾ.8 ರಂದು ಬಿಟ್ಟಂಗಾಲದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಪತ್ರಕರ್ತರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿ: ಸಿಂಗಲ್ಸ್ ನಲ್ಲಿ ಆದರ್ಶ್ ಪ್ರಥಮ, ಡಬಲ್ಸ್ ನಲ್ಲಿ ನವೀನ್ ಮತ್ತು ವಿಶ್ವ ಕುಂಬೂರು ಪ್ರಥಮ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಪತ್ರಕರ್ತರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿ: ಸಿಂಗಲ್ಸ್ ನಲ್ಲಿ ಆದರ್ಶ್ ಪ್ರಥಮ, ಡಬಲ್ಸ್ ನಲ್ಲಿ ನವೀನ್ ಮತ್ತು ವಿಶ್ವ ಕುಂಬೂರು ಪ್ರಥಮ*

ಆಗಷ್ಟ್ 14, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ,ಆ.14 : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ‌ಮಹೋತ್ಸವ ಆಚರಣಾ ಸಮಿತಿ ಇವರ ಸಹಯೋಗದಲ್ಲಿ ಪತ್ರಕರ್ತರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿಯು, ಕುಶಾಲನಗರದ ಜಂಪ್ ಸ್ಮಾಷ್ ಬ್ಯಾಡ್ ಮಿಂಟನ್ ಅಕಾಡೆಮಿಯ ಕ್ರೀಡಾಂಗಣದಲ್ಲಿ ನಡೆಯಿತು.
ಪತ್ರಕರ್ತರ ಜಿಲ್ಲಾ ಮಟ್ಟದ ಶಟಲ್‌ ಬ್ಯಾಟ್ ಮಿಂಟನ್ ಪಂದ್ಯಾವಳಿಯ ಸಿಂಗಲ್ಸ್ ವಿಭಾಗದಲ್ಲಿ ಆದರ್ಶ್ ಅವರು ಪ್ರಥಮ ಸ್ಥಾನ‌ ಪದೆಡು, ಟ್ರೋಫಿ ಹಾಗೂ 5 ಸಾವಿರ ನಗದನ್ನು ಸ್ವೀಕರಿಸಿದರು. ಸಿಂಗಲ್ಸ್ ನಲ್ಲಿ ಲೋಕೇಶ್ ಕಾಟಲೇರಿಯವರು ದ್ವಿತೀಯ ಸ್ಥಾನ ಪಡೆದು, ಟ್ರೋಫಿ ಹಾಗೂ 3 ಸಾವಿರ ರೂ ನಗದನ್ನು ಸ್ವೀಕರಿಸಿದರು. ಸುಬ್ರಮಣಿಯವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು, ಟ್ರೋಫಿ ಹಾಗೂ 1 ಸಾವಿರ ನಗದನ್ನು ಪಡೆದುಕೊಂಡರು. ನಾಲ್ಕನೇ ಸ್ಥಾನ ಪಡೆದ ವಿನೋದ್ ಅವರು, ಟ್ರೋಫಿ ಹಾಗೂ 500  ರೂ‌ನಗದನ್ನು ಪಡೆದುಕೊಂಡರು.
ಡಬಲ್ಸ್‌‌ ನಲ್ಲಿ ನವೀನ್ ಹಾಗೂ ವಿಶ್ವ ಕುಂಬೂರು ಅವರು ಪ್ರಥಮ ಸ್ಥಾನವನ್ನು ಅಲಂಕರಿಸಿ, ಟ್ರೋಫಿ ಹಾಗೂ 5 ಸಾವಿರ ನಗದನ್ನು ಸ್ವೀಕರಿಸಿದರು. ಸುಬ್ರಮಣಿ ಹಾಗೂ‌ ಶಿವರಾಜ್ ಅವರು ದ್ವಿತೀಯ ಸ್ಥಾ‌‌ನ ಪಡೆದು, ಟ್ರೋಫಿ ಹಾಗೂ 3 ಸಾವಿರ ಟ್ರೋಫಿ ಸ್ವೀಕರಿಸಿದರು. ಲೋಕೇಶ್ ಹಾಗೂ ಸವಿತಾ ರೈ ಅವರು ತೃತೀಯ ಸ್ಥಾನ ಪಡೆದು, ಟ್ರೋಫಿ ಹಾಗೂ 1500  ರೂ ನಗದನ್ನು ಪಡೆದುಕೊಂಡರು.  ವಿನೋದ್.ಕೆ.ಎಂ ಹಾಗೂ ಕೆ.ಬಿ.ಶಂಶುದ್ಧೀನ್ ಅವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟು, ಟ್ರೋಫಿ ಹಾಗೂ 1 ಸಾವಿರ ನಗದನ್ನು ತಮ್ಮದಾಗಿಸಿಕೊಂಡರು.
ಸಿಂಗಲ್ಸ್ ವಿಭಾಗದಲ್ಲಿ ಕೊಡಗಿನ 24 ಪತ್ರಕರ್ತರು ಭಾಗವಹಿಸಿದ್ದರು. ನಾಲ್ಕು ಪೂಲ್ ಗಳಾಗಿ ಆಟಗಾರರನ್ನು ವಿಂಗಡಿಸಿ, ಲೀಗ್ ಮಾದರಿಯಲ್ಲಿ ಪಂದ್ಯಾವಳಿಯನ್ನು ನಡೆಸಲಾಯಿತು. ಡಬಲ್ಸ್ ನಲ್ಲಿ 24 ಕೊಡಗಿನ ಆಟಗಾರರು ಭಾಗವಹಿಸಿದ್ದರು. ನಾಲ್ಕು ಪೂಲ್ ಗಳಾಗಿ ಆಟಗಾರರನ್ನು ವಿಂಗಡಿಸಲಾಯಿತು. ಅಂತರಾಷ್ಟ್ರೀಯ ಶಟಲ್ ಬ್ಯಾಡ್ ಮಿಂಟನ್ ಆಟಗಾರ್ತಿ ಜ್ಯೋತಿ ಸೋಮಯ್ಯ ತಾತಪಂಡರವರು, ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ನಿಲೀಶ ಜೋಜೋ ಹಾಗೂ ದ್ರುವ್ ಅವರು, ಪಂದ್ಯಾವಳಿಯಲ್ಲಿ ಯಾವುದೇ ಗೊಂದಲಗಳಿಲ್ಲದೇ ತೀರ್ಪುಗಾರಿಕೆಯನ್ನು ನೀಡಿದರು.
ಉದ್ಘಾಟನೆ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ‌ಮಹೋತ್ಸವ ಆಚರಣಾ ಸಮಿತಿ ಇವರ ಸಹಯೋಗದಲ್ಲಿ ಕುಶಾಲನಗರದ ಜಂಪ್ ಸ್ಮಾಷ್ ಬ್ಯಾಡ್ ಮಿಂಟನ್ ಅಕಾಡೆಮಿಯ ಕ್ರೀಡಾಂಗಣದಲ್ಲಿ ನಡೆದ ಪತ್ರಕರ್ತರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿಯನ್ನು ಕೊಡಗು ಪ್ರೆಸ್ ಕ್ಲಬ್‌‌ ಅಧ್ಯಕ್ಷರಾದ ಎ.ಆರ್.ಕುಟ್ಟರವರು ನೆರವೇರಿಸಿದರು.
ಸಮಾರೋಪ ಸಮಾರಂಭ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ‌ಮಹೋತ್ಸವ ಆಚರಣಾ ಸಮಿತಿ ಇವರ ಸಹಯೋಗದಲ್ಲಿ ನಡೆದ ಪತ್ರಕರ್ತರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿಯ ಸಮಾರೋಪ ಸಮಾರಂಭವು ಕುಶಾಲನಗರದ ಜಂಪ್ ಸ್ಮಾಷ್ ಬ್ಯಾಡ್ ಮಿಂಟನ್ ಅಕಾಡೆಮಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಸುದ್ದಿಯ ಜಂಜಾಟದ ನಡುವೆ ಪತ್ರಕರ್ತರು ಶಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಇದು ಪತ್ರಕರ್ತರ ಸುದ್ದಿಯ ಒತ್ತಡವನ್ನು ಕಡಿಮೆ ಮಾಡುತ್ತದೆ‌ ಎಂದು ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ನುಡಿ‌ ನುಡಿದ ಪಂದ್ಯಾವಳಿಯ ಸಂಚಾಲಕ ಕೆ.ಬಿ.ಶಂಶುದ್ಧೀನ್, ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ದಾನಿಗಳಿಗೆ ಹಾಗೂ ಪಂದ್ಯಾವಳಿಯಲ್ಲಿ ಎಲ್ಲಾ ಪತ್ರಕರ್ತರಿಗೆ ಧನ್ಯವಾದಗಳನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೈಡ್ ಪ್ರಾಮರ್ಟೀಸ್ ಹಾಗೂ ಡೆವಲಪ್ಪರ್ಸ್ ನ‌ ಮಾಲೀಕರಾದ ಎಚ್.ಪಿ.ರಂಜನ್ ಮಾತನಾಡಿ, ಸದಾ ಸುದ್ದಿಯಲ್ಲಿ ನಿರತರಾಗಿರುವ ಪತ್ರಕರ್ತರು ಕ್ರೀಡೆಯಲ್ಲಿ‌ ತೊಗಗಿರುವುದು ಸಂತಸದ ವಿಷಯ ಎಂದರು.
ಅಂತರಾಷ್ಟ್ರೀಯ ಶಟಲ್ ಬ್ಯಾಡ್ ಮಿಂಟನ್ ಆಡಗಾರ್ತಿ ಜ್ಯೋತಿ ಸೋಮಯ್ಯ ತಾತಪಂಡ ಮಾತನಾಡಿ, ಆಟಗಾರರಿಗೆ ಕ್ರೀಡೆಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡದರು.
ಜಿಲ್ಲಾ ಸಂಘದ ಕ್ರೀಡಾ ಸಂಚಾಲಕರಾದ ಬಿ.ಜಿ.ಮಂಜುರವರು, ಆಟಗಾರರಿಗೆ ಹಾಗೂ ಆಯೋಕರಿಗೆ ಅಭಿನಂದಿಸಿದರು.
ಅಂತರಾಷ್ಟ್ರೀಯ ಶಟಲ್ ಬ್ಯಾಡ್ ಮಿಂಟನ್ ಆಟಗಾರ್ತಿ ಹಾಗೂ ತರಬೇತುದಾರರಾದ ಜ್ಯೋತಿ ಸೋಮಯ್ಯ ತಾತಪಂಡ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಪ್ರೈಡ್ ಪ್ರಾಪರ್ಟೀಸ್ ಆಂಡ್ ಡೆವಲಪರ್ಸ್ ನ ಮಾಲೀಕರಾದ ಎಚ್.ಪಿ.ರಂಜನ್ ಹಾಗೂ ಕಲಾವಿದರು ಹಾಗೂ ಚಲನಚಿತ್ರ ನಿರ್ದೇಶಕರಾದ ಗಯಾಜ಼್ ಕುಷಾಲ್ ಅವರಿಗೆ ಗೌರವ ಸಮರ್ಪಣೆ ನೀಡಲಾಯಿತು.
ನಂತರ ಬಹುಮಾನ‌ ವಿಜೇತರಿಗೆ ವೇದಿಕೆಯಲ್ಲಿ ಗಣ್ಯರು ಬಹುಮಾನ ವಿತರಿಸಿದರು. ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಸ್ವಾಗತಿಸಿದರು. ಪತ್ರಕರ್ತರಾದ ನಂಜುಂಡಸ್ವಾಮಿರವರು ನಿರೂಪಿಸಿದರು. ಶಿವರಾಜುರವರು ವಂದಿಸಿದರು.
ವೇದಿಕೆಯಲ್ಲಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಎ.ಆರ್.ಕುಟ್ಟಪ್ಪ, ಕೊಡಗು ಪ್ರೆಸ್ ಕ್ಪಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಕ್ರೀಡಾ ಸಂಚಾಲಕರಾದ ಸಂತೋಷ್ ರೈ, ಪತ್ರಕರ್ತ ಎಚ್.ಸಿ.ಜಯಪ್ರಕಾಶ್,‌ ಜಿಡಿಎಸ್ ಪ್ರಮುಖ ಮಹದೇವ್ ಇದ್ದರು.  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವನ್ಯಜೀವಿಗಳ ಮಾಹಿತಿ ಪಡೆದ ಶಾಸಕ ಡಾ.ಮಂತರ್ ಗೌಡ*

ಮಾರ್ಚ್ 9, 2026

*ಕಾಡಾನೆ ದಾಳಿಗೆ ಸಿಲುಕಿ ಗ್ರಾ.ಪಂ ಮಾಜಿ ಸದಸ್ಯೆ ಬಲಿ : ವಾಲ್ನೂರು ಗ್ರಾಮದಲ್ಲಿ ಘಟನೆ*

ಮಾರ್ಚ್ 9, 2026

*ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಸಿಎನ್‌ಸಿಯಿಂದ ಹಕ್ಕೊತ್ತಾಯ ಮಂಡನೆ*

ಮಾರ್ಚ್ 8, 2026

*ಕಾಡಾನೆ ದಾಳಿಗೆ ಸಿಲುಕಿ ಗ್ರಾ.ಪಂ ಮಾಜಿ ಸದಸ್ಯೆ ಬಲಿ : ವಾಲ್ನೂರು ಗ್ರಾಮದಲ್ಲಿ ಘಟನೆ*

ಮಾರ್ಚ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.9 : ಕಾಡಾನೆ ದಾಳಿಗೆ ಸಿಲುಕಿ ಗ್ರಾ.ಪಂ ಮಾಜಿ ಸದಸ್ಯರೊಬ್ಬರು ಮೃತಪಟ್ಟಿರುವ ಘಟನೆ ಕುಶಾಲನಗರ ತಾಲ್ಲೂಕಿನ…

*ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಸಿಎನ್‌ಸಿಯಿಂದ ಹಕ್ಕೊತ್ತಾಯ ಮಂಡನೆ*

ಮಾರ್ಚ್ 8, 2026

*ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಜಿಲ್ಲಾ ವೃತ್ತಿ ಮಾರ್ಗದರ್ಶನ ಘಟಕ ಸ್ಥಾಪನೆ ಕುರಿತ ಸಭೆ*

ಮಾರ್ಚ್ 8, 2026

*ಗೋಣಿಕೊಪ್ಪಲು : ಮಹಿಳೆಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಿ : ಶಾಸಕ ಎ.ಎಸ್.ಪೊನ್ನಣ್ಣ*

ಮಾರ್ಚ್ 8, 2026

*ಮಡಿಕೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಮಹಿಳೆಯರಿಗೆ ಆತ್ಮವಿಶ್ವಾಸ ಮತ್ತು ಸಾಮಾಜಿಕ ಬೆಂಬಲ ಅತ್ಯಗತ್ಯ : ಕವಯತ್ರಿ ಸ್ಮಿತಾ ಅಮೃತಾರಾಜ್*

ಮಾರ್ಚ್ 8, 2026

*ಬಾಳೆಲೆ : ರೂ. 27.23 ಕೋಟಿ ವೆಚ್ಚದ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ*

ಮಾರ್ಚ್ 7, 2026

*ಶ್ರೀಮಂಗಲದಲ್ಲಿ ಮಹಿಳಾ ದಿನಾಚರಣೆ : ಮಹಿಳಾ ಸಬಲೀಕರಣವು ಸರ್ಕಾರದ ಪ್ರಮುಖ ಆಶಯ : ಶಾಸಕ ಎ.ಎಸ್.ಪೊನ್ನಣ್ಣ*

ಮಾರ್ಚ್ 7, 2026

*ಮಾ.8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ*

ಮಾರ್ಚ್ 7, 2026

*ಮಾ.8 ರಂದು ಬಿಟ್ಟಂಗಾಲದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ*

ಮಾರ್ಚ್ 7, 2026

*ಕೊಡವ ಅಭಿವೃದ್ಧಿ ನಿಗಮ ಘೋಷಣೆ : ಯುಕೊ ಸಂಭ್ರಮಾಚರಣೆ : ಶಾಸಕ ಪೊನ್ನಣ್ಣ, ಮಂಜು ಚಿಣ್ಣಪ್ಪಗೆ ಸನ್ಮಾನ

ಮಾರ್ಚ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.